ಮೈಸೂರು ತರಬೇತಿಗೆ ಪಾಲಿಕೆ ಸದಸ್ಯರು

ತುಮಕೂರು

       ತುಮಕೂರು ಮಹಾನಗರ ಪಾಲಿಕೆಯ ಸದಸ್ಯರು ಆಡಳಿತಾತ್ಮಕ ತರಬೇತಿ ಪಡೆದುಕೊಳ್ಳಲು ಗುರುವಾರ ಬೆಳಗ್ಗೆ ಮೈಸೂರಿಗೆ ತೆರಳಿದ್ದಾರೆ.ಮೈಸೂರಿನ ಆಡಳಿತ ತರಬೇತಿ ಕೇಂದ್ರದಲ್ಲಿ ಗುರುವಾರ ಮತ್ತು ಶುಕ್ರವಾರ ಒಟ್ಟು ಎರಡು ದಿನಗಳ ತರಬೇತಿ ಏರ್ಪಟ್ಟಿದ್ದು, ಮೇಯರ್ ಲಲಿತಾ ರವೀಶ್ ಮತ್ತು ಉಪಮೇಯರ್ ಬಿ.ಎಸ್.ರೂಪಶ್ರೀ ನೇತೃತ್ವದಲ್ಲಿ ಸದಸ್ಯರುಗಳು ತರಬೇತಿಗೆ ತೆರಳಿದ್ದಾರೆ.

       ಪಾಲಿಕೆಯ ಈಗಿನ 34 ಸದಸ್ಯರುಗಳ ಪೈಕಿ ಈಗ 26 ಸದಸ್ಯರುಗಳು ತರಬೇತಿಗೆ ತೆರಳಿದ್ದಾರೆ. ಪಾಲಿಕೆ ವತಿಯಿಂದ ಎರಡು ಟೆಂಪೋ ಟ್ರಾವಲರ್ಸ್ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಬಹುತೇಕ ಎಲ್ಲರೂ ಅದರಲ್ಲೇ ತೆರಳಿದ್ದಾರೆ. ಕೆಲವು ಸದಸ್ಯರು ಮಾತ್ರ ತಮ್ಮ ಸ್ವಂತ ವಾಹನದಲ್ಲಿ ಮೈಸೂರಿಗೆ ತೆರಳಿದ್ದು, ಸದಸ್ಯರ ಈ ತಂಡದ ಜೊತೆಗೆ ಪಾಲಿಕೆಯ ಸಿಬ್ಬಂದಿಯೂ ಇದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link