ದಾರಿ ದೀಪ ಮಕ್ಕಳ ಚಲನ ಚಿತ್ರ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ.

ಹೊಳಲ್ಕೆರೆ:

       ಚನ್ನಕೇಶವ ಚಲನ ಚಿತ್ರ ನಿರ್ಮಾಪಕರ ವತಿಯಿಂದ ಚೊಚ್ಚಲು ಚಲನಚಿತ್ರ ದಾರಿದೀಪ ಎಂಬ ಮಕ್ಕಳ ಚಲನಚಿತ್ರದ ಮೊಹರ್ತ ನಗರದ ಐತಿಹಾಸಿಕ ಶ್ರೀ ಪ್ರಸನ್ನ ಗಣಪತಿ ಸಾನಿಧ್ಯದಲ್ಲಿ ಗುರುವಾರ ವಿಧಿವಿಧಾನಗಳಿಂದ ಪೂಜಾ ಕಾರ್ಯಕ್ರಮ ನಡೆಯಿತು.

      ಈ ಮಕ್ಕಳ ಚಲನ ಚಿತ್ರದ ನಿರ್ದೇಶಕರಾಗಿ ಹೇಮಂತ ನಾಯ್ಕ್ (ಹೊಳಲ್ಕೆರೆ) ಇವರು ತಮ್ಮ ಚಿತ್ರ ತಂಡದೊಂದಿಗೆ ಆಗಮಿಸಿ ಪೂರ್ವಬಾವಿಯಾಗಿ ಚಲನಚಿತ್ರ ಚಿತ್ರೀಕರಣವನ್ನು ಹಮ್ಮಿಕೊಂಡರು.

        ಹೇಮಂತ ಕುಮಾರ್ ಈಗಾಗಲೆ 5 ಚಲನಚಿತ್ರಗಳನ್ನು ನಿರ್ದೇಶಿಸಿ ಅನುಭವಿಗಳಾಗಿದ್ದಾರೆ. ಇವರ ಉದ್ದೇಶ ಗ್ರಾಮಾಂತರ ಪ್ರದೇಶದ ಬಡ ಮಕ್ಕಳ ಶಿಕ್ಷಣಕ್ಕೆ ಯಾವ ರೀತಿ ಭವಿಷ್ಯದ ಬುನಾದಿಯನ್ನು ಮಕ್ಕಳ ಪೋಷಕರು ಕೈಗೊಳ್ಳಬೇಕು ಜೊತೆಗೆ ಸರ್ಕಾರ ನೀಡುವ ಎಲ್ಲಾ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಈ ಮಕ್ಕಳ ಚಲನಚಿತ್ರವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ.
ಈ ಚಿತ್ರ ಹೊಳಲ್ಕೆರೆ ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅದರಲ್ಲೂ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಚಿತ್ರಿಕರಣ ಮಾಡಲು ಈಗಾಗಲೆ ಕಾರ್ಯ ಪ್ರವೃತ್ತರಾಗಿದ್ದಾರೆ. ಬಹುತೇಕ ಈ ಚಿತ್ರಿಕರಣದಲ್ಲಿ ಹೊಳಲ್ಕೆರೆಯ ಪ್ರಾಥಮಿಕ ಶಾಲಾ ಮಕ್ಕಳೇ ಹೆಚ್ಚು ಭಾಗವಹಿಸಿದ್ದಾರೆ.

       ಸರ್ಕಾರ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಜೊತೆಗೆ ಆರ್.ಟಿ.ಇ ಯೋಜನೆಯಡಿಯಲ್ಲಿ ಶೇ.25 ರಷ್ಟು ಮಕ್ಕಳ್ಳು ಸರ್ಕಾರ ನೀಡುವ ಆರ್ಥಿಕ ಸಹಾಯವನ್ನು ಯಾವ ರೀತಿ ಸದುಪಯೋಗ ಮಾಡಿಕೊಂಡು ಮುಂದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವ ಗುರಿಯಿಂದ ಬಡ ಮಕ್ಕಳು ಸಮಾಜದಲ್ಲಿ ಸುಸಂಕೃತ, ಸಂಸ್ಕಾರಿತ ಪ್ರಜೆಗಳಾಗಿ ಸಮಾಜ ಸೇವೆ, ದೇಶ ಸೇವೆ ಹೀಗೆ ನಿರ್ವಹಿಸಬೇಕು ಮತ್ತು ಪರಿಸರ ಸ್ವಚ್ಚತೆ, ಆರೋಗ್ಯ, ದೇಶ ಸೇವೆ ಬಗ್ಗೆ ಈ ಚಿತ್ರದಲ್ಲಿ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ ಎಂದು ನಿರ್ದೇಶಕ ಹೇಮಂತ್ ಕುಮಾರ್ ನಾಯ್ಕ್ ಪತ್ರಕರ್ತರಿಗೆ ವ್ಯಕ್ತಪಡಿಸಿದರು.

       ಈ ಕಾರ್ಯಕ್ರಮದಲ್ಲಿ ಚಲನಚಿತ್ರ ಮುಖ್ಯ ನಿರ್ಮಾಪಕಿ ತನುಜ ಎಂ. ಮತ್ತು ಸಹ ನಿರ್ಮಾಪಕರಾದ ಡಿ.ಸಿ.ಮೋಹನ್, ಹಾಗೂ ತುಪ್ಪದಹಳ್ಳಿ ಪ್ರಕಾಶ್, ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜ್, ಚಿತ್ರಕಥೆ ರೂಪಿಸಿರುವ ಜಿ.ಸಿ.ಕೇಶವಮೂರ್ತಿ, ಸಂಭಾಷಣೆಕಾರರಾದ ಆರ್.ಎಸ್.ತಿಮ್ಮಯ್ಯ, ಉಷಿ, ಸಂಗೀತ ರಾಜ ಭಾಸ್ಕರ್, ಛಾಯ ಗ್ರಾಹಕ ರಮೇಶ್ ಕೋಯರಾ, ಪತ್ರಿಕಾ ಪ್ರಚಾರಕ ಯತೀರಾಜ್ ಮುಂತಾದವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link