ಬೆಂಗಳೂರು
ಮಹಿಳೆಯರು ಕೆಲ ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳ್ಳದೆ ಸಮಾಜಮುಖಿ ಕಾರ್ಯ ಗಳಲ್ಲಿ ಭಾಗಿಯಾಗಬೇಕು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಮಹಿಳೆಯರು ಸಮಾಜಮುಖಿ ಕಾರ್ಯ ಗಳಲ್ಲಿ ಭಾಗಿಯಾಗುವ ಮೂಲಕ ಅಭಿವೃದ್ಧಿ ಯತ್ತ ಸಾಗಬೇಕು.ಅಷ್ಟೇ ಅಲ್ಲದೆ, ಎಲ್ಲರೂ ಒಟ್ಟುಗೂಡಿ ಸಾಮಾಜಿಕ, ಮಹಿಳಾಪರ ಯೋಜನೆಗಳನ್ನು ಅನುಷ್ಟಾನಕ್ಕೆ ಮುಂದಾಗಬೇಕು ಎಂದರು.
ನಗರದಲ್ಲಿಂದು ಫ್ರೀಡಂ ಪಾರ್ಕ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ, ಮಹಿಳಾ ಸಂಸ್ಕೃತಿಕ ಉತ್ಸವ ಸಮಾರಂಭ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸಾಹಿತಿ ಡಾ.ಹೆಚ್.ಎಲ್.ಪುಷ್ಪ ಮಾತನಾಡಿ, ಇತ್ತೀಚಿಗೆ ಚರ್ಚೆ ವಿಷಯಗಳಾಗಿ ಮಹಿಳೆ ಒಳಗಾಗಯತ್ತಿದ್ದು, ದೇಹ, ದೇವಸ್ಥಾನ ಪ್ರವೇಶ ಸೇರಿದಂತೆ ಹೆಣ್ಣಿನ ತೆರೆದ ವಿಚಾರಗಳು ಚರ್ಚೆ ಆಗುತ್ತಿವೆ ಎಂದರು.
12ನೇ ಶತಮಾನದಲ್ಲಿ ನಮ್ಮ ಅಸ್ತಿತ್ವಕ್ಕೆ ಹಾಗೂ ಸಮಾನತೆಗಾಗಿ ಏಕೆ ನಾವು ಹೋರಾಡ ಬೇಕಿದೆ. ಪ್ರಧಾನವಾಗಿ ದೇವಸ್ಥಾನಗಳ ಪ್ರವೇಶ ಯಾಕೆ ಬೇಕು. ಮುಟ್ಟು ಸೂತಕಗಳು ಧಾರ್ಮಿಕ ಹಿನ್ನೆಲ ಪ್ರಶ್ನಿಸಲಾಗುತ್ತಿದೆ.ಅಲ್ಲದೆ ಆಕೆಯ ಅಸ್ತಿತ್ವ ಪ್ರಶ್ನೆಗಳ ಅರ್ಹವಾಗಿದೆ ಎಂದು ವಿಶ್ಲೇಷಣೆ ಮಾಡಿದರು.
ಎಲ್ಲಿಯವರೆಗೆ ಶೀಲ ಪ್ರಾವಿತ್ಯತೆ ಇರುತ್ತದೋ ಅಲ್ಲಿಯವರೆಗೆ, ಅಸಮಾನತೆ ಇರುತ್ತದೆ. ಗಂಡಿಗೆ ಇರದ ಶೀಲ ಹೆಣ್ಣಿಗೆ ಯಾಕೆ ಬೇಕು. ಮಹಿಳೆಗೆ ಕುಟುಂಬ ಸಮಾಜ ಎಲ್ಲವನ್ನೂ ಮೀರಲು ಕಷ್ಟಸಾಧ್ಯ. ಇವಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ತಿಳಿಸಿದರು.
ವಚನಕಾರರು ಮುಟ್ಟು ಮೈಲಿಗೆ ದೂರ ವಿಟ್ಟಿದ್ದರು ಎಂದ ಅವರು, ಕೋರ್ಟ್ ಆದೇಶಿದ್ದರೂ ಪಡೆಯಲಾರದ ಸ್ಥಿತಿಯಲ್ಲಿದ್ದವೆ. ಹೆಣ್ಣುನ್ನು ದೈಹಿಕ ಲಾಂಛನಗಳ ಮೂಲಕ ಗುರುತಿಸಲಾಗುತ್ತದೆ. ದೇವರುಗಳಿದ್ದಾರೆ ಎಂಬ ಕಲ್ಪನೆಯಲ್ಲಿ ಗಂಡು ಹೆಣ್ಣಿನ ಕೆತ್ತನೆಗಳಿವೆ. ಭೋಗಗಳನ್ನು ದಾಟಿಯೇ ಯೋಗದ ಮುಕ್ತಿ ಯ ಕಡೆಗೆ ಸಾಗುವುದು ಎಂಬರ್ಥವಿದೆ. ಇನ್ನೂ ಬಲವಂತದ ದೀಕ್ಷೆ ಗಳು ಸನ್ಯಾಸಗಳ ಮೇಲೂ ಚಿಂತನೆ ಅಗತ್ಯ ಎಂದರು.ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ವಸುಂಧಾರ ಭೂಪತಿ, ಪ್ರಮೀಳಾ ಶಂಕರ್ ಇನ್ನಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ