ಮುಂಬೈ: 

ನೆಹರು ಕುಟುಂಬ ರಾಜಕೀಯದ ಐದನೇ ತಲೆಮಾರಿನ ನಾಯಕರಾದ ರಾಹುಲ್ ಗಾಂಧಿಯವರು ಈಗ ಬರಿ ಪಪ್ಪು ಆಗಿ ಉಳಿದಿಲ್ಲ, ಅವರೀಗ ಪಪ್ಪಾ ಆಗಿದ್ದಾರೆಂದು ಎಂದು ಕೇಂದ್ರ ಸಚಿವ ರಾಮದಾಸ್ ನುಡಿದಿದ್ದಾರೆ.
ಪಂಚರಾಜ್ಯಗಳ ಪೈಕಿ ಮೂರರಲ್ಲಿ ಜಯಗಳಿಸಿದ ಬಳಿಕ ರಾಹುಲ್ ಗಾಂಧಿ ತಮ್ಮ ಪ್ರೌಡಿಮೆಯಿಂದ ಪ್ರಖ್ಯಾತಿ ಪಡೆಯುತ್ತಿರುವ ರಾಜಕಾರಣಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಪಪ್ಪು ಎಂದು ಸಂಭೋದಿಸಲಾಗುತ್ತಿದ್ದು ಅದು ಈ ಸಂದರ್ಭಕ್ಕೆ ಅಪ್ರಸ್ತುತ. ಅವರು ಈಗ ಬೌಧಿಕವಾಗಿ ರಾಜಕೀಯವಾಗಿ ಬಹಳ ಬಲಶಾಗಿದ್ದಾರೆ ಆದ್ದರಿಂದ ಕಾಂಗ್ರೆಸ್ಸಿಗೆ ಅವರು ಇನ್ನು ಮುಂದೆ ಪಪ್ಪಾ ಆಗಿರುತಾರೆಂದು ವ್ಯಂಗ್ಯವಾಡಿದ್ದಾರೆ. ಇನ್ನೂ ನಮ್ಮ ಮೈತ್ರಿಕೂಟದ ವಿಷಯಕ್ಕೆ ಬಂದರೆ ಈಗ ಪಕ್ಷದ ಸೋಲಿಗೆ ಪ್ರಧಾನಿ ಮೋದಿ ಯಾವ ರೀತಿಯಲ್ಲೂ ಕಾರಣವಲ್ಲ ಎಂದು ಇದೇ ವೇಳೆ ಅಠಾವಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








