ಹಾವೇರಿ:
ಕೆಂಗೆಟ್ಟು ಹೋಗಿರುವ ಕುರುಬ ಸಮಾಜವನ್ನು ಜಾಗೃತಿ ಮೂಡಿಸಲು ಶೈಕ್ಷಣಿಕವಾಗಿ ಜಾಗೃತಿಗೊಳಿಸಲು ನಾಡಿನ ವಿವಿಧಡೆಯಲ್ಲಿ ಶ್ರೀಕನಕ ಗುರುಪೀಠದ ಶಾಖಾ ಮಠಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳು ತಿಳಿಸಿದರು.
ಶ್ರೀ ಕ್ಷೇತ್ರ ಮೈಲಾರದಲ್ಲಿ ಶ್ರೀಕನಕ ಗುರು ಪೀಠದ ಶಾಖಾ ಪೀಠದ ಭೂಮಿ ಪೂಜೆಯನ್ನು ನೆರೆವೇರಿಸಿ ಮಾತನಾಡುತ್ತಿದ್ದ ಶ್ರೀಗಳು ಶ್ರೀ ಕ್ಷೇತ್ರ ಮೈಲಾರದಲ್ಲಿ ಶಾಖಾ ಮಠ ಆರಂಭಿಸಲು 10 ವರ್ಷಗಳ ಹಿಂದೆ ಆಲೋಚಿಸಲಾಗಿತ್ತು. ಈಗ ಒಂದು ಎಕರೆ ಭೂಮಿಯಲ್ಲಿ ಶಾಖಾ ಮಠವನ್ನು ನಿರ್ಮಿಸಲಾಗುತ್ತಿದೆ. ಅದೇ ರೀತಿ ಗುತ್ತಲ ಹಾಗೂ ಮೈಲಾರ ರಸ್ತೆಗೆ ಹೊಂದಿಕೊಂಡಿರುವಂತೆ 07 ಎಕರೆ ಜಮೀನು ಇದ್ದು, ಅಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಈಗ ನಿರ್ಮಿಸಲಾಗುತ್ತಿರುವ ಶಾಖಾ ಮಠವು ಈ ವರ್ಷದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಒಳಗೆ ತೀರ್ಮಾನಿಸಲಾಗಿದೆ ಎಂದು ಶ್ರೀಗಳು ನುಡಿದರು.
ಈಗ ಕಾಲವು ಬದಲಾಗಿದೆ ಶಿಷ್ಯರಿದ್ದಕಡೆ ಗುರುಗಳು ಹೋಗಬೇಕಾಗಿದೆ ಹಾಗಾಗಿ ಶ್ರೀ ಕ್ಷೇತ್ರ ಎಲ್ಲಮ್ಮನ ಗುಡ್ಡ, ಉಡುಪಿ, ತಿರುಪತಿ, ಚಿಂಚಲಿಯ ಮಾಯಮ್ಮ ಸೇರಿದಂತೆ ವಿವಿಧಡೆ ಶಾಖಾ ಮಠವನ್ನು ಆರಂಭಿಸಿ ಕುರುಬ ಸಮುದಾಯಕ್ಕೆ ಧಾರ್ಮಿಕ ಸಂಸ್ಕಾರ ನೀಡುವುದರ ಜೊತೆಗೆ ಶೈಕ್ಷಣಿಕವಾಗಿ ಜಾಗೃತಿಗೊಳಿಸಲು ಶ್ರೀ ಪೀಠವು ತೀರ್ಮಾನಿಸಿದೆ.
ಈ ಶಾಖಾ ಮಠದ ನಿರ್ಮಾಣಕ್ಕೆ ಸರ್ಕಾರದ ಬಳಿ ಯಾವುದೇ ಅನುದಾನ ಪಡೆಯುವುದಿಲ್ಲ, ಭಕ್ತರು ನೀಡುವ ಸಹಾಯಧನದಿಂದಲೇ ಶಾಖಾಮಠ ನಿರ್ಮಿಸಲಾಗುವುದು. ಈಗಾಗಲೇ ನಿರ್ಮಾಣ ಕಾರ್ಯಕ್ಕೆ ಅಗತ್ಯ ಸಾಮಾಗ್ರಿಗಳನ್ನು ಭಕ್ತರು ನೀಡಿದ್ದಾರೆ. ಅತೀ ಶೀಘ್ರದಲ್ಲಿ ಕಾಮಗಾರಿಯು ಆರಂಭವಾಗಲಿದೆ ಎಂದರು.
ಮೈಲಾರದಲ್ಲಿ ನಿರ್ಮಿಸಲಾಗುತ್ತಿರುವ ಶಾಖಾ ಮಠದಿಂದ ಕಾಗಿನೆಲೆ ಪೀಠವು ಮೈಲಾರಲಿಂಗೇಶ್ವರನ ದೇವಸ್ಥಾನವನ್ನು ಅತೀಕ್ರಮಣ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆಂದು ಕೆಲವರು ಆರೋಪಿಸಿದ್ದಾರೆ. ಆದರೆ ಮೈಲಾರಲಿಂಗೇಶ್ವರ ದೇವಾಲಯವು ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ್ದು, ಕಾಗಿನೆಲೆ ಕನಕ ಗುರು ಪೀಠವು ಆಡಳಿತ ಮಂಡಳಿಗೆ ಸಂಬಂದಿಸಿದ್ದು, ಹಾಗಾಗಿ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೂ, ಕಾಗಿನೆಲೆ ಕನಕ ಗುರು ಪೀಠಕ್ಕೂ ಯಾವುದೇ ಸಂಬಂಧವಿಲ್ಲ. ಗುರು ಪೀಠವು ಸಮುದಾಯದ ಪ್ರಗತಿಗಾಗಿ ಮಾತ್ರ, ಶಾಖಾಮಠವು ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.
ಭೂಮಿ ಪೂಜೆ ನೆರೆವೇರಿಸಿದ ಅರಣ್ಯ ಸಚಿವ ಆರ್.ಶಂಕರ್ ಮಾತನಾಡಿ, ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾಖಾ ಮಠದಿಂದ ಕುರುಬ ಸಮುದಾಯವು ಧಾರ್ಮಿಕ ಸಂಸ್ಕಾರ ಪಡೆಯುದರೊಂದಿಗೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಜಾಗೃತಿಗಾಗಿ ಕೇಂದ್ರ ಸ್ಥಳವಾಗಲೆಂದು ತಿಳಿಸಿದ ಅವರು ಶ್ರೀ ಪೀಠದ ಕಟ್ಟಡಕ್ಕೆ 10 ಲಕ್ಷ ರೂ. ತಾವು ನೀಡುವುದಾಗಿ ಘೋಷಿಣೆ ಮಾಡಿದರು.
ಸಮಾರಂಭದಲ್ಲಿ ಕಾಗಿನೆಲೆಯ ಶಾಖಾ ಮಠದ ಸ್ವಾಮಿಗಳಾದ ಈಶ್ವನಾಂದ ಸ್ವಾಮಿಜಿಗಳು, ಶಿವನಾಂದ ಪುರಿ ಸ್ವಾಮಿಜಿಗಳು, ಲಿಂಗನಾಯಕನ ಹಳ್ಳಿಯ ಶ್ರೀ ಚನ್ನವೀರ ಸ್ವಾಮಿಜಿಗಳು ಸಾನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಕಾರ್ಣಿಕ ನುಡಿಯುವ ಗೊರವಪ್ಪ ರಾಮಣ್ಣ, ಪೀಠದ ಧರ್ಮದರ್ಶಿ ಎಸ್.ಎಪ್.ಗಾಜಿಗೌಡರ, ಹಾಲಪ್ಪನವರ, ಹರಿಹರ ಶಾಸಕ ರಾಮಪ್ಪ, ಕನಕ ಗುರುಪೀಠದ ಆಡಳಿತ ಅಧಿಕಾರಿ ಬಿ.ಜಿ.ಗೋವಿಂದಪ್ಪ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಮೈಸೂರ ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ಹನುಂತಪ್ಪ ಕಾಲುವೆ, ಬಳ್ಳಾರಿ ಜಿಲ್ಲೆ ಕುರುಬರ ಸಂಘದ ಅಧ್ಯಕ್ಷ ಬೀರಪ್ಪ, ಹಾಲಪ್ಪ ಶಿವನಗೌಡರ, ಸೋಮಶೇಖರ ಮರಡಿ ಹಾಗೂ ಬಳ್ಳಾರಿ, ಹಾವೇರಿ ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಮತ್ತು ಸಮಾಜದ ಹಿರಿಯ ಮುಖಂಡರಗಳು ಪಾಲ್ಗೊಂಡಿದ್ದರು.