ವಿದ್ಯಾರ್ಥಿಗಳಲ್ಲಿ ದೇಶದ ಸಂಸ್ಕೃತಿ ನಾಡಿನ ಕಲೆ ಉಳಿಯಬೇಕು

ಹಗರಿಬೊಮ್ಮನಹಳ್ಳಿ:

      ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕದ ಶಿಕ್ಷಣದೊಂದಿಗೆ ಇತರೆ ಚಟುವಟಿಕೆಗಳನ್ನು ಮೈಗೂಡಿಸುವಂತ ವಾತವರಣ ನಿಮಾರ್ಣವಾಗಬೇಕಿದೆ ಎಂದು ಶಾಸಕ ಎಸ್.ಭೀಮಾನಾಯ್ಕ್ ಅಭಿಪ್ರಾಯಪಟ್ಟರು.

         ಅವರು ಪಟ್ಟಣದ ಆದರ್ಶ ವಿದ್ಯಾಲಯದ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಶಿಕ್ಷಕರು ಮತ್ತು ಪಾಲಕರ ಶ್ರಮದಿಂದ ಹೊರ ಹೊಮ್ಮತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಸಾಂಸ್ಕøತಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಅವುಗಳನ್ನು ಮೈಗೂಡಿಸಿಕೊಂಡು, ದೇಶದ ಸಂಸ್ಕøತಿ ಮತ್ತು ನಾಡಿನ ಕಲೆ ಉಳಿಸಿಕೊಂಡು ಹೋಗಬೇಕಾಗಿದೆ ಎಂದ ಅವರು, ತಾಲೂಕಿನಲ್ಲಿ ಇನ್ನಷ್ಟು ಉತ್ತಮ ಗುಣಮಟ್ಟದಿಂದ ಕೂಡಿ ಒಳ್ಳೆಯ ಫಲಿತಾಂಶವನ್ನು ನಾನು ನಿರೀಕ್ಷಿಸುತ್ತೇನೆ, ಇದಕ್ಕೆ ಕ್ಷೇತ್ರದ ಶಾಸಕನಾಗಿ ನನ್ನಿಂದ ಏನು ಸಹಕಾರ ಬೇಕು ಕೇಳಿ ಪಡೆಯಿರಿ ಎಂದು ತಿಳಿಸಿದರು. ಪ್ರತಿಭಾ ಕಾರಂಜಿಯಿಂದ ತಾಲೂಕಿಗೂ, ಶಾಲೆಗೂ ಮತ್ತು ಗ್ರಾಮಕ್ಕೂ ಕಿರ್ತಿತನ್ನಿ ಎಂದು ಶುಭಕೋರಿದರು.

          ಅನೇಕ ಸರ್ಕಾರಗಳನ್ನು ನಾನು ಕಂಡಿದ್ದೇನೆ ಆದರೆ, ಶಿಕ್ಷಣ ಅಭಿವೃದ್ಧಿಗಾಗಿ ಅತ್ಯಂತ ಕಾಳಜಿ ವಹಿಸಿ ಶ್ರಮಿಸಿದ ಮುಖ್ಯಮಂತ್ರಿ ಎಂದರೆ ಅದು ಸಿದ್ಧರಾಮಯ್ಯನವರಾಗಿದ್ದಾರೆ. ಸಾಕಷ್ಟು ಭಾಗ್ಯಗಳ ಸುರಿಮಳೆಯಲ್ಲಿ ಇಂದಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತಿದ್ದಾರೆ ಎಂದರು.

          ಅಲ್ಲದೆ, 371 ಜೆ.ಅಡಿಯಲ್ಲಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ 3ರಿಂದ 4ಕೋಟಿ ರೂ.ಗಳ ಅನುದಾನ ಪ್ರತಿವರ್ಷ ನೀಡಲಾಗುತ್ತಿದೆ. ಅಲ್ಲದೆ ತಾಲೂಕಿನ 24 ಪ್ರೌಢಶಾಲೆಗಳಿಗೂ ಶುದ್ಧ ಕುಡಿಯುವ ನೀರಿನ ಯೋಜನೆ ಅಳವಢಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಘಟಕಗಳ ಕಾರ್ಯ ಆರಂಭವಾಗಲಿವೆ ಎಂದರು. 162 ಪ್ರಾಥಮಿಕ ಶಾಲೆಗಳಿಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಪ್ರಯತ್ನ ನಡೆದಿದೆ. 1.5ಲಕ್ಷ ರೂ.ದಂತೆ 2.41ಕೋಟಿ ರೂ.ಗಳ ವೆಚ್ಚ ಆಗಲಿದೆ ಎಂದರು.
ಬಿ.ಇ.ಒ. ಎಂ.ಶೇಖರಪ್ಪ ಹೊರಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾ ಕಾರಂಜಿ ಎನ್ನುವುದು ಒಂದು ಸ್ಪರ್ಧೆ ಇದರಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದು ಮುಖ್ಯವಾಗಿರುತ್ತೆ. ಪ್ರತಿಯಂದು ಹಂತದಲ್ಲೂ ಸ್ಪರ್ಧಿಸುತ್ತ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದರು.ಪ್ರತಿಭಾ ಕಾರಂಜಿಯಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ 1525 ವಿದ್ಯಾರ್ಥೀಗಳು ಪಾಲ್ಗೊಂಡಿದ್ದರು.

          ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷೆ ನಾಗಮ್ಮ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಕೆ.ಸುಶೀಲಮ್ಮ, ಜಿ.ಪಂ.ಮಾಜಿ ಸದಸ್ಯರಾದ ಹೆಗ್ಡಾಳ್ ರಾಮಣ್ಣ, ಅಕ್ಕಿತೋಟೇಶ್, ಪುರಸಭೆ ಸದಸ್ಯರಾದ ಹುಡೇದ್ ಗುರುಬಸವರಾಜ್, ಡಿಶ್ ಮಂಜುನಾಥ, ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್, ಎಸ್.ಸಿ.ಎಸ್.ಟಿ.ಸಂಘದ ತಾಲೂಕು ಅಧ್ಯಕ್ಷ ಟಿ.ಸೋಮಶೇಖರ್, ಎಸ್.ಸಿ.ಎಸ್.ಟಿ. ಶಿಕ್ಷಕರ ಜಿಲ್ಲಾಧ್ಯಕ್ಷ ರೆಡ್ಡಿನಾಯ್ಕ್, ಮಂಜುನಾಥ, ಶಂಭುನಾಥ, ಬಿಸಿಯೂಟದ ಅಧಿಕಾರಿ ರವಿನಾಯ್ಕ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮಾಲವಿ ಸುರೇಶ್, ಪದವಿದರ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಅಲಿಗೇರಿ, ಎನ್.ಪಿ.ಎಸ್. ಗೋಣಿಬಸಪ್ಪ, ಶಿಕ್ಷಣ ಸಂಯೋಜಕ ಮುಸ್ತಕ್ ಅಹಮದ್ ಮತ್ತಿತರರು ಇದ್ದರು.
ಬಿ.ಆರ್.ಪಿ. ಗೋಣಿಬಸಪ್ಪ ಹಾಗೂ ಶಿಕ್ಷಕರ ಸಂಘದ ಕಾರ್ಯದರ್ಶಿ ಕೊಟ್ರೇಶ್ ನಿರ್ವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link