ಕುಣಿಗಲ್
ಮಕ್ಕಳ ಸುಪ್ತಚೇತನದಲ್ಲಿ ಅಡಗಿರುವ ಪ್ರತಿಭೆಯನ್ನ ಗುರುತಿಸುವಂತಹ ಕೆಲಸವನ್ನ ಪೋಷಕರು ಮತ್ತು ಶಿಕ್ಷಕರು ಮಾಡುವ ಮೂಲಕ ಅದಕ್ಕೆ ಪೂರಕವಾಗಿ ಶಿಕ್ಷಣ ನೀಡಿದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಡಾ. ರಂಗನಾಥ್ ತಿಳಿಸಿದರು.
ಪಟ್ಟಣದ ಮಹಾತ್ಮಗಾಂಧಿ ಪದವಿಪೂರ್ವ ಕಾಲೇಜು ಆವರಣದಲ್ಲಿ ರಾಜ್ಯ ಕೆಚ್ಚೆದೆಯ ವೀರ ಕನ್ನಡಿಗರ ವೇದಿಕೆಯು ಹಮ್ಮಿಕೊಂಡಿದ್ದ ಅಂಬಿ ಅಭಿಮಾನೋತ್ಸವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡುತ್ತಾ, ಕುಮಾರಿ ಸಂಭ್ರಮ ಶ್ರೀನಿವಾಸ್ ಎಂಬ ಬಾಲಕಿ ರಾಜ್ಯ ಮುಖ್ಯಮಂತ್ರಿಗಳ ಹೆಸರು ಹಾಗೂ ಖ್ಯಾತ ಚಿತ್ರನಟ ದಿ.ಅಂಬರೀಶ್ ಅವರ 200ಕ್ಕೂ ಹೆಚ್ಚು ಸಿನಿಮಾ ಹೆಸರುಗಳನ್ನ ಹಾಗೂ ಸಾಹಿತಿಗಳು, ಚಿಂತಕರ ವಿಚಾರಧಾರೆಗಳನ್ನ ನಿರಂತರವಾಗಿ ಅಭ್ಯಸಿಸಿ ಆಧುನಿಕ ತಂತ್ರಜ್ಞಾನದಲ್ಲಿ ಈ ಪುಟ್ಟ್ಟ ಬಾಲಕಿಯೇ ಕಂಪ್ಯೂಟರ್ ಜ್ಞಾನವಾಗಿರುವುದು.
ಈಕೆಯ ಅಗಾಧವಾದ ಶಕ್ತಿಯು ಬೆಳವಣಿಗೆಗೆ ನಾಂದಿಯಾಗಿದ್ದು, ಮಕ್ಕಳಲ್ಲಿ ಅಡಗಿರುವ ಅನೇಕ ಪ್ರತಿಭೆಗಳನ್ನ ತಂದೆ-ತಾಯಿಗಳು, ಗುರುಗಳು ಹೊರತೆಗೆಯುವಂತಹ ಕೆಲಸಗಳನ್ನ ಸಮರ್ಪಕವಾಗಿ ಮಾಡಬೇಕಾಗಿದೆ. ವಿಶ್ವದ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯನ್ನ ಕಲಿಸುವುದು ಅತ್ಯವಶ್ಯಕವಾಗಿದ್ದು, ನಾವುಗಳು ದೇಶದಲ್ಲಿ ಕನ್ನಡ, ಆಂಗ್ಲ ಭಾಷೆ, ಹಿಂದಿಯನ್ನ ಕಡ್ಡಾಯವಾಗಿ ಕಲಿಸುವಂತಹ ಕೆಲಸಗಳನ್ನ ಮಾಡಬೇಕಾಗಿದೆ. ಮಕ್ಕಳಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು, ಅವರ ಬದುಕು ಸಾರ್ಥಕವಾಗುವಂತೆ ಮಾಡಬೇಕಾಗಿದೆ ಎಂದರು.
ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಗಮನ ಹರಿಸಿದ್ದು, ಹೇಮಾವತಿಯ ನೀರು 24 ಟಿಎಂಸಿ ನೀರು ಈ ಜಿಲ್ಲೆಗೆ ಹರಿಯಬೇಕಾಗಿದ್ದು, ನಮಗೆ 3 ಟಿಎಂಸಿ ನೀರು ಹರಿಯದೆ ತಾಲ್ಲೂಕಿಗೆ 25 ವರ್ಷಗಳಿಂದ ಅನ್ಯಾಯವಾಗಿದೆ. ಇದರಿಂದ ಹೋರಾಟ ನಡೆಸಿ ಎಕ್ಸ್‍ಪ್ರೆಸ್ ಚಾನಲ್ ಮಾಡಲು ಹೋರಾಟ ಮಾಡಲಾಗುವುದು. ಈ ಹೋರಾಟಕ್ಕೆ ಕ್ಷೇತ್ರದ ಮತದಾರರು, ರೈತರು ಕೈಜೋಡಿಸಬೇಕೆಂದರು.
ಪಟ್ಟಣದ ಅಭಿವೃದ್ಧಿಗೆ ಈಗಾಗಲೇ 8 ಕೋಟಿ ಹಣ ಬಿಡುಗೊಡೆಗೊಂಡಿದ್ದು, ರಸ್ತೆ, ಚರಂಡಿ , ಡಾಂಬರೀಕರಣ ಕೆಲಸವನ್ನ ಕೈಗೊಳ್ಳಲಾಗಿದ್ದು, ನಿವೇಶನ ರಹಿತ ಜನರಿಗೆ ನಿವೇಶನ ಕೊಡಲು ಈಗಾಗಲೇ 14 ಎಕರೆ ಪ್ರದೇಶದಲ್ಲಿ 550 ನಿವೇಶನಗಳನ್ನ ಗುರುತಿಸಿದ್ದು, ಈಗಾಗಲೇ 4 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಮೊದಲ ಹಂತದಲ್ಲಿ ಬಡವರನ್ನ ಆಯ್ಕೆ ಮಾಡಿ ನೀಡಲಾಗುವುದೆಂದರು.
ಈ ಸಂದರ್ಭದಲ್ಲಿ ವಿಷ್ಣು ಸೇನೆ ಸಮಿತಿಯ ರಾಜ್ಯಾಧ್ಯಕ್ಷ ಶ್ರೀನಿವಾಸ್, ಕರ್ನಾಟಕ ನವನಿರ್ಮಾಣ ಸೇನೆಯ ಯತಿರಾಜ್ , ಸೋಮಶೇಖರ್, ಕೆಚ್ಚೆದೆಯವೀರ, ಕನ್ನಡಿಗರ ರಾಜ್ಯಾಧ್ಯಕ್ಷ ಸಂಭ್ರಮ ಶ್ರೀನಿವಾಸ್, ಪುರಸಭಾ ಸದಸ್ಯ ಶಂಕರ್, ಪತ್ರಕರ್ತ ರಾಮಚಂದ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ






