ಬ್ಯಾಡಗಿ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ

ಬ್ಯಾಡಗಿ:

         ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಅಭದ್ರಗೊಳಿಸುತ್ತಿರುವ ವಿರೋಧಿ ಬಿಜೆಪಿಗೆ ಬರುವ ಎಲ್ಲ ಚುನಾವಣೆಗಳಲ್ಲಿ ತಕ್ಕಪಾಠವನ್ನು ಕಲಿಸುವಂತಹ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಂದಾಗಬೇಕಾಗಿದೆ ಎಂದು ಮಾಜಿ ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಬ್ಯಾಡಗಿ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.

          ಕಳೆದ ಚುನಾವಣೆಗಳಲ್ಲಿನ ಸೋಲು ನಮ್ಮೆಲ್ಲರಿಗೂ ಪಾಠವಾಗಬೇಕು ವಿಧಾನಸಭೆಯಲ್ಲಿ ಪೂರ್ಣ ಪ್ರಮಾಣದ ಅಧಿಕಾರ ಸಿಗದಿರುವ ಕಾರಣ ಜಾತ್ಯಾತೀತ ಶಕ್ತಿಗಳು ಒಂದಾಗಬೇಕೆಂಬ ಏಕೈಕ ಕಾರಣಕ್ಕೆ ಜೆಡಿಎಸ್ ಜೊತೆ ಕೈಜೋಡಿಸಬೇಕಾಯಿತು, ಮತದಾರನ ತೀರ್ಪನ್ನು ಸ್ವಾಗತಿಸೋಣ ಆದರೆ ಕಾರ್ಯಕರ್ತರು ಜನರ ಕೆಲಸವನ್ನು ಮಾಡುವಲ್ಲಿ ಮುಂದಾಗಬೇಕು ಅಂದಾಗ ಮಾತ್ರ ಬರುವ ಚುನಾವಣೆಗಳಲ್ಲಿ ಜಯ ಸಾಧಿಸಲು ಸಾಧ್ಯವೆಂದರು.

         ನಮ್ಮದೇ ಸರ್ಕಾರ:ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಶಕ್ತಿಯಾಗಿದ್ದಾರೆ, ಯಾವುದೇ ಕಾರಣಕ್ಕೂ ಅಧೈರ್ಯಗೊಳ್ಳುವ ಅವಶ್ಯಕತೆಯಿಲ್ಲ, ರಾಜ್ಯದಲ್ಲಿರುವುದು ನಮ್ಮದೇ ಮೈತ್ರಿ ಸರ್ಕಾರವೆಂಬುದನ್ನು ನೆನಪಿಲ್ಲಿಟ್ಟು ಕಳೆದ ಅವಧಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ನೀಗಿಸಿದಂತೆ ಪ್ರಸಕ್ತ ಸರ್ಕಾರದಲ್ಲೂ ಕಾರ್ಯಕರ್ತರು ಸಕ್ರಿಯವಾಗುವಂತೆ ಕರೆ ನೀಡಿದರು.

        ಸುಳ್ಳು ಹೇಳುತ್ತಿರುವ ಮೋದಿಗೆ ತಕ್ಕಪಾಠ ಕಲಿಸಿ:ಕೆಪಿಸಿಸಿಯಿಂದ ನೇಮಕವಾಗಿರುವ ಹಾವೇರಿ ಜಿಲ್ಲಾ ಉಸ್ತುವಾರಿ ಜಯಸಿಂಹ ಮಾತನಾಡಿ, ಸುಳ್ಳು ಭರವಸೆಗಳ ಮೇಲೆ ಆಡಳಿತ ನಡೆಸು ತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಕ್ಕೆ ದೇಶದ ಜನರು ಬುದ್ಧಿ ಕಲಿಸುವ ಕಾಲ ಸನ್ನಿಹಿತವಾಗಿದೆ, 2019ರ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿ ಉತ್ತರಿಸಬೇಕಾಗಿದೆ, ಸದ್ಯದ ಮೋದಿ ವಿರೋಧಿ ಅಲೆಯಿದೆ, ಅದನ್ನು ಕಾಂಗ್ರೆಸ್ ಪರವಾಗಿ ಮತಗಳಾಗಿ ಪರಿವರ್ತಿಸಲು ಕಾರ್ಯಕರ್ತರು ಪಣ ತೊಡುವಂತೆ ಕರೆ ನೀಡಿದರು.

        ಆರ್ಥಿಕತೆ 25 ವರ್ಷ ಹಿಂದಕ್ಕೆ: ಅಮಾನ್ಯೀಕರಣ, ಜಿಎಸ್‍ಟಿ, ಪೆಟ್ರೋಲ್, ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಅಧಃಪತನ ಹಾದಿ ಹಿಡಯಲಿದೆ, ಮೋದಿ ಕೈಗೊಳ್ಳುತ್ತಿರುವ ಏಕಪಕ್ಷೀಯ ನಿರ್ಣಯಗಳಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಆರ್ಥಿಕ ಸಂಕಷ್ಟಕ್ಕೆ ಸಿಲಿಕಿದ್ದಾನೆ ಬರುವ ಲೋಕಸಭೆ ಚುನಾವಣೆಯಲ್ಲಿ ಜನತೆಯೇ ಇದಕ್ಕೆ ಉತ್ತರಿಸಲಿದ್ದಾರೆ ಎಂದರು.

        ಶಕ್ತಿ ಕೇಂದ್ರಗಳು ಕ್ರೀಯಾಶೀಲವಾಗಲಿ:ರಾಹುಲ್‍ಗಾಂಧಿಯವರ ಆದೇಶದಂತೆ ಶಕ್ತಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಪ್ರಾಮಾ ಣಿಕವಾಗಿ ಕಾರ್ಯನಿರ್ವಹಿಸಬೇಕು ಅಂದಾಗ ಮಾತ್ರ ಲೋಕಸಭೆ ಚುನವಾಣೆಯಲ್ಲಿ ಜಯ ಕಾಂಗ್ರೆಸ್ ಪಾಲಾಗಲಿದೆ ಎಂದ ಅವರು, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿರಲಿ ಅದನ್ನೆಲ್ಲ ಬದಿಗೊತ್ತಿ ಶಕ್ತಿ ತುಂಬುವ ಕಾರ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕಿದೆ ಎಂದರು.

         ಪಕ್ಷ ಸಂಘಟನೆ ಮಾಡೋಣ: ಜಿಲ್ಲಾಧ್ಯಕ್ಷ ಎಸ್.ಸಿ.ಶಿಡೇನೂರ ಮಾತನಾಡಿ, ಕ್ಷೇತ್ರದಲ್ಲಿ ಮತ್ತೆ ಪಕ್ಷವನ್ನು ಸಂಘಟನೆ ಮಾಡುವಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಉತ್ಸಾಹ ತೊರಬೇಕಿದೆ. ಸೋಲು ಕ್ಷಣಿಕ ಹಾಗೂ ನಾವೆಲ್ಲಿ ಎಡವಿದ್ದೇವೆ ಎಂಬುದರ ಕುರಿತಂತೆ ಚರ್ಚಿಸಿ ಬೂತ್ ಮಟ್ಟದಿಂದ ಲೋಕಸಭೆ ಹಾಗೂ ಪುರಸಭೆ ಚುನಾವಣೆಗಳಿಗೆ ಕಾರ್ಯಕರ್ತರನ್ನು ಅಣಿಗೊಳಿಸುವ ಮೂಲಕ 135 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಾಗಿದೆ ಎಂದರು.

        ಈದೇ ಸಂದರ್ಬದಲ್ಲಿ ನೂತನ ಬ್ಯಾಡಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಕದರಮಂಡಲಗಿಯ ಮಲ್ಲಿಕಾರ್ಜುನ ಕರಿಲಿಂಗಣ್ಣನವರ ಅವರಿಗೆ ಮಾಜಿ ಅಧ್ಯಕ್ಷ ಬೀರಪ್ಪ ಬಣಕಾರ ಅಧಿಕಾರ ಹಸ್ತಾಂತರ ಮಾಡಿದರು. ವೇದಿಕೆಯಲ್ಲಿ ಕಾಗಿನೆಲೆ ಬ್ಲಾಕ್‍ನ ಸುರೇಶಗೌಡ ಪಾಟೀಲ, ಯುವ ಘಟಕದ ಅಧ್ಯಕ್ಷ ಡಿ.ಎಚ್.ಬುಡ್ಡನಗೌಡ್ರ, ಶಂಕರಗೌಡ ಪಾಟೀಲ, ದಾನಪ್ಪ ಚೂರಿ ಪುರಸಭೆ ಸದಸ್ಯರಾದ ನಜೀರ್‍ಹಮ್ಮದ ಶೇಖ್, ದುರ್ಗೇಶ ಗೋಣೆಮ್ಮನವರ, ಖಾದರಸಾಬ್ ದೊಡ್ಮನಿ, ರಮೇಶ ಮೋಟೆಬೆನ್ನೂರ, ಜಗದೀಶ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಮೇಶ ಸುತ್ತಕೋಟಿ ನಿರೂಪಿಸಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link