ಯುವತಿಗೆ ಮೋಸ ಮಾಡಿದ ಪಾಪಿಗೆ 11 ವರ್ಷ ಜೈಲು

ಬೆಂಗಳೂರು

       ಆಧಾರ್ ಕಾರ್ಡ್ ಮಾಡಿಸಲು ಬಂದಿದ್ದ ಯುವತಿಯನ್ನು ಪರಿಚಯ ಮಾಡಿಕೊಂಡು ಆಕೆಯ ಮೇಲೆ ಅತ್ಯಾಚಾರ ವೆಸಗಿ ವಿವಾಹಕ್ಕೆ ನಿರಾಕರಿಸಿದ ಯುವಕನಿಗೆ ನಗರದ ಸಿಸಿಹೆಚ್ ನ್ಯಾಯಾಲಯವು 11 ವರ್ಷ ಕಠಿಣ ಕಾರಾಗೃಹ ಶಿಕ್ಷೆ 12 ಸಾವಿರ ದಂಡ ವಿಧಿಸಿದೆ.

       ಆರೋಪಿ ವಿದ್ಯಾನಗರದ ಲೇಪಾಕ್ಷಿ (27)ಗೆ 71 ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಮೂರ್ತಿಗಳು 11 ವರ್ಷ ಕಠಿಣ ಕಾರಾಗೃಹ ಶಿಕ್ಷೆ 12 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

        ಪೀಣ್ಯದ ಸೈಬರ್ ಸೆಂಟರ್‍ನಲ್ಲಿ ಕೆಲಸ ಮಾಡುತ್ತಿದ್ದ ಲೇಪಾಕ್ಷಿ ಆಧಾರ್‍ಕಾರ್ಡ್ ಮಾಡಿಸಲು ಬಂದಿದ್ದ 25 ವರ್ಷದ ಯುವತಿಯನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿ ಆಕೆಯ ಜೊತೆ ಸಹಜೀವನ ನಡೆಸುತ್ತಾ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.

        ಜಾತಿ ಕಾರಣಕ್ಕೆ ವಿವಾಹವಾಗಲು ಒಪ್ಪದ ಲೇಪಾಕ್ಷಿ ಮೇಲೆ ಅತ್ಯಾಚಾರದ ದೂರು ದಾಖಲಾಗತ್ತು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷರೋಪಪಟ್ಟಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿಗಳು ಈ ತೀರ್ಪು ನೀಡಿದ್ದಾರೆ .ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಕೆ.ಜೆ. ಮೀನಾಕುಮಾರಿ ರವರು ವಾದ ಮಂಡಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link