ಬಿಜೆಪಿ ಕಾಂಗ್ರೇಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ

ನವದೆಹಲಿ

         ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಟಕವಾಗಿದ್ದು, ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದ್ದರೆ, ಮಧ್ಯ ಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ಕಾಂಗ್ರೆಸ್ – ಬಿಜೆಪಿ ನಡುವೆ ನಿಕಟ ಸ್ಪರ್ಧೆ ಇರುವುದಾಗಿ ತಿಳಿಸಿದೆ.

         ಇಂಡಿಯಾ ಟುಡೆ ವರದಿ ಪ್ರಕಾರ ಮಧ್ಯ ಪ್ರದೇಶದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಗಿಂತ ಸ್ವಲ್ಪ ಮುಂದಿದೆ. ಕಾಂಗ್ರೆಸ್ 104 ರಿಂದ 122 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿ 102 ರಿಂದ 122 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದ್ದು, ಇಲ್ಲಿ ನಿಕಟ ಸ್ಪರ್ಧೆ ಎದುರಾಗಿದೆ. ಪಕ್ಷೇತರರು ಹಾಗೂ ಇತರರು 4 ರಿಂದ 12 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದ್ದಾರೆ.

          ಮೂರು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಶಿವರಾಜ್ ಸಿಂಗ್ ಚವ್ಹಾಣ್ ಆಡಳಿತದ ಮಧ್ಯ ಪ್ರದೇಶದಲ್ಲಿ ನ್ಯೂಸ್ ಎಕ್ಸ್ ವಾಹಿನಿ ವರದಿಗಳ ಪ್ರಕಾರ ಕಾಂಗ್ರೆಸ್ 112, ಬಿಜೆಪಿ 106 ಹಾಗೂ ಇತರರು 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಇಲ್ಲಿ ಸರಳ ಬಹುಮತಕ್ಕೆ 116 ಸ್ಥಾನಗಳನ್ನು ಪಡೆಯಬೇಕಾಗಿದೆ.

        ಟೈಮ್ಸ್ ನೌ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಸುಲಭವಾಗಿ ಅಧಿಕಾರ ದಕ್ಕಲಿದೆ. ಆಡಳಿತಾರೂಢ ಬಿಜೆಪಿ ಇಲ್ಲಿ 126 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ. ಕಾಂಗ್ರೆಸ್ 86 ಕ್ಷೇತ್ರಗಳಲ್ಲಿ, ಇತರರು 15 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದ್ದಾರೆ.

         ಟೈಮ್ಸ್ ನೌ ಪ್ರಕಾರ ಛತ್ತೀಸ್ ಗಢದಲ್ಲಿ ಬಿಜೆಪಿ 46 ಸ್ಥಾನಗಳನ್ನು ಉಳಿಸಿಕೊಳ್ಳಲಿದ್ದು, ಕಾಂಗ್ರೆಸ್ 35 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಜೆಸಿಸಿ – ಬಿಎಸ್ ಪಿ 7 ಹಾಗೂ ಇತರರು 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

         ಇಂಡಿಯಾ ಟುಡೆ ಪ್ರಕಾರ ಚತ್ತೀಸ್ ಗಢದಲ್ಲಿ ಕಾಂಗ್ರೆಸ್ ಗೆ ಸುಲಭವಾಗಿ ಗೆಲುವು ಪ್ರಾಪ್ತವಾಗಲಿದ್ದು, 55 ರಿಂದ 65 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ. ಬಿಜೆಪಿ 21 ರಿಂದ 31 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಇತರರು 4 ರಿಂದ 8 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದ್ದಾರೆ.

          ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆ ಸುಲಭವಾಗಿ ಗೆಲುವು ಲಭಿಸಲಿದೆ. ಟೈಮ್ಸ್ ನೌ ಪ್ರಕಾರ ಕಾಂಗ್ರೆಸ್ ವಿಧಾನಸಭೆಯ ಅರ್ಧಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ 105, ಬಿಜೆಪಿ 85 ಮತ್ತು ಬಿಎಸ್ ಪಿ 2 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ.ಇಂಡಿಯಾ ಟುಡೆ ವರದಿಗಳ ಪ್ರಕಾರ ಕಾಂಗ್ರೆಸ್ 119 ರಿಂದ 141 ಕ್ಷೇತ್ರಗಳಲ್ಲಿ, ಬಿಜೆಪಿ 55 ರಿಂದ 57 ಕ್ಷೇತ್ರಗಳಲ್ಲಿ ಗೆಲ್ಲಲಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link