ಬಾಲ ಕಾರ್ಮಿಕ ಪದ್ದತಿ ನರ್ಮೂಲನೆಗೆ ಸಹಕರಿಸಿ

ಚಿತ್ರದುರ್ಗ

          ಬಾಲ ಕಾರ್ಮಿಕ ಪದ್ದತಿಇದೊಂದು ಸಮಾಜದ ಅನಿಷ್ಟ ಪದ್ದತಿಯಾಗಿದ್ದುಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎಲ್ಲರೂ ಕೈಜೋಡಿಸಬೇಕೆಂದು ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದಎಸ್.ಬಿ.ವಸ್ತ್ರಮಠ ತಿಳಿಸಿದರು.

          ಜಿಲ್ಲಾಧಿಕಾರಿಗಳ ಕಚೇರಿಆವರಣದಲ್ಲಿಕಾರ್ಮಿಕ ಇಲಾಖೆ ಹಾಗೂ ರಾಷ್ಟ್ರೀಯ ಬಾಲ ಕಾರ್ಮಿಕಯೋಜನಾ ಸೊಸೈಟಿ, ಚಿತ್ರದುರ್ಗಇವರ ಸಂಯುಕ್ತಾಶ್ರಯದಲ್ಲಿ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನಾ ಜಾಗೃತಿ ವಾಹನಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದರು.

        ಮಕ್ಕಳು ದೇಶದ ಸಂಪತ್ತಾಗಿದ್ದು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯಲ್ಲಿದೈಹಿಕ ಹಾಗೂ ಮಾನಸಿಕವಾಗಿ ಬೆಳೆಯಬೇಕು.ಈ ವಯೋಮಾನದಲ್ಲಿ ಆಗುವ ಬೆಳವಣಿಗೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಭೀರಬಾರದು.ಆದರೆ ಬಾಲ್ಯದಲ್ಲಿಯೇ ಕಾರ್ಮಿಕರಾಗುವುದರಿಂದ ದೈಹಿಕ, ಮಾನಸಿಕ ಹಾಗೂ ಶೈಕ್ಷಣಿಕ ಬೆಳೆವಣಿಗೆಯಾಗುವುದಿಲ್ಲ. ಇದರಿಂದ ಮಕ್ಕಳ ಮುಂದಿನ ಜೀವನದ ಮೇಲೆ ಪರಿಣಾಮವಾಗಲಿದೆ.ಈ ನಿಟ್ಟಿನಲ್ಲಿ ಮಕ್ಕಳನ್ನು 1 ರಿಂದ 18 ನೇ ವಯಸ್ಸಿನವರೆಗೆ ಯಾವುದೇದುಡಿಮೆಗೆ ಕಳುಹಿಸದೆ ಶಿಕ್ಷಣ ಕೊಡಿಸುವಂತಹ ಕೆಲಸವನ್ನು ನಾವು, ನೀವು ಕೂಡಿ ಮಾಡಬೇಕಾಗಿದೆಎಂದರು.

            ಬಾಲ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದು ಅಪರಾಧವಾಗಿದೆ.ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದ್ದರೂ ಸಹ ಅಲ್ಲಲ್ಲಿ ಪ್ರಕರಣಗಳು ಕಂಡು ಬರುತ್ತಿವೆ. ಆದರೂಇಂತಹ ಪ್ರಕರಣಗಳು ಕಂಡುಬಂದಲ್ಲಿದೂರು ನೀಡಬಹುದಾಗಿದೆ.ಕೋರ್ಟ್ ಸಹ ಇದನ್ನುಗಂಭೀರವಾಗಿ ಪರಿಗಣಿಸಲಿದೆ.ಆದ್ದರಿಂದ ಬಾಲ ಕಾರ್ಮಿಕರು, ಕಿಶೋರರುಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆಎಂದರು.

          ಜಿಲ್ಲಾಧಿಕಾರಿ ಹಾಗೂ ಬಾಲ ಕಾರ್ಮಿಕಯೋಜನಾ ಸೊಸೈಟಿಯಅಧ್ಯಕ್ಷರಾದ ವಿನೋತ್ ಪ್ರಿಯ ಮಾತನಾಡಿ ಬಾಲ ಕಾರ್ಮಿಕ ನಿರ್ಮೂಲನೆ ಮಾಡುವಉದ್ದೇಶದಿಂದಜಿಲ್ಲೆಯಎಲ್ಲಾ 189 ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿಯನ್ನುಏರ್ಪಡಿಸಲಾಗಿದೆ.ವಾಹನದಲ್ಲಿ ಪ್ರಚಾರಗೀತೆ, ಕರಪತ್ರಗಳು, ವಸ್ತುಪ್ರದರ್ಶನದ ಮೂಲಕ ಜನರಿಗೆಜಾಗೃತಿ ಮೂಡಿಸಲಾಗುತ್ತಿದೆಎಂದರು.ಉಪವಿಭಾಗಾಧಿಕಾರಿ ವಿಜಯಕುಮಾರ್, ವಕೀಲರ ಸಂಘದಅಧ್ಯಕ್ಷರಾದ ವಿಶ್ವನಾಥ್, ಕಾರ್ಮಿಕಅಧಿಕಾರಿಇಬ್ರಾಹಿಂ, ನಿರೀಕ್ಷಕರಾಜಣ್ಣ, ಯೋಜನಾ ನಿರ್ದೇಶಕ ಸತೀಶ್ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap