ಹೈದರಾಬಾದ್:
ಪೊಲೀಸ್ ಕೆಲಸಕ್ಕೆ ಸೇರಬೇಕಾದರೆ ಫಿಟ್ನೆಸ್ ತುಂಬಾ ಮುಖ್ಯವಾಗುತ್ತದೆ ಮತ್ತು ಇದಕ್ಕಾಗಿ ಸರ್ಕಾರ ಅನೇಕ ರೀತಿ ದೈಹಿಕ ಪರೀಕ್ಷೆಯ ನಡೆಸುವುದು ಸಾಮಾನ್ಯ ಆದರೆ ಪೊಲೀಸ್ ದೈಹಿಕ ಪರಿಕ್ಷೆಯಲ್ಲಿ ಇರುವ 100 ಮೀಟರ್ ಓಟದಲ್ಲಿ 20 ವರ್ಷದ ಯುವತಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕರಿಂನಗರದಲ್ಲಿ ನಡೆದಿದೆ.
ನಿನ್ನೆ ಮಮತಾ(20) ಎಂಬ ಯುವತಿ. ಪೊಲೀಸ್ ತರಬೇತಿ ಕೇಂದ್ರದಲ್ಲಿ 100 ಮೀ. ಓಟದಲ್ಲಿ ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಮಮತಾ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಪೊಲೀಸರು ಹೇಳಿದ್ದಾರೆ.
ಕರೀಂನಗರ ಪಟ್ಟಣದಲ್ಲಿ ನಿನ್ನೆ ಪೋಲಿಸ್ ತರಬೇತಿ ಕೇಂದ್ರದಲ್ಲಿ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆಗಾಗಿ ಮಮತಾ ಭಾಗವಹಿಸಿದ್ದರು. ಅವರು 100 ಮೀ ಓಟದಲ್ಲಿ ಭಾಗವಹಿಸಿ ತಮ್ಮ ಗೋಲ್ ತಲುಪಿದ್ದು, ತಕ್ಷಣ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದಾರೆ. ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಮೃತಪಟ್ಟಿದ್ದಾರೆ ಎಂದು ಕರೀಂನಗರ ಕಮೀಷನರ್ ವಿ.ಬಿ ಕಮಲಸಾನ್ ರೆಡ್ಡಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








