ಬೆಂಗಳೂರು
ಉದ್ಯೋಗದ ಆಮಿಷವೊಡ್ಡಿ ಮಹಿಳೆಯೊಬ್ಬರಿಂದ ತಾಳಿಯಿದ್ದ ಚಿನ್ನದ ಸರವನ್ನು ಬಿಚ್ಚಿಸಿಕೊಂಡು ಪರಾರಿಯಾಗಿರುವ ಖತರ್ನಾಕ್ ಖದೀಮನಿಗಾಗಿ ಕೋಣನಕುಂಟೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ..
ಕನಕಪುರ ರಸ್ತೆಯಲ್ಲಿರುವ ಮೆಟ್ರಿ ಕ್ಯಾಶ್ ಅಂಡ್ ಕ್ಯಾರಿ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಅನುರಾಧಾ ಎಂಬುವರನ್ನು ನಂಬಿಸಿದ ಖದೀಮ ಅವರ ಕೊರಳಲ್ಲಿದ್ದ ತಾಳಿ ಸರ ಪಡೆದು ವಂಚಿಸಿದ್ದಾನೆ.
ಕಷ್ಟವಿದ್ದ ಕಾರಣ ಅನುರಾಧಾ ಕೆಲಸ ಹುಡುಕುವಲ್ಲಿ ನಿರತರಾಗಿದ್ದರು ಹಾಗೂ ಕೋಣನಕುಂಟೆ ಸಮೀಪದ ಗಣಪತಿಪುರ ಜಿಎಸ್‍ಎಸ್ ಶಾಲೆ ಹಿಂಭಾಗದ ಸಣ್ಣ ಮನೆಯೊಂದರಲ್ಲಿ ವಾಸವಾಗಿದ್ದರು.
ಅನುರಾಧಾ ಕೆಲಸ ಹುಡುಕುತ್ತಿದ್ದ ವೇಳೆ ಯಶೋಧ ಎನ್ನುವವರ ಮೂಲಕ ಪರಿಚಯವಾದ ವಂಚಕ, ಅನುರಾಧಾ ಅವರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ವಂಚನೆ ಎಸಗಿದ್ದಾನೆ. ನಿಮ್ಮ ತಾಳಿಯನ್ನು ಬಿಚ್ಚಿಕೊಡಿ, ಬಡತನದಿಂದ ತಾಳಿ ಗಿರವಿ ಇಡಲು ಮುಂದಾಗಿದ್ದಾರೆಂದು ಕನಿಕರದ ಆಧಾರದ ಮೇಲೆ ನಿಮಗೆ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.
ಆದರೆ, ಫೋನ್ ನಂಬರ್ ನೀಡಿದ್ದ ಯಶೋಧ ಅವರನ್ನು ವಿಚಾರಣೆ ನಡೆಸಿದ ವೇಳೆ ವ್ಯಕ್ತಿ ನನಗೆ ಪರಿಚಯವಿಲ್ಲ. ಬೀದಿಯಲಷ್ಟೆ ಪರಿಚಯವಾಗಿದ್ದ ಎಂದಿದ್ದು ಪೊಲೀಸರು ದುಷ್ಕರ್ಮಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







