ಜಗಳೂರು:
ತಾಂತ್ರಿಕದೋಷ , ಜನತೆಯ ಪರಸ್ಪರ ಸಹಕಾರದ ಕೊರತೆಯಿಂದ ತುಂಗಾಭದ್ರಾನದಿಯು ತುಂಬಿ ಹರಿದರೂ ದಾವಣಗೆರೆ , ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ, ಬಿಳಿಚೋಡು, ಹಾಲೇಕಲ್ಲು ಸೇರಿದಂತೆ 22 ಕೆರೆಗಳಿಗೆ ಸಮರ್ಪಕವಾಗಿ ನೀರು ಬಾರದಿರುವುದಕ್ಕೆ ಸಿರಿಗೆರೆಯ ತರಳುಬಾಳು ಮಠದ ಡಾ||ಶಿವಮೂರ್ತಿ ಶಿವಾಚಾರ್ಯಮಹಾಸ್ವಾಮೀಜಿ ವಿಷಾಧ ವ್ಯಕ್ತ ಪಡಿಸಿದರು.
ತಾಲ್ಲೂಕಿನ ಮುಚ್ಚೂನೂರು ಗ್ರಾಮದ ಮರುಳಸಿದ್ದೇಶ್ವರ ದೇವಸ್ಥಾನದವರೆಗಿನ ರೂ.35 ಲಕ್ಷ ವೆಚ್ಚದ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಪ್ರಾಕೃತಿಕ ಸಮಸ್ಯೆ ಒಂದು ಕಡೆಯಾದರೇ, ಮನುಷ್ಯ ತಾನಾಗಿಯೆ ಸಮಸ್ಯೆ ಸೃಷ್ಠಿ ಮಾಡಿಕೊಳ್ಳುವುದು ಇಂದು ಕಡೆಯಾಗಿದೆ. ಮನುಷ್ಯನ ದುರಾಸೆಯಿಂದ ನಮ್ಮ ಕೆರೆಗಳು ನೀರು ಮೊದಲು ತುಂಬಲಿಎಂದು ವಾಲ್ ಒಡೆದು ತಿರುವುಕೊಳ್ಳುವುದು ಸಮಸ್ಯೆಯಾಗಿದೆ. ಈ ಸಂಬಂದ ಜಾಕ್ ವಾಲ್ ಒಂದರಲ್ಲಿ ಅ.30 ರಂದು ಸೂಕ್ತ ನಿರ್ಣಯ ಮಾಡಲು ನೀರಾವರಿ ಇಲಾಖೆಯ ಎಂ.ಡಿ., ಸಮಕ್ಷಮದಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ. ಇಲ್ಲಿ ಚರ್ಚೆ ಮಾಡಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದೆಂದು ಸ್ವಾಮೀಜಿ ಹೇಳಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ ಬಾರಿ ಮಳೆ ಬಂದು ತುಂಗಾಭದ್ರಾನದಿ ತುಂಬಿ ಹರಿದರೂ ಸಹ ತಾಂತ್ರಿಕ ದೋಷದಿಂದ ಪೈಪ್ಲೈನ್ ಒಡೆಯುವಿಕೆ, ವಾಲ್ ತಿರುವುದುರ ಸಮಸ್ಯೆಯಿಂದ ತುಂಗಾಭದ್ರಾ ನದಿಯಿಂದ ಏತನೀರಾವರಿಯ ಯೋಜನೆಯ ಮೂಲಕ 22 ಕೆರೆಗಳಿಗೆ ನೀರು ತುಂಬಿಸಲು ಆಗಿಲ್ಲ. ಸಿರಿಗೆರೆ ಶ್ರೀಗಳು ಇದನ್ನು ಬಗೆ ಹರಿಸುವ ನಿಟ್ಟನಲ್ಲಿ ಅ.30 ರಂದು ಜಾಕ್ವೆಲ್ ಒಂದರಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸಲಿದ್ದಾರೆ 22 ಕೆರೆಗಳ ವ್ಯಾಪ್ತಿಯ ರೈತರು ಸಹಕರಿಸಬೇಕು.
ಜಗಳೂರು ತಾಲ್ಲೂಕು ಬರಪಿಡಿತ ಪಟ್ಟಿಗೆ ತಡವಾಗಿ ಘೋಷಣೆಯಾಗಿದೆ. ಕೆಂದ್ರ ಸರ್ಕಾರ ಮೆಕ್ಕೇಜೋಳಕ್ಕೆ 1700 ಬೆಂಬಲ ಬೆಲೆ ಘೋಷಣೆಮಾಡಿದೆ . ರಾಜ್ಯ ಸರ್ಕಾರ ಮೆಕ್ಕೇಜೋಳ ಖರೀದಿ ಕೇಂದ್ರ ಸ್ಥಾಪಿಸಿ ಖರೀದಿ ಮಾಡಬೇಕೆಂದು ಅವರು ಆಗ್ರಹ ಪಡಿಸಿದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ಸಿರಿಗೆರೆ ಶ್ರೀಗಳ ಶ್ರಮದ ಫಲವಾಗಿ ಜಗಳೂರು ತಾಲ್ಲೂಕಿನ ಹಾಲೇಕಲ್ಲು, ತುಪ್ಪದಹಳ್ಳಿ , ಬಿಳಿಚೋಡು ಕೆರೆಗಳಿಗೆ ತಂಗಾಭದ್ರಾ ನದಿಯಿಂದ ನೀರು ಬರುವಂತಾಗಿದೆ. ತಾಂತ್ರಿಕ ದೋಷ, ಕೆಲವು ಭಾಗದ ಕೆರಗಳ ವ್ಯಾಪ್ತಿಯ ರೈತರು ವಾಲ್ ತಿರುವುದರಿಂದ ಮೂರು ಕೆರೆಗಳಿಗೆ ನೀರು ಬರುತ್ತಿಲ್ಲವೆಂದು ಸ್ವಾಮೀಜಿಗಳ ಗಮನಕ್ಕೆ ಈ ಭಾಗದ ರೈತರು ಮನವಿ ಮಾಡಿದೆವು.
ಈ ಸಂಬಂಧ 30 ರಂದು ಅಧಿಕಾರಿಗಳ ಸಭೆಯನ್ನು ಶ್ರೀಗಳು ಕರೆದು ಸಮಸ್ಯೆ ಇತ್ಯರ್ಥ ಪಡಿಸಲಿದ್ದಾರೆ. ತರಳು ಬಾಳು ಹುಣ್ಣಿಮೆ ಮಾಡಿದ ನೆನಪಿಗೆ ಸರ್ಕಾರದ ಮೇಲೆ ಒತ್ತಡ ಹಾಕಿ ಬರ ಪೀಡಿದ ಜಗಳೂರು ತಾಲ್ಲೂಕಿನ 52 ಕೆರೆಗಳಿಗೆ ಸರ್ಕಾರದಿಂದ 250 ಕೋಟಿ ಮಂಜೂರು ಮಾಡಿಸಿದ್ದು .ಡಿ.ಪಿ.ಆರ್ ಆಗಿದೆ.ನಾವು ಮಾಡದ ಕೆಲಸನ್ನು ಸಿರಿಗೆರೆ ಶ್ರೀಗಳ ಸರ್ಕಾರದ ಮೇಲೆ ಒತ್ತಡ ಏರಿ ಯೋಜನೆ ತರುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷರಾದ ರಷ್ಮಿರಾಜಪ್ಪ, ಸದಸ್ಯರುಗಳಾದ ಎಸ್.ಕೆ.ಮಂಜುನಾಥ್, ಉಮಾವೆಂಕಟೇಶ್,ಯರಬಳ್ಳಿ ಸಿದ್ದಪ್ಪ, 22 ಕೆರೆಗಳ ಏತಾನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ||ಮಂಜುನಾಥ್ಗೌಡ್ರು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ.ವಿ.ನಾಗಪ್ಪ, ಭೂಸೇನಾ ನಿಗಮದ ಅಧಿಕಾರಿ ವೀರಯ್ಯ, ಚಂದ್ರಶೇಖರ್, ನಿವೃತ್ತ ಉಪನ್ಯಾಸಕ ಸುಭಾಷ್ಚಂದ್ರಬೋಸ್, ತಾ.ಪಂ.ಸದಸ್ಯರು, ಪಟ್ಟ್ಟಣ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ,ಸದಸ್ಯರುಗಳು, ಗ್ರಾಮದ ಮುಖಂಡರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








