ಎಂ ಎನ್ ಕೋಟೆ :
ತನ್ನಗೆ ಬೇಡವಾದದ್ದನ್ನು ನೋಡದೆ ಬೇಡವಾದದನ್ನು ಕೇಳದೆ ತನಗೆ ಬೇಕಾದದ್ದನ್ನು ಮಾತ್ರ ಸ್ವೀಕರಿಸಿ ಉತ್ತಮ ಜೀವನ ನಡೆಸಬೇಕೆಂದು ಸುತ್ತೂರು ಮಠದ ವೀರ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಅನುಭವ ಮಂಟಪ ಬೆಟ್ಟದಹಳ್ಳಿ ಗವಿಮಠ ಶಾಖೆ ಬಾಗೋರ್ ಗೇಟ್ ನಲ್ಲಿ ಹಮ್ಮಿಕೊಂಡಿದ್ದ ಶ್ರೀ ಗುರುಸಿದ್ದರಾಮ ಶಿವಯೋಗಿಗಳ 846ನೇ ಜಯಂತಿ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು ಜಗತ್ತಿನಲ್ಲಿ ದ್ವೇಶ ಅಸೂಯೇ ತಂಡವಾಡಿತ್ತಿದೆ.ಬದುಕನ್ನು ಸಾರ್ಥಕತೆ ಪಡಿಸಿಕೊಳಬೇಕಾದರೆ ಆಸೆಯನ್ನು ಕಡಿಮೆ ಮಾಡಿಕೊಳಬೇಕು.ಆಸೆಗೆ ಇತಿ ಮಿತಿ ಇದೆ.
ಸಿದ್ದರಾಮೇಶ್ವರ ಅಂತಹ ಕಾಯಕ ಯೋಗಿಗಳನ್ನ ಆದರ್ಶವಾಗಿಟ್ಟುಕೊಂಡು ಇಟ್ಟುಕೊಂಡು ಬದುಕಬೇಕು ಎಂದರು.
ಯಾವುದೇ ಕ್ಷೇತ್ರದಲ್ಲಿ ಇದ್ದರೂ ಮನುಷ್ಯ ಪ್ರೀತಿ ಬೆಳೆಸಿಕೋಳಬೇಕು.ಪೈಪೂಟೆ ಬಿಡಬೇಕು.ಶರಣರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಎಂದರು.
ಸಿದ್ದರಾಮ ಜಯಂತಿ ಕಾರ್ಯಕ್ರಮ ತುಂಬ ಯಶಸ್ವಿಯಾಗಿದೆ.ಇದು ಬೃಹತ್ ಜಯಂತಿ ಗವಿಮಠ ಬೆಟ್ಟದಹಳ್ಳಿ ಚಂದ್ರಶೇಖರಸ್ವಾಮಿಗಳು ನೇತೃತ್ವದಲ್ಲಿ ಉತ್ತಮ ಸಂಘಟನೆ ಭಕ್ತರ ಸಹಕಾರದೊಂದಿಗೆ ವ್ಯವಸ್ಥಿತ ಜಯಂತಿಗೆ ಅನುವು ಮಾಡಿಕೊಟ್ಟಿದ್ದಾರೆ.ಚಂದ್ರಶೇಖರಸ್ವಾಮಿಗಳು ಸಿದ್ದರಾಮೇಶ್ವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದಾರೆ.
ಇದೆ ಸಂದರ್ಭದಲ್ಲಿ ಸಿದ್ದರಾಮ ಸಂಪುಟ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಬಾಳೆ ಹೊಸರು ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಮಾತನಾಡಿ ಬೆಟ್ಟದಹಳ್ಳಿ ಚಂದ್ರಶೇಖರಸ್ವಾಮಿಗಳು ಸಿದ್ದರಾಮ ಜಯಂತಿಯ ಜವಬ್ದಾರಿಯನ್ನು ವಹಿಸಿಕೊಂಡು ಪ್ರಪಂಚದ ಏಳು ಅದ್ಬುತಗಳಲ್ಲಿ ಎಂಟನೇ ಅದ್ಬುತ ಎಂಬತೆ ಶ್ರೀ ಸಿದ್ದರಾಮ ಜಯಂತಿಯನ್ನು ಅದ್ದೂರಿಯಾಗಿ ವ್ಯವಸ್ಥೆಗೂಳಿಸಿದ್ದಾರೆ.ಕಾಯಕ ತತ್ವ ಪರಿಸರದ ಬಗ್ಗೆ ಕಾಳಜಿ ಬಸವಾದಿ ಶರಣರ ತತ್ವ ಚಿಂತನೆಗಳನ್ನು ಬಿಂತರಿಸುತ್ತ ಶ್ರೀಮಠವನ್ನು ಉನ್ನತ ಮಠಕ್ಕೆ ತಂದಿದ್ದಾರೆ.ಎಂತಹ ಜವಬ್ದಾರಿ ಕೆಲಸವನ್ನು ನೀಡಿದರೂ ನಿಬಾಯಿಸುವ ಶಕ್ತಿ ಚಂದ್ರಶೇಖರಸ್ವಾಮಿಗಳಿಗೆ ಇದೆ ಎಂದರು.
ಸಿದ್ದರಾಮ ಜಯಂತಿಯ ರೂವಾರಿಗಳು ಹಾಗೂ ಬೆಟ್ಟದಹಳ್ಳಿ ಗವಿಮಠಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮಿಗಳು ಮಾತನಾಡಿ ಇಂತಹ ಬೃಹತ್ ಜಯಂತಿ ಕಾರ್ಯಕ್ರಮಗಳು ಕೇವಲ ಒಬ್ಬರಿಂದ ಆಚರಿಸಲು ಸಾಧ್ಯವಿಲ್ಲ ಭಕ್ತರ ಸಮುದಾಯದವರ ರಾಜಕಾರಣಿಗಳ ಎಲ್ಲರ ಸಹಕಾರದಿಂದ ಈ ಬೃಹತ್ ಸಿದ್ದರಾಮ ಜಯಂತಿ ನಡೆಯುತ್ತಿದೆ.ಇದಕ್ಕೆ ಸಹಕರಿಸಿದ್ದ ಎಲ್ಲರಿಗೂ ಅಭಿನಂದಿಸಿದ್ದರು.
ಯುವ ಮುಖಂಡ ಬಿ ವೈ ವಿಜೀಯಂದ್ರ ಸಿದ್ದರಾಮೇಶ್ವರ ಜಯಂತಿ ಹಾಗೂ ಸಂಕ್ರಾತಿ ಹಬ್ಬದ ಶುಭಾಶಯಗಳು ಹೇಳಿ ಮಾತನಾಡಿದ ಅವರು ಸಮಾಜ ಒಡೆಯುವ ಯಾವ ಪ್ರಯತ್ನಗಳು ನಡೆಯಲ್ಲ ಮತ್ತೆ ಸಮಾಜ ಕಟ್ಟುವ ಕೆಲಸವಾಗುತ್ತಿದೆ.ನಮ್ಮ ಸಮಾಜಕ್ಕೆ ಪರಂಪರೆ ಇದೆ ಕರ್ನಾಟಕ ಅಭಿವೃದ್ಧಿಗಾಗಿ ಸಮಾಜದ ಜನರ ನೋವಿಗೆ ಸ್ಪಂದಿಸಲು ರಾಜಕಾರಣದಲ್ಲಿ ದಾಖಲೆ ಬರೆಯಬೇಕಾಗಿದೆ.ಮಾಜಿ ಮುಂಖ್ಯಮಂತ್ರಿಗಳಾದ ಬಿ ಎಸ್ ಯೂಡಿವರಪ್ಪನವರು ಸಮಾನತೆ ಸಮಾಜವನ್ನು ನಿರ್ಮಾಣ ಮಾಡಲು ಕನಸು ಕಂಡಿದ್ದಾರೆ.ನಿಮ್ಮೆಲ್ಲರ ಪ್ರೀತಿ ಸಹಕಾರ ವಿರಲಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಮ್ಮಡಿಹಳ್ಳಿ ವಿರಕ್ತ ಮಠದ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮಿಗಳು, ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣಸ್ವಾಮಿಗಳು,ಚಿಕ್ಕತೋಟ್ಲಿಕೆರೆ ಅಡವು ಶಿವಲಿಂಗಸ್ವಾಮಿಗಳು,ಮಾಜಿ ಸಂಸದ ಜಿ ಎಸ್ ಬಸವರಾಜು ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ