ಮಾರ್ಕೆಟ್ ವೇಡಿ ಮನೆ ಮೇಲೆ ಪೊಲೀಸ್ ದಾಳಿ…!!!!

ಬೆಂಗಳೂರು

      ಕುಖ್ಯಾತ ರೌಡಿಗಳಾದ ಮಾರ್ಕೆಟ್ ವೇಡಿ, ಜಾನ್ಸನ್,ರವಿ ಅಲಿಯಾಸ್ ಬಾಬಿ ರವಿ ಸೇರಿ 10ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ಮಂಗಳವಾರ ಎಕಾಏಕಿ ದಾಳಿ ನಡೆಸಿರುವ ಪಶ್ಚಿಮ ವಿಭಾಗದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.
ಕಲಾಸಿಪಾಳ್ಯ ಕಾಟನ್‍ಪೇಟೆ, ಸಿಟಿ ಮಾರ್ಕೆಟ್ ಸೇರಿದಂತೆ ಮೂರ್ನಾಲ್ಕು ಠಾಣೆಗಳ ವ್ಯಾಪ್ತಿಯ ರೌಡಿಗಳ ಮನೆಗಳ ಮೇಲೆ ಮಧ್ಯರಾತ್ರಿ ಡಿಸಿಪಿ ರವಿ ಚೆನ್ನಣ್ಣವರ್ ನೇತೃತ್ವದಲ್ಲಿ ಪೆÇಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿ ರೌಡಿ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ.

      ವಾರೆಂಟ್ ಬಾಕಿ ಇದ್ದವರು, ನ್ಯಾಯಾಲಯಕ್ಕೆ ಹಾಜರಾಗದವರಿಗೆ ಎಚ್ಚರಿಕೆ ನೀಡಿದ್ದಾರೆ.ಅಲ್ಲದೇ ರೌಡಿಗಳ ಮನೆಯಲ್ಲಿ ಮಾರಕಾಸ್ತ್ರಗಳು ಅವರ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.ರೌಡಿ ರವಿ ಅಲಿಯಾಸ್ ಬಾಬಿ ರವಿ ಮನೆಯಲ್ಲಿ ಒಂದು ಡ್ರಾಗರ್ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆದಿದ್ದಾರೆ.

      ಇತ್ತೀಚೆಗೆ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಸುಬ್ರಮಣ್ಯಪುರ ಉಪ ವಿಭಾಗದ 5 ಪೆÇಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ್ದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link