ಬೆಂಗಳೂರು
ಬೊಮ್ಮನಹಳ್ಳಿಯ ರೂಪೇನ ಅಗ್ರಹಾರದ ಸ್ಮಶಾನದ ಕಾವಲು ಕಾಯುತ್ತಿದ್ದ ವೃದ್ಧೆ ಯಲ್ಲಮ್ಮ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕಟ್ಟಿಗೆಯಿಂದ ಮಾಡಿದ ಹಲ್ಲೆಯಿಂದ ಮೃತಪಟ್ಟಿರುವ ಪತ್ತೆಯಾಗಿದೆ.
ಹಲವು ಬಾರಿ ಊಟ ಹಾಕಿ ಮಗನಂತೆ ನೋಡಿಕೊಂಡಿದ್ದ ಯಲ್ಲಮ್ಮ(75)ನ ಮೇಲೆ ಸ್ನೇಹಿತರ ಜೊತೆಗೂಡಿ ಸಾಮೂಹಿಕ ಅತ್ಯಾಚಾರ ನಡೆಸಿ ಕಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿ ಕೊಲೆಗೈದ ಹೀನ ಕೃತ್ಯದಲ್ಲಿ ಭಾಗಿಯಾಗಿದ್ದ ಹರೀಶ್‍ನನ್ನು ಬೊಮ್ಮನಹಳ್ಳಿ ಪೆÇಲೀಸರು ಬಂಧಿಸಿ ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಗಾಂಜಾ ಅಮಲಿನಲ್ಲಿ ಹರೀಶ ಮತ್ತವನ ಸ್ನೇಹಿತರು ಯಲ್ಲಮ್ಮ(75)ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದು ಹರೀಶ್‍ನನ್ನು ಬಂಧಿಸಿ ಉಳಿದವರ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.
ರೂಪೇನ ಅಗ್ರಹಾರದ ಎನ್‍ಜಿಆರ್ ಬಡಾವಣೆಯ ಸ್ಮಶಾನದ ಕಾವಲು ಕಾಯುವ ಕೆಲಸ ಮಾಡುತ್ತಿದ್ದ ಯಲ್ಲಮ್ಮ ಅಲ್ಲಿನ ಕೊಠಡಿಯೊಂದರಲ್ಲಿ ವಾಸವಾಗಿದ್ದರು.ಹರೀಶ್ ಹಾಗೂ ಆತನ ಕೆಲ ಸ್ನೇಹಿತರು ಕಳೆದ ಶನಿವಾರ ಸಂಜೆ ಯಲ್ಲಮ್ಮ ಅವರ ಕೊಠಡಿಗೆ ನುಗ್ಗಿ ಯಲ್ಲಮ್ಮ ಮುಖಕ್ಕೆ ಕಟ್ಟಿಗೆಯಿಂದ ಹೊಡೆದು, ಎದೆ ಭಾಗವನ್ನು ಕಚ್ಚಿದ್ದಾರೆ. ಅಷ್ಟೇ ಅಲ್ಲದೆ ಗುಪ್ತಾಂಗಕ್ಕೂ ಗಾಯ ಮಾಡಿ ಅತ್ಯಾಚಾರ ಎಸಗಿದ್ದಾರೆ.
ಸ್ಮಶಾನದಲ್ಲಿ ಕುರಿ ಕಟ್ಟಲು ಹೋಗಿದ್ದ ಮಹಿಳೆಯೊಬ್ಬರಿಗೆ ಯಲ್ಲಮ್ಮ ವಾಸವಿದ್ದ ರೂಮ್‍ನಿಂದ ಧ್ವನಿ ಕೇಳಿದೆ. ತಕ್ಷಣವೇ ಅಲ್ಲಗೆ ಹೋಗಿ ಬಾಗಿಲು ತೆರೆಯುತ್ತಿದ್ದಂತೆ ವೃದ್ಧೆ ಯಲ್ಲಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಚೀರಿಕೊಂಡಿದ್ದಾರೆ. ಒಳಗಿದ್ದ ಹರೀಶ್ ಹಾಗೂ ಕೆಲ ಯುವಕರು ಇರುವುದನ್ನು ನೋಡಿ ಗಾಬರಿಯಿಂದ ಓಡಿ ಹೋಗಿ ಸ್ಥಳೀಯರಿಗೆ ಹಾಗೂ ವೃದ್ಧೆಯ ಮಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳೀಯರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಕುರಿತು ಸ್ಥಳೀಯರು ಕರೆ ಮಾಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೊಮ್ಮನಹಳ್ಳಿ ಠಾಣಾ ಪೊಲೀಸರು ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ.
ಮೃತ ವೃದ್ಧೆಯ ಸಂಬಂಧಿಕರು ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಹರೀಶ್‍ನನ್ನು ವಶಕ್ಕೆ ಪಡೆದು ಇತರರಿಗಾಗಿ ಶೋಧ ನಡೆಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








