ಹೊಳಲ್ಕೆರೆ:
ಮಮ್ಮಿ ಡ್ಯಾಡಿ ಸಂಸ್ಕತಿಯಿಂದ ಕನ್ನಡ ಭಾಷೆಗೆ ಉಳಿಗಾಲವಿಲ್ಲ. ಎಂದು ಡಾ.ಶ್ರೀ ಪಂಡಿತಾರಾಧ್ಯ ಸ್ವಾಮಿಗಳು 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು.
ಒತ್ತಾಯ ಪೂರ್ವಕವಾಗಿ ಮಕ್ಕಳಿಗೆ ಇಂಗ್ಲೀಷ್ ಭಾಷೆಯನ್ನು ಕಲಿಸುತ್ತಾಇದ್ದೇವೆ. ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಬೇಕು. ಮಮ್ಮಿ ಎಂದರೆ ಶವದ ಪೆಟ್ಟಿಗೆಯನ್ನು ಕರೆಯುತ್ತಾರೆ. ಇಂತಹ ಭಾಷೆಯ ಮುಂದೆ ಕನ್ನಡವನ್ನು ಹೇಗೆ ಉಳಿಸಿಕೊಳ್ಳಲು ಸಾಧ್ಯ. ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗಿ ಮಕ್ಕಳನ್ನು ಮಾರಿಕೊಳ್ಳುತ್ತಾ ಇದ್ದೇವೆ. ಉನ್ನತ ಸ್ಥಾನಕ್ಕೆ ಹೋದವರೆಲ್ಲ ಇಂಗ್ಲೀಷ್ ಕಲಿತುಕೊಂಡು ಹುಟ್ಟಿದವರಲ್ಲ. ಇಂಗ್ಲೀಷ್ ಕಲಿಯದಿದ್ದರೆ ಭವಿಷ್ಯ ಹಾಳಾಗುತ್ತದೆ ಅನ್ನು ಭ್ರಹ್ಮೆಯಲ್ಲಿದ್ದಾರೆ. ಇಂಗ್ಲೀಷ್ ಓದಿದ ಮಕ್ಕಳು ಕಾರ್ಯ ಪ್ರಜ್ಞೆಯನ್ನು ಬೆಳೆಸಿಕೊಂಡಿಲ್ಲ. ಆದರೆ ಸರ್ಕಾರ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಬೇಕು ಎಂದಿದ್ದಾರೆ. ಒಂದು ಸಾವಿರ ಶಾಲೆ ಆಂಗ್ಲ ಮಾಧ್ಯಮದಲ್ಲಿ ತೆಗೆದರೆ 10 ಸಾವಿರ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚು ಹೋಗುತ್ತವೆ ಎಂದರು.
ಸ್ವಾಮಿಗಳು ಪಕ್ಷದವರನ್ನು ಟೀಕೆ ಮಾಡುತ್ತಾರೆ ಅನ್ನುತ್ತಾರೆ. ನಾವು ಯಾವ ಪಕ್ಷದವರು ಅಲ್ಲ. ಸ್ವಚ್ಚರಾಜಕೀಯ ವ್ಯವಸ್ಥೆ ಬೇಕು.
ಪ್ರಾಮಾಣಿಕ ವ್ಯಕ್ತಿಗೆ ಆಯ್ಕೆ ಮಾಡುವ ಮನಸ್ಥಿತಿ ಹೊಂದಬೇಕು. ಸ್ವಲ್ಪ ಕುಡಿದು ಓಟು ಹಾಕಬೇಡಿ. ಜಯಗಳಿಸಿದ ನಂತರ ಹೆಚ್ಚಿಗೆ ಕುಡಿದು ಗಲಾಟೆ ಮಾಡುತ್ತಾರೆ.
ಸಾಹಿತ್ಯ ಓದು ಪ್ರೌವೃತ್ತಿ ಬೆಳೆಸಿಕೊಳ್ಳಿ, ಪಾಠದ ಜೊತೆಗೆ, ಪಠ್ಯೇತರ ಚಟುವಟಿಕೆಗಳು ಇರಬೇಕು, ಸಾಹಿತ್ಯ ವಚನಗಳು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.ವೇದಿಕೆಯಲ್ಲಿ ಕ.ಸಾ.ಪ ತಾಲ್ಲುಕು ಅಧ್ಯಕ್ಷ ಲೋಕೇಶ್, ಸಾಹಿತಿ ಜಿ.ಎನ್.ಬಸವರಾಜಪ್ಪ, ಖ್ಯಾತ ಸಾಹಿತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ತಾಳ್ಯ ಚಂದ್ರಶೇಖರ್, ತಾ.ಪಂ. ಅಧ್ಯಕ್ಷೆ ಸುಜಾತ ಧನಂಜಯ್ ನಾಯ್ಕ್, ಜಿ.ಪಂ. ಸದಸ್ಯರುಗಳಾದ ತಿಪ್ಪೇಸ್ವಾಮಿ, ಮಹೇಶ್ವರಪ್ಪ, ತಾ.ಪಂ. ಸದಸ್ಯೆ ಗಿರಿಜ ಅಜ್ಜಯ್ಯ, ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜ್, ಮಾಜಿ ಜಿ.ಪಂ ಸದಸ್ಯೆ ಭಾರತಿ ಕಲ್ಲೇಶ್, ಸ.ನೌ.ಸಂಘದ ಅಧ್ಯಕ್ಷ ಎನ್.ಶಿವಮೂರ್ತಿ, ಶಿವಪುರ ಗ್ರಾ.ಪಂ ಉಪಾಧ್ಯಕ್ಷ ಗುರುಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
