ಮೋಜು ಮಸ್ತಿಗಳಿಗೆ ಒಳಗಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ : ಶಿವಾಚಾರ್ಯಮಹಾಸ್ವಾಮೀಜಿ

ಜಗಳೂರು

        ಆಧುನಿಕ ಯುಗದಲ್ಲೂ ಸಹ ಜನರು ಕುಡಿತ, ಜೂಜು, ಮೋಜಿ ಮಸ್ತಿಗಳಿಗೆ ಒಳಗಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಮೂಡ ನಂಭಿಕೆಗಳಿಗೆ ಮಾರು ಹೋಗುತ್ತಿರುವುದಕ್ಕೆ ಸಾಣೆಹಳ್ಳಿ ಮಠದ ಶ್ರೀಗಳಾದ ಡಾ|| ಪಂಡಿತಾರಾಧ್ಯಶಿವಾಚಾರ್ಯಮಹಾಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.

          ತಾಲ್ಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಶುಕ್ರುವಾರ ಬಸವೇಶ್ವರ ಗ್ರಾಮಾಂತರ ವಿದ್ಯಾ ಸಂಸ್ಥೆಯ(ರಿ) ಗೌರವ ಕಾರ್ಯದರ್ಶಿ ಹಾಗೂ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾಗಿದ್ದ ಆರ್.ಶೇಖರಪ್ಪನವರ ಕೈಲಾಸ ಶಿವಗಣಾರಾಧನೆ ಹಾಗೂ ಸರ್ವಶರಣರ ಸಮ್ಮೇಳದಲ್ಲಿ ದಿವ್ಯ ಸಾನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

         ಎಲ್ಲಾ ಸಮಾಜಕ್ಕೆ ಎಲ್ಲರೂ ಒಂದು ಎಂಬ ಭಾವನೆಯನ್ನು ಬೆಳೆಸಿಕೊಂಡರೆ ಗ್ರಾಮ, ಸಮಾಜ, ದೇಶವೂ ಸಹ ಶಾಂತಿ ಇರುವ ಮೂಲಕ ಅಭಿವೃದ್ಧಿಗೆ ನಾಂಧಿಯಾಗಲಿದೆ. ಮಕ್ಕಳು ನೀತಿ ವಂತರಾಗಿ ಬೆಳೆಸುವ ಹಾಗೂ ದಾರಿ ತಪ್ಪಿದ ಮಕ್ಕಳನ್ನು ದಾರಿಗೆ ತರುವ ಹೊಣೆ ತಂದೆ ತಾಯಿಗಳ ಮೇಲಿದೆ.

           ನಾನು ಪಿಯುಸಿ ಫೇಲಾಗಿದ್ದೆ , ಇಂತಹ ಸಂದರ್ಭದಲ್ಲಿ ಹಿರಿಯ ಶ್ರೀಗಳಾದ ಶಿವಕುಮಾರಸ್ವಾಮಿಜೀಗಳು ನನ್ನನ್ನು ಕರೆಯಿಸಿ ಎಲ್ಲರೂ ಪಾಸಾದರೆ ಫೇಲಾಗುವರು ಯಾರು? ಫೇಲಾಗುವರು ಮುಂದೆ ಪಾಸಾಗುತ್ತಾರೆ ಎಂದು ಹೇಳಿದ ಗುರುಗಳ ಮಾತು ಮುಂದೆ, ಬಿ.ಎ , ಎಂ.ಎ.ದಲ್ಲಿ ಗೋಲ್ಡ್ ಮಿಲ್ಡ್ ಪಡೆಯಲು ದಾರಿಯಾಯಿತು. ಪಾಸಾದರೂ ಎಚ್ಚರಿಸಬೇಕು. ಫೇಲಾದರೂ, ದಾರಿತಪ್ಪಿದರೂ ಎಚ್ಚರಿಸುವ ಶಕ್ತಿಯನ್ನು ಪೋಷಕರು ಮಾಡಬೇಕು.

          ಅದೇ ರೀತಿ ಮಕ್ಕಳು ಸಹ ತಂದೆ ತಾಯಿಗಳೇ ದೇವರಿದ್ದಂತೆ ಅವರಿಗೆ ವಯಸ್ಸಾದ ಕೊನೆಯ ದಿನಗಳಲ್ಲಿ ಗೌರವ ನೀಡಿ ಚೆನ್ನಾಗಿ ಸಾಕವಂತ ಗುಣಗಳನ್ನು ಈಗಿನ ಯುವ ಪೀಳಿಗೆ ಬೆಳೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

           ದಿವಂಗತ ಶೇಖರಪ್ಪನವರು ಇರುವ ದಿನಗಳಲ್ಲಿ ಜನರೊಂದಿಗೆ ಒಡನಾಡಿಯಾಗಿ ಬೆರೆತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ರಾಜಕೀಯವಾಗಿ ಬೆಳೆದು ಇಂದು ಮರಣವನ್ನು ಹೊಂದಿರುವ ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ದೇವರು ನೀಡಲಿ .
ಹಾಗೂ ಅವರ ಕುಟುಂಬ ಅವರ ಹಾಕಿ ಕೊಟ್ಟ ಮಾರ್ಗದರ್ಶನದಲ್ಲೇ ಮುನ್ನಡಿಯಲಿ ಸ್ವಾಮೀಜಿ ಹೇಳಿದರು.

             ಈ ಸಂದರ್ಭದಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್, ದಾವಣಗೆರೆ ಡಿಸಿಸಿ ಬ್ಯಾಂಕ ಅಧ್ಯಕ್ಷ ಜೆ.ಆರ್.ಷಣ್ಮುಖಪ್ಪ, ಜಿ.ಪಂ.ಸದಸ್ಯೆ ಶೈಲಜಾ, ಹಾಲೇಕಲ್ಲು ಗ್ರಾಮದ ನಿವೃತ್ತ ಶಿಕ್ಷಕ ಬಿ.ಮಹಾದೇವಪ್ಪ, ವಡ್ನಾಳ್ ಸದಾಶಿವಪ್ಪ, ಚೆನ್ನಗಿರಿ ಸಾಧುವೀರಶೈವ ಸಮಾಜದ ಅಧ್ಯಕ್ಷ ಕಂಚಿಗನಾಳ್ ಶಿವಲಿಂಗಪ್ಪ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link