ಶ್ರೀ ಭೋಮಲಿಂಗೇಶ್ವರ ಸ್ವಾಮಿ ದೇವಾಲಯದ ಶಂಕು ಸ್ಥಾಪನೆ

ಎಂ ಎನ್ ಕೋಟೆ :

        ಯಾವುದೇ ಜಾತಿ,ಮತ ಭೇದವಿಲ್ಲದೆ ಎಲ್ಲರೂ ಸಹ ಒಗ್ಗಟಾಗಿ ದೇವರ ಕೆಲಸಗಳನ್ನು ಮಾಡಬೇಕು ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮಿಗಳು ತಿಳಿಸಿದರು.

        ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಅಳಿಲಘಟ್ಟ ಮಜರೆ ಹುಚ್ಚನಪಾಳ್ಯ ಗ್ರಾದಮ ಶ್ರೀ ಭೋಮಲಿಂಗೇಶ್ವರ ಸ್ವಾಮಿ ದೇವಾಲಯದ ಶಂಕು ಸ್ಥಾಪನೆ ಸಲ್ಲಿಸಿ ಮಾತನಾಡಿದ ಅವರು ದೇವಾಲಯಗಳನ್ನು ನಿರ್ಮಾಣ ಮಾಡುವುದರಿಂದ ಹಳ್ಳಿಗಳಲ್ಲಿ ಶಾಂತಿ ನೆಮ್ಮದಿ ಇರುತ್ತದೆ.ಪ್ರತಿಯೊಂದು ಹಳ್ಳಿಗಳಲ್ಲಿ ದೇವಾಲಯ

        ನಿರ್ಮಾಣವಾಗುತ್ತಿರುವುದು ಸಂತೋಷದ ವಿಷಯವಾಗಿದೆ.ಕೇವಲ ದೇವಾಲಯ ನಿರ್ಮಾಣ ಮಾಡಿದರೆ ಸಾಲದು ದೇವಾಲಯದಲ್ಲಿ ದಿನ ನಿತ್ಯ ಪೂಜಾ ಕಾರ್ಯಕ್ರಮಗಳನ್ನು ಮಾಡುವುದು ದೊಡ್ಡದು ಎಂದರು. ಒಳೆಯ ಸುಸಜ್ಜಿತವಾಗಿ ದೇವಾಲಯ ನಿರ್ಮಾಣವಾಗುತ್ತಿರುವುದು ಸಂತಸದ ವಿಷಯವಾಗಿದೆ. ಎಲ್ಲ ಭಕ್ತರು ತನು ಮನ ಧನ ಸಹಾಯ ಮಾಡಬೇಕು.ಜೂತೆಗೆ ಎಲ್ಲ ಧರ್ಮದವರನ್ನು ಜಾತಿಯವರನ್ನು ಭೇದವಿಲ್ಲದೆ ಎಲ್ಲ ದರ್ಮದವರನ್ನು ಉಳಿಸಿಕೊಂಡು ಹೋಗಬೇಕು.ಎಂದು ತಿಳಿಸಿದರು.

         ಕಾರ್ಯಕ್ರಮದಲ್ಲಿ ಮುಖಂಡರಾದ ಶಿವಲಿಂಗಪ್ಪ,ಗಂಗಾಧರಪ್ಪ,ಉದಯ್,ಶಂಭುಲಿಂಗಪ್ಪ,ಉಮೇಶ್,ಸ್ವಾಮಿ,ರವಿಕುಮಾರ್    ಪ್ರಸನ್ನ,ಲೋಕೇಶ್ ,ಅರ್ಚಕ ರುದ್ರೇಶ್ ಹಾಗೂ ಹುಲ್ಲೆಕೇರೆ ಗ್ರಾಮಸ್ಥರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link