ಕಳ್ಳತನ ಮಾಡಲು ಹೋಗಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಕಾಮುಕ

ಬೆಂಗಳೂರು,

ಕಳ್ಳತನ ಮಾಡಲು ಹೋಗಿ ಖಾಸಗಿ ಕಂಪನಿಯೊಂದರಲ್ಲಿ ಲೆಕ್ಕಪರಿಶೋಧಕಿಯಾಗಿದ್ದ ಮಹಿಳೆಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಕಾಮುಕ ದೇವರಾಜ್ ಹಿಂದೆ ಇದೇ ರೀತಿಯ ಕೃತ್ಯದಲ್ಲಿ ಭಾಗಿಯಾಗಿರುವುದು ಬಸವೇಶ್ವರನಗರ ಪೊಲೀಸರ ವಿಚಾರಣೆಯಲ್ಲಿ ಪತ್ತೆಯಾಗಿದೆ.

ಕುರುಬರಹಳ್ಳಿಯ ಜೆಸಿನಗರದ ಆರೋಪಿ ದೇವರಾಜ್(21) ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಗಾಜನ್ನು ಒಡೆದಿದ್ದಕ್ಕೆ ನಂದಿನಿ ಲೇಔಟ್ ಹಾಗೂ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಮೂರು ತಿಂಗಳ ಹಿಂದೆ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಜೈಲು ಪಾಲಾಗಿದ್ದ ಎಂದು ಡಿಸಿಪಿ ಚೇತನ್‍ಸಿಂಗ್ ತಿಳಿಸಿದ್ದಾರೆ.

ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿ ಜೈಲು ಸೇರಿದ್ದ ಆರೋಪಿಯು ಜಾಮೀನಿನ ಮೇಲೆ ಹೊರಬಂದು ಕಳೆದ ನವೆಂಬರ್ 8ರಂದು ರಾತ್ರಿ 9.30ರ ವೇಳೆ ಕಳ್ಳತನ ಮಾಡಲು ಬಸವೇಶ್ವರನಗರಕ್ಕೆ ಹೋಗಿ ನಡೆದುಕೊಂಡು ಹೋಗುತ್ತಿದ್ದ ಉತ್ತರ ಭಾರತೀಯ ಮೂಲದ ಲೆಕ್ಕಪರಿಶೋಧಕಿಯಾಗಿದ್ದ ಮಹಿಳೆಯನ್ನು ಹಿಂಬಾಲಿಸಿ ಆಕೆ ಮನೆಯ ಒಳ ಹೋಗುತ್ತಲೇ ಕಾಲಿಂಗ್ ಬೆಲ್ ಒತ್ತಿದ್ದಾನೆ. ಮಹಿಳೆ ಬಾಗಿಲು ತೆರೆಯುತ್ತಿದ್ದಂತೆ ದೇವರಾಜ್ ಆಕೆಯನ್ನು ತಳ್ಳಿಕೊಂಡು ಹೋಗಿ ಬಲವಂತವಾಗಿ ಮನೆಗೆ ಪ್ರವೇಶಿಸಿದ್ದಾನೆ.ಅಲ್ಲದೇ ಮಹಿಳೆಯ ಕೈ ಕಚ್ಚಿ, ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.

ಕೃತ್ಯ ಎಸಗಿದ ಬಳಿಕ ದೇವರಾಜ್ ಮನೆಯಿಂದ ರಾತ್ರಿ ಸುಮಾರು 10.49ಕ್ಕೆ ಮನೆಯಿಂದ ಓಡಿ ಹೋಗುತ್ತಿದ್ದ ದೃಶ್ಯಗಳು ಮಹಿಳೆಯ ಮನೆಯ ಸಮೀಪ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮಾರದಲ್ಲಿ ದಾಖಲಾಗಿದ್ದವು ಅದನ್ನು ಪರಿಶೀಲಿಸಿ ಹಳೆಯ ಆರೋಪಿಗಳ ಮಾಹಿತಿ ಕಲೆಹಾಕಿದಾಗ ಕೃತ್ಯವೆಸಗಿರುವುದು ದೇವರಾಜ್ ಎನ್ನವುದು ಕಂಡುಬಂದಿದೆ.ಕೂಡಲೇ ಕಾರ್ಯಾಚರಣೆ ಕೈಗೊಂಡ ಪೊಲೀಸರು ಕುರುಬರಹಳ್ಳಿಯ ಜೆ.ಸಿ ನಗರದ ನಿವಾಸಿಯಾಗಿರುವ ದೇವರಾಜ್‍ನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ದೇವರಾಜ್ ಜೆ.ಸಿ ನಗರದಲ್ಲಿ ತನ್ನ ಪೊಷಕರ ಜೊತೆ ವಾಸವಾಗಿದ್ದು, ರಾಜಾಜಿನಗರದಲ್ಲಿ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link