ದಾವಣಗೆರೆ 
‘ತಂಬಾಕು ತಿಂತೀರಿ ಯಾಕೆ? ಕ್ಯಾನ್ಸರ್ ಬಂದೀತು ಜೊಕೆ.. ಬದಲಾಯಿಸಿ ಬದಲಾಯಿಸಿ ಜೀವನ ಶೈಲಿಯನ್ನು ಬದಲಾಯಿಸಿ.. ಘೋಷಣೆಗಳನ್ನು ಕೂಗುವ ಮೂಲಕ ಸಿ.ಜಿ.ಆಸ್ಪತ್ರೆಯಿಂದ ವಿದ್ಯಾರ್ಥಿಭವನ, ಕೆ.ಇ.ಬಿ. ಸರ್ಕಲ್, ಎ.ವಿ.ಕೆ. ರೋಡ್, ರಾಮ್ ಆಂಡ್ ಕೋ ಸರ್ಕಲ್ ಮಾರ್ಗವಾಗಿ ಇಂದು ಕ್ಯಾನ್ಸರ್ ಜಾಗೃತಿ ಜಾಥಾ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚೀಗಟೇರಿ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಸರ್ವೇಕ್ಷಣಾ ಘಟಕದ ಎನ್.ಸಿ.ಡಿ.ಕೋಶ, ಸಿ.ಜಿ. ಆಸ್ಪತ್ರೆ ಸ್ಕೂಲ್ ಆಫ್ ನರ್ಸಿಂಗ್, ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಇಂದು ಏರ್ಪಡಿಸಲಾಗಿದ್ದ ಕ್ಯಾನ್ಸರ್ನ ಕುರಿತು ಅರಿವು ಮತ್ತು ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಎಮ್.ಎಸ್.ತ್ರಿಪುಲಾಂಭ ಅವರು ಚಾಲನೆ ನೀಡಿದರು.
ಜಾಥಾದಲ್ಲಿ ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿಗಳಾದ ಡಾ. ಸರೋಜಬಾಯಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಂಗಾಧರ್, ವೈದ್ಯಾಧಿಕಾರಿಗಳು, ಸಿ.ಜಿ.ಆಸ್ಪತ್ರೆ ಸ್ಕೂಲ್ ಆಫ್ ನರ್ಸಿಂಗ್ನ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








