ನೇಣಿಗೆ ಶರಣಾದ ಕಿರುತೆರೆ ನಟಿ…!!!

ಹೈದ್ರಾಬಾದ್ :

     ತೆಲುಗಿನ ಪ್ರಸಿದ್ಧ ಕಿರುತೆರೆ ನಟಿಯಾದ ನಾಗ ಝಾನ್ಸಿ ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ .ತೆಲುಗಿನ ಜನಪ್ರಿಯ ದಾರಾವಾಹಿಯಾದ ಪವಿತ್ರ ಬಂಧಂನಲ್ಲಿ ನಟಿಸುತ್ತಿದ್ದ ಝಾನ್ಸಿ ನಿನ್ನೆ ಶ್ರೀನಗರ್ ಕಾಲೋನಿಯ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

      ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ತಕ್ಷಣವೇ ಆವರನ್ನು ಹತ್ತಿರದ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಆಕೆ ಕೊನೆಯುಸಿರೆಳೆದಿದ್ದಾಗಿ ವೈದ್ಯರು ತಿಳಿಸಿದ್ದರು. 

      ಅವರು ಆತ್ಮಹತ್ಯೆಗೆ ಶರಣಾಗಿರುವ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಅವರ ಮೊಬೈಲ್ ಫೋನ್ ಕೂಡ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. 

      ಮೇಲ್ನೋಟಕ್ಕೆ ಈ ಸಾವಿಗೆ ನಟಿಯ ಪ್ರೇಮ ವೈಫಲ್ಯವೇ ಕಾರಣವೆಂದು ಶಂಕಿಸಲಾಗಿದ್ದು.  ಕಳೆದ 6 ತಿಂಗಳಿನಿಂದ ಸೂರ್ಯ ಎನ್ನುವ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು ಆದರೆ ಆಕೆಯ ಕುಟುಂಬದವರಿಂದ ಈ ಬಗ್ಗೆ ಸಾಕಷ್ಟು ವಿರೋಧವಿತ್ತು ಎನ್ನಲಾಗಿದೆ.ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link