ರೈತಸಂಘದ ಅಧ್ಯಕ್ಷ-ಗ್ರಾಪಂ ಸದಸ್ಯ ಪರಸ್ಪರ ದೂರು ದಾಖಲು

ಪಾವಗಡ:

    ಗ್ರಾ.ಪಂ. ಸದಸ್ಯರ ವಿರುದ್ದ ರೈತ ಸಂಘದ ಅಧ್ಯಕ್ಷ ದೂರು ನೀಡಿದ ಹಿನ್ನೆಲೆಯಲ್ಲಿ, ಗ್ರಾ.ಪಂ. ಸದಸ್ಯರೊಬ್ಬರು ರೈತ ಸಂಘದ ಅಧ್ಯಕ್ಷರ ವಿರುದ್ದ ಪ್ರತಿ ದೂರು ದಾಖಲಿಸಿರುವ ಘಟನೆ ಪಾವಗಡ ಪೋಲೀಸ್ ಠಾಣೆಯಲ್ಲಿ ಭಾನುವಾರ ಜರುಗಿದೆ.
ತಾಲ್ಲೂಕಿನ ಬ್ಯಾಡನೂರು ಗ್ರಾ.ಪಂ. ಗೆ ಸೇರಿದ ಗುಂಡಾರ್ಲಹಳ್ಳಿ ಗ್ರಾ.ಪಂ. ಸದಸ್ಯ ಅನಿಲ್‍ಕುಮಾರ್ ವಿರುದ್ದ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ ಶುಕ್ರವಾರ ಪಾವಗಡ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದಕ್ಕೆ ಪ್ರತಿಯಾಗಿ ಗ್ರಾ.ಪಂ. ಸದಸ್ಯ ಅನಿಲ್ ಕುಮಾರ್ ತಮ್ಮ ನೂರಾರು ಬೆಂಬಲಿಗರೊಂದಿಗೆ ಭಾನುವಾರ ಪಾವಗಡ ಪೊಲೀಸ್ ಠಾಣೆಯ ಹಾಗೂ ತಹಸೀಲ್ದಾರ್ ಕಚೇರಿ ಬಳಿ ಜಮಾಯಿಸಿ ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿ, ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು.

  ಸ್ಥಳಕ್ಕೆ ಆಗಮಿಸಿದ ಸಿ.ಪಿ.ಐ. ವೆಂಕಟೇಶ್ ಸಮಾಧಾನಪಡಿಸಿಲು ಯತ್ನಿಸಿದರು. ಪ್ರತಿಭಟನಾಕಾರರು ನರಸಿಂಹರೆಡ್ಡಿ ವಿರುದ್ದ ಧಿಕ್ಕಾರ ಕೂಗಿದರು.
ಗ್ರಾ.ಪಂ. ಸದಸ್ಯ ಅನಿಲ್ ಕುಮಾರ್ ಜಿ.ನರಸಿಂಹರೆಡ್ಡಿ ವಿರುದ್ದ ಸಿ.ಐ. ವೆಂಕಟೇಶ್ ಗೆ ಪ್ರತಿದೂರು ಸಲ್ಲಿಸಿದರು. ನಂತರ ತಹಸೀಲ್ದಾರ್ ಡಿ.ವರದರಾಜುಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಸರ್ಕಾರದ ಅನುದಾದಡಿಯಲ್ಲಿ ಬರುವ ಕಾಮಗಾರಿಗಳನ್ನು ಮಾಡಲು ಹೋದರೆ ನರಸಿಂಹರೆಡ್ಡಿ ಬೆದರಿಸಿ ಲಂಚ ಕೇಳುತ್ತಾರೆ. ಗ್ರಾಮಕ್ಕೆ ಸರ್ಕಾರದಿಂದ ಮನೆಗಳು ಮಂಜೂರಾದರೆ ಅದರಲ್ಲಿ ಫಲಾನುಭವಿಗಳಿಂದ ಲಂಚ ಕೇಳುತ್ತಾರೆ. ಸರ್ಕಾರಿ ಇಲಾಖಾಧಿಕಾರಿಗಳನ್ನು ಸಹ ಬೆದರಿಸಿ ಲಂಚ ಪಡೆಯುತ್ತಾರೆ. ಅಲ್ಲದೆ ತಾಲ್ಲೂಕಿನಲ್ಲಿ ಗೊಲ್ಲ ಜನಾಂಗವನ್ನು ಹೀಯಾಳಿಸಿ ಮಾತನಾಡಿದ್ದಾರೆ. ಆದ್ದರಿಂದ ಈತನ ರೈತ ಸಂಘದ ಮಾನ್ಯತೆಯನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದರು.
ಹಸಿರುಸೇನೆ ತಾ. ಅಧ್ಯಕ್ಷ ಪೂಜಾರಪ್ಪ, ತಾ. ಜೆಡಿಎಸ್ ಅಧ್ಯಕ್ಷ ಬಲರಾಮರೆಡಿ, ್ಡ ನರಸಿಂಹರೆಡ್ಡಿ ವಿರುದ್ದ ಮಾತನಾಡಿದರು.
ಮುಖಂಡರಾದ ಕೋಳಿಬಾಲಾಜಿ, ನಲ್ಲಪ್ಪ, ಶಿಕ್ಷಕ ನರಸಪ್ಪ, ಅಂಜನ್‍ತಿಮ್ಮರಾಜು, ರಾಮಕೃಷ್ಣ, ಮಾರುತಿ, ನರಸಮ್ಮ, ಅಶ್ವತ್ಥಮ್ಮ, ಲಕ್ಷ್ಮೀದೇವಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಜಿ.ನರಸಿಂಹರೆಡ್ಡಿ ಪ್ರತಿಕ್ರಿಯೆ
ದೂರವಾಣಿ ಮೂಲಕ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ರೈತ ಸಂಘಧ ಅಧ್ಯಕ್ಷ ಜಿ.ನರಸಿಂಹರೆಡ್ಡಿ, ಅನಿಲ್ ಕುಮಾರ್ ಗ್ರಾಮದಲ್ಲಿ ಅಕ್ರಮವಾಗಿ ವಿದ್ಯತ್ ಲೈನ್ ಎಳೆದುಕೊಂಡಿದ್ದು, ಇದರಿಂದ ಬೆಸ್ಕಾಂ ಪತ್ತೆದಳ ದಾಳಿ ನಡೆಸಿ ಅನಿಲ್ ಕುಮಾರ್‍ಗೆ ದಂಡ ವಿಧಿಸಿದೆ. ಇದನ್ನು ನಾನೆ ಮಾಡಿಸಿದ್ದೇನೆ ಎಂದು ನನ್ನ ವಿರುದ್ದ ಗಲಾಟೆ ಮಾಡಿದ್ದರಿಂದ ನಾನು ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಇದರ ವಿರುದ್ದ ಅನಿಲ್ ಕುಮಾರ್ ಷಡ್ಯಂತರ ಹೂಡಿ ನನ್ನ ವಿರುದ್ದ ಪ್ರತಿ ದೂರು ನೀಡಿದ್ದಾರೆ ಎಂದು ತಿಳಿಸಿದರು

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link