ನವದೆಹಲಿ:
ಇಂದಿರಾಗಾಂಧಿ ಕುಟುಂಬದ ಹೊಸ ರಾಜಕೀಯದ ಭರವಸೆ ಎಂದೆ ಕರೆಯಲ್ಪಡುವ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಕಾಂಗ್ರೇಸ್ ಈಗ ಮೈ ಕೊಡವಿನಿಂತ ಸಿಂಹದಂತಾಗಿದೆ ಇದರಿಂದಾಗಿ ಇಷ್ಟು ದಿನ ಮಹಾ ಮೈತ್ರಿಯ ಮಾತನಾಡುತ್ತಿದ್ದ ಕಾಂಗ್ರೇಸ್ ಇದೀಗ ಸ್ವತಂತ್ರ ಸ್ಪರ್ಧೆಗೆ ನಿಲ್ಲುವ ಯೋಚನೆಯಲ್ಲಿದ್ದಂತೆ ಕಾಣುತ್ತಿದೆ.
ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷ ಮತ್ತು ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮಾತುಕತೆ ನಡೆಸಲು ಉತ್ಸುಕತೆ ತೋರಿತ್ತು. ಆದರೆ ಇತ್ತೀಚಿನ ಬೆಳವಣಿಗೆ ಬಳಿಕ ಕಾಂಗ್ರೆಸ್ ಪಕ್ಷದಿಂದ ಇಂತಹ ಯಾವುದೇ ನಡೆ ಕಂಡುಬಂದಿಲ್ಲ. ಪ್ರಮುಖವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದು ಮತ್ತು ಇದಕ್ಕೆ ಕೆಲ ಯುಪಿಎ ಮೈತ್ರಿ ಪಕ್ಷಗಳೂ ಬೆಂಬಲ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








