ನವದೆಹಲಿ:
ಭಾರತೀಯ ರಿಸರ್ವ್ ಬ್ಯಾಂಕ್ ನ ನೂತನ ಗವರ್ನರ್ ಶಕ್ತಿಕಾಂತ್ ದಾಸ್ ಈ ಹಿಂದೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದು , ಭ್ರಷ್ಟಾಚಾರದಲ್ಲಿ ಬಾಗಿಯಾಗಿದ್ದ ಇಂತಹವರನ್ನು ಆ ಸ್ಥಾನದಲ್ಲಿ ಹೇಗೆ ಕೂರಿಸಲಾಗಿದೆ ಎಂದು ಸ್ವಾಮಿ ಅಚ್ಚರಿಯ ಪ್ರಶ್ನೆಯೊಂದನ್ನು ಕೇಳುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ . ಆದರೆ ಸ್ವಾಮಿ ಶಕ್ತಿಕಾಂತ್ ಕುರಿತಂತೆ ಯಾವುದೇ ಪುರಾವೆ ಒದಗಿಸಿಲ್ಲ .
ನೂತನ ಗವರ್ನರ್ ಹೆಚ್ಚು ಭ್ರಷ್ಟರಾಗಿದ್ದಾರೆ, ನಾನು ಅವರನ್ನು ಈ ಹಿಂದೆ ಹಣಕಾಸು ಇಲಾಖೆಯಿಂದ ತೆಗೆದು ಹಾಕಿದ್ದೆ. ನಾನು ಶಕ್ತಿಕಾಂತ್ ದಾಸ್ ಅವರನ್ನು ಭ್ರಷ್ಟಾಚಾರಿ ಎಂದು ಕರೆದಿದ್ದೇನೆ. ಹಾಗೆಯೇ ಭರ್ಷ್ಟಾಚಾರದ ಕಾರಣ ಹಣಕಾಸು ಸಚಿವಾಲಯದಿಂದ ಕಿತ್ತುಹಾಕಲ್ಪಟ್ಟ ವ್ಯಕ್ತಿ ಇಂದು ಆರ್ ಬಿಐ ಗವರ್ನರ್ ಆಗಿರುವುದು ನನಗೆ ಅಚ್ಚರಿ ಉಂಟುಮಾಡಿದೆ ಎಂದು ಸುಬ್ರಮಣಿಯನ್ ಸ್ವಾಮಿ ಅಚ್ಚರಿ ವ್ಯಕ್ತ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








