ಕುವೆಂಪು ಬಡಾವಣೆಯಲ್ಲಿರುವ ಉದ್ಯಾನಕ್ಕೆ ಡಾ.ರಾಜ್ ಹೆಸರಿಡಲು ಮನವಿ

ಹಿರಿಯೂರು :

     ನಗರದ ಪುಷ್ಪಾಂಜಲಿ ಚಿತ್ರಮಂದಿರಕ್ಕೆ ಹೊಂದಿಕೊಂಡಿರುವ ಕುವೆಂಪು ಬಡಾವಣೆಯಲ್ಲಿರುವ ಉದ್ಯಾನವನಕ್ಕೆ ಡಾ. ರಾಜ್‍ಕುಮಾರ್ ಹೆಸರನ್ನು ಇಡಬೇಕು ಎಂದು ಬಿ.ಕಾಂತರಾಜ್ ಅಭಿಮಾನಿ ಬಳಗದವರು ಪೌರಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.

      ರಾಜ್‍ಕುಮಾರ್ ಹೆಸರಿನ ನಾಮಕರಣದ ನಂತರ ನಮ್ಮ ಅಭಿಮಾನಿ ಬಳಗಕ್ಕೆ ಉದ್ಯಾನದ ನಿರ್ವಹಣೆಯನ್ನು ವಹಿಸಿದಲ್ಲಿ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತೇವೆ ಎಂದು ಬಳಗದ ಅಧ್ಯಕ್ಷ ಎಚ್.ಟಿ ಪ್ರಸನ್ನ, ಆರ್.ಮಹೇಶ್, ಶಿವಕುಮಾರ್ ಭರವಸೆ ನೀಡಿದ್ದಾರೆ.
ಪೌರಯುಕ್ತ ಎಚ್.ಮಹಂತೇಶ್, ನಗರಸಭಾಧ್ಯಕ್ಷ ಮಂಜುಳಾ, ಉಪಾಧ್ಯಕ್ಷೆ ಇಮ್ರಾನಬಾನು, ಈ ವಿಷಯವನ್ನು ಕೌನ್ಸಿಲ್ ಸಭೆಯಲ್ಲಿ ಮಂಡಿಸುತ್ತೇವೆ. ಜತೆಗೆ ಬಡಾವಣೆಯ ನಿವಾಸಿಗಳ ಅಭಿಪ್ರಾಯವನ್ನೂ ಪಡೆಯಬೇಕಿದೆ. ಸಾರ್ವಜನಿಕರು ಸಂಘ-ಸಂಸ್ಥೆಗಳು ಉದ್ಯಾನ ನಿರ್ವಹಣೆ ಮಾಡಲು ಮುಂದೆ ಬಂದಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link