ದೆಹಲಿಯಲ್ಲಿ ಉಸಿರಾಡುವುದು ಕಷ್ಟ….!!

ನವದೆಹಲಿ:
        ದೀಪಾವಳಿಗೂ ಮುನ್ನವೇ ದೇಶದ ರಾಜಧಾನಿಯ ವಾಯುಮಾಲಿನ್ಯ ಮಿತಿ ಮೀರಿದ್ದು ವಾಯು ಗುಣಮಟ್ಟ ತೀರ ಹಾಳಾಗಿ ಹೊಗಿದೆ . ವಾಯು ಗುಣಮಟ್ಟ ಮತ್ತು ಹವಾಮಾನ ಕೇಂದ್ರ(ಎಸ್ಎಎಫ್ಆರ್) ಈ ಭಯಾನಕ ವರದಿಯನ್ನು ಬಿತ್ತರಿಸಿದೆ ಮಂಗಳವಾರ ಸೆಂಟರ್-ರನ್ ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಇಂಡೆಕ್ಸ್ (ಎಕ್ಯೂಐ) ಬಿಡುಗಡೆಗೊಳಿಸಿದ್ದು ಇದರಲ್ಲಿ ದೆಹಲಿಯ ಕೆಲ ಭಾಗಗಳು ಉಸಿರಾಟಕ್ಕೂ ಸಹ ಅಪಾಯಕಾರಿ ಮಟ್ಟ ಮೀರಿರುವುದನ್ನು ತಿಳಿಸಿದೆ .
       ದೆಹಲಿಯ ಎಕ್ಯೂಐ 449ಕ್ಕೆ ತಲುಪಿದೆ ಚಾಂದಿನಿ ಚೌಕ್ ನ ಸುತ್ತಲಿನ ಪ್ರದೇಶದಲ್ಲಿ ಪಿಎಂ 10ರ ಮಟ್ಟದ ವಾಯು ಗುಣಮಟ್ಟವಿದ್ದು 437 ಎಕ್ಯೂಐ ಹೊಂದಿದೆ . ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್  3 ಮತ್ತು ದೆಹಲಿ ಯೂನಿವರ್ಸಿಟಿ ಪ್ರದೇಶಗಳಲ್ಲಿ 425, 470 ಹಾಗೂ 396 ಎಕ್ಯೂಐ ದಾಖಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link