ಸಾಕ್ಸ್ ನಲ್ಲಿ ಮಾದಕ ವಸ್ತು ….!!!

ಬೆಂಗಳೂರು

        ಪೊಲೀಸರ ಕಣ್ತಪ್ಪಿಸಿ ಶೂ ಸಾಕ್ಸ್‍ನಲ್ಲಿ ಎಂಡಿಎಂಎ ಎಕ್ಸ್‍ಟೆಸಿ ಎನ್ನುವ ಮಾದಕ ವಸ್ತುವನ್ನಿಟ್ಟು ಕೊಂಡು ಮಾರಾಟ ಮಾಡುತ್ತಿದ್ದ ನೈಜಿರೀಯ ಕಾಂಗೂ ದೇಶದ ಇಬ್ಬರು ಸೇರಿ ಮೂವರಿದ್ದ ಗ್ಯಾಂಗ್‍ನ್ನು ಬಂಧಿಸಿರುವ ಕೋರಮಂಗಲ ಪೊಲೀಸರು ತಲೆಮರೆಸಿಕೊಂಡಿರುವ ಮತ್ತೊಬ್ಬ ವಿದೇಶಿಗನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

       ನೈಜಿರೀಯಾದ ಅಮೀರಾ ಮೂಲದ ಜಾನ್ ಕೆನಡಿ (37) ಕಾಂಗೋದ ಕಿನ್‍ಶಶಾ ಮೂಲದ ಕೆನಾನ್ ಅಡ್ಲಿ (32) ಹಾಗೂ ಬಿನ್ನಿಮಿಲ್‍ನ ಕೇಶವ ನಗರದ ಆದಿತ್ಯ ಬಂಧಿತ ಆರೋಪಿಗಳಾಗಿದ್ದು ಪರಾರಿಯಾಗಿರುವ ಮತ್ತೊಬ್ಬನ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

       ಹೆಣ್ಣೂರಿನ ಮುದ್ದಣ್ಣ ಲೇ ಔಟ್‍ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಜಾನ್ ಕೆನಡಿ ಬಳಿ ನೈಜಿರೀಯಾದ ಪಾಸ್‍ಪೆರ್ಟ್ ವಿದ್ಯಾರ್ಥಿ ವೀಸಾ ಪ್ರತಿನಕಲಿ ಸಿಕ್ಕಿದ್ದು, ಅಸಲು ಪ್ರತಿಯನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದ. ಆದರೆ ಆತನ ಬಳಿಯಿದ್ದ ಪಾಸ್‍ಪೆರ್ಟ್ ವೀಸಾ ಪರಿಶೀಲನೆ ಮೇಲೆ ನಕಲಿ ಎನ್ನುವುದನ್ನು ಕಂಡುಬಂದಿದೆ.

       ಆರೋಪಿಯು ನಕಲಿ ಭಾರತೀಯ ವೀಸಾ ಸೃಷ್ಟಿಸಿರುವುದು ಅಲ್ಲದೆ ಪಾಸ್‍ಪೆರ್ಟ್‍ನ ನೈಜತೆ ಬಗ್ಗೆ ನೈಜಿರೀಯ ರಾಯಭಾರ ಕಛೇರಿಯನ್ನು ಸಂಪರ್ಕಿಸಲಾಗಿದೆ. ಇನ್ನೊಬ್ಬ ಆರೋಪಿ ಕೆನಾನ್ ವಿದ್ಯಾರ್ಥಿ ವೀಸಾದಲ್ಲಿ 2012ರ ಮಾರ್ಚ್‍ನಲ್ಲಿ ಭಾರತಕ್ಕೆ ಬಂದಿದ್ದು, ಅದೇ ವರ್ಷದ ಸೆಪ್ಟೆಂಬರ್‍ನಲ್ಲಿ ವೀಸಾ ಅವಧಿ ಮುಗಿದಿದ್ದರೂ ಸ್ವದೇಶಕ್ಕೆ ವಾಪಸಾಗದೆ ಅಕ್ರಮವಾಗಿ ನೆಲಸಿ ಮಾದಕ ವಸ್ತುಗಳ ಸಾಗಣೆ ಮಾರಾಟದಲ್ಲಿ ತೊಡಗಿದ್ದರು ಎಂದು ಬೋರಲಿಂಗಯ್ಯ ತಿಳಿಸಿದ್ದಾರೆ.

        ಪಬ್‍ವೊಂದರಲ್ಲಿ ಪಾರ್ಟಿ ಮಾಡಲು ಹೋಗಿದ್ದಾಗ ಇವರಿಬ್ಬರು ಮತ್ತೊಬ್ಬ ಆರೋಪಿ ಆದಿತ್ಯನನ್ನು ಪರಿಚಯಮಾಡಿಕೊಂಡು ಆತನನ್ನು ಮಾದಕ ವಸ್ತು ದಂಧೆಗೆ ಸೇರಿಸಿಕೊಂಡಿದ್ದರು. ಅಲ್ಲದೆ ಮತ್ತೊಬ್ಬ ವಿದೇಶಿ ಪ್ರಜೆ ಇವರ ಗ್ಯಾಂಗಿನಲ್ಲಿದ್ದು ಆತ ಪತ್ತೆಗಾಗಿ ಶೋಧ ನಡೆಸಿದ್ದಾರೆ.

         ಬಂಧಿತರಿಂದ ಸುಮಾರು 5 ಲಕ್ಷದ ಮೌಲ್ಯದ 21 ಗ್ರಾಂ ಎಂಡಿಎಂಎ ಎಕ್ಸ್‍ಟೆಸಿ ಮಾತ್ರೆಗಳು ಕ್ರಿಸ್ಟೆಲ್‍ಗಳನ್ನು ವಶಪಡಿಸಿಕೊಂಡು  ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಕೋರಮಂಗಲದ 8ನೇ ಬ್ಲಾಕ್‍ನ ಅಂಬೇಡ್ಕರ್ ಪಾರ್ಕ್ ಬಳಿ ಕಾಲೇಜು ವಿದ್ಯಾರ್ಥಿಗಳು , ಸಾಫ್ಟ್‍ವೇರ್ ಉದ್ಯೋಗಿಗಳಿಗೆ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಇನ್ಸ್‍ಪೆಕ್ಟರ್ ಮಂಜುನಾಥ್ ಮತ್ತವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link