ಕುಡಿದು ರಂಪ ಮಾಡಿದ ಕುಡುಕರು ಅಂದರ್….!!!

ಬೆಂಗಳೂರು

     ಕುಡಿದು ರಂಪ ಮಾಡುತ್ತಾ ಹಲ್ಲೆ ನಡೆಸುತ್ತಿದ್ದರಿಂದ ರೊಚ್ಚಿಗೆದ್ದು ಗಂಗಾ ಇಂಟರ್ ನ್ಯಾಷನಲ್ ಸ್ಕೂಲ್‍ನ ಬಸ್ ಚಾಲಕ ಹನುಮಂತೇಗೌಡ ಅಲಿಯಾಸ್ ಕುಮಾರ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವುದು ಪತ್ತೆಯಾಗಿದ್ದು ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

        ಕುಮಾರ್‍ನನ್ನು ಕೊಲೆಗೈದ ದೊಡ್ಡ ಬಿದಿರಕಲ್ಲುವಿನ ಇಂದಿರಾ ನಗರದ ಶ್ರೀನಿವಾಸ್ ಅಲಿಯಾಸ್ ಸೀನ (24), ನಾಗಸಂದ್ರದ ಪ್ರಭು ಅಲಿಯಾಸ್ ಭಜಂತ್ರಿ (32)ನನ್ನು ಬಂಧಿಸಿ ಪೀಣ್ಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.

        ಆರೋಪಿ ಶ್ರೀನಿವಾಸ್ ಹಾಗೂ ಕೊಲೆಯಾದ ಕುಮಾರ್ ಸ್ನೇಹಿತರಾಗಿದ್ದು, ಇಬ್ಬರು ಗದಗ ಜಿಲ್ಲೆ ಗು¾್ಲಕಟ್ಟೆ ಮೂಲದವರು. ಕ್ಷುಲ್ಲಕ ಕಾರಣಕ್ಕೆ ಹಿಂದೆ ಹೊಡೆದಾಡಿಕೊಂಡಿದ್ದ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಶ್ರೀನಿವಾಸ್ ಹಾಗೂ ಅವರ ಸಹೋದರ ಶ್ರೀಕಾಂತ್ ಮೇಲೆ ಕುಮಾರ್ ಕುಡಿದು ಬಂದು ಹಲ್ಲೆ ಮಾಡುತ್ತಿದ್ದರಿಂದ ಆಕ್ರೋಶಗೊಂಡು ಸಂಚು ರೂಪಿಸಿ ಭಜಂತ್ರಿ ಜತೆ ಸೇರಿದ ಶ್ರೀನಿವಾಸ್, ಕಳೆದ ಡಿ. 3 ರಂದು ರಾತ್ರಿ ಮುನೇಶ್ವರ ನಗರದ ಮನೆಯಲ್ಲಿ ಮಲಗಿದ್ದ ಕುಮಾರ್ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ತನಿಖೆ ಕೈಗೊಂಡ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಅವರಿಗೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾಗಿರುವುದು ಪತ್ತೆಯಾಗಿದ್ದು, ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link