ಮುಂಬೈ
ಭಾರತದ ಮಾಜಿ ಪ್ರಧಾನ ಮಂತ್ರಿ ಶ್ರೀ ಮನಮೋಹನ್ ಸಿಂಗ್ ಎಂದೂ ಆಕಸ್ಮಿಕ ಪ್ರಧಾನಿಯಲ್ಲ, ಅವರು ಎಂದಿಗೂ ಯಶಸ್ವೀ ಅವರೊಬ್ಬ ಅದ್ಬುತ ಪ್ರಧಾನಿಯಾಗಿದ್ದರು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ತಿಳಿಸಿದ್ದಾರೆ.ಶುಕ್ರವಾರ ಮಾಧ್ಯಮಗಳ ಮುಂದೆ ‘Accidential Prime Minister‘ ಚಿತ್ರದ ಕುರಿತು ಎದ್ದಿರುವ ವಿವಾದಗಳ ಬಗ್ಗೆ ಮಾತನಾಡುತ್ತಿದ್ದ ಅವರು ಈ ವಿಷಯವನ್ನು ಹೇಳಿದ್ದಾರೆ.
ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರ ಜೀವನವನ್ನು ಚಿತ್ರವಾಗಿ ತರುವಂತಹ ಪ್ರಯತ್ನದಲ್ಲಿ ‘Accidential Prime Minister‘ ಚಿತ್ರದಲ್ಲಿ ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತಹ ಕೆಲವು ಸನ್ನಿವೇಶಗಳಿವೆ ಎಂದು ಆರೋಪಿಸಿ ಈ ಚಿತ್ರವನ್ನು ನಿಷೇಧಿಸುವಂತೆ ಒಕ್ಕೋರಲ ಧ್ವನಿ ಎದ್ದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ