ಹೂವಿನಹಡಗಲಿ :
ತಾಲೂಕಿನ ಸೋಗಿ ಗ್ರಾಮದ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆ.ಧನಲಕ್ಷ್ಮಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಾ.ಪಂ.ಇ.ಓ. ಸೋಮಶೇಖರ ತಿಳಿಸಿದ್ದಾರೆ.
ಅವಿಶ್ವಾಸ ಮಂಡನೆಯಿಂದ ತೆರವುಗೊಂಡಿದ್ದ ಅಧ್ಯಕ್ಷ ಸ್ಥಾನಕ್ಕೆ ಉಚ್ಛ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಚುನಾವಣಾ ದಿನಾಂಕವನ್ನು ನಿಗಧಿಗೊಳಿಸಲಾಗಿತ್ತು. ಇಂದು ನಡೆದ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಜೆ.ಧನಲಕ್ಷ್ಮಿ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಆಯ್ಕೆಯ ಸಂದರ್ಭದಲ್ಲಿ ಒಟ್ಟು 21 ಜನ ಸದಸ್ಯರ ಬಲ ಇರುವ ಗ್ರಾಮ ಪಂಚಾಯಿತಿಯಲ್ಲಿ 16 ಜನ ಸದಸ್ಯರು ಜೆ. ಧನಲಕ್ಷ್ಮಿ ಇವರ ಅವಿರೋಧ ಆಯ್ಕೆಗೆ ಉಪಸ್ಥಿತರಿದ್ದು ಸಹಮತ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷರನ್ನು ಕಾಂಗ್ರೆಸ್ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಐಗೋಳ್ ಚಿದಾನಂದ, ತಾ.ಪಂ. ಸದಸ್ಯ ಎಸ್.ಹಾಲೇಶ, ತಾ.ಪಂ. ಸ್ಥಾಯಿಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಚೆನ್ನಾನಾಯ್ಕ, ಮುಖಂಡರಾದ ಕುರಿ ದೇವೀರಪ್ಪ, ಮಲ್ಲಿನಾಥ, ಬಿ.ಶಾಂತೇಶ, ಟೀಕ್ಯಾನಾಯ್ಕ, ವಾಗೀಶ ಸೇರಿದಂತೆ ಹಲವರು ಅಭಿನಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ