ರೈಫಲ್ ಮಾರಟ ನಿಷೇಧಿಸಿದ ನ್ಯೂಜಿಲ್ಯಾಂಡ್…!!!

ವೆಲ್ಲಿಂಗ್ಟನ್:
         ಕೆಲ ದಿನಗಳ ಹಿಂದಷ್ಟೆ  ಮಸೀದಿಯಲ್ಲಿ ನಡೆದಿದ್ದ ಗುಂಡಿನ ದಾಳಿ ನಂತರ ನ್ಯೂಜಿಲ್ಯಾಂಡ್ ಸರ್ಕಾರ ಸೆಮಿ ಆಟೋಮೆಟಿಕ್  ಸೇರಿ ಎಲ್ಲಾ ರೈಫಲ್ ಗಳ ಮಾರಾಟವನ್ನು ಸಂಪೂರ್ಣ ನಿಷೇಧಿಸಿದೆ. ಅಲ್ಲದೆ ಬಂದೂಕು ಖರೀದಿ ನಿಯಮಾವಳಿ ಗಳನ್ನು ಕಠಿಣವನ್ನಾಗಿಸಿದೆ . ನ್ಯೂಜಿಲೆಂಡ್​ನ ಪ್ರಧಾನ ಮಂತ್ರಿ ಜಸಿಂದಾ ಆಡ್ರೆನ್​ ಅವರು, ತಕ್ಷಣದಿಂದ ಜಾರಿಗೆ ಬರುವಂತೆ ರೈಫಲ್ ಮಾರಾಟಕ್ಕೆ ನಿಷೇಧ ಹೇರಿ ಆದೇಸ ಹೊರಡಿಸಿದ್ದಾರೆ.
        ಎಲ್ಲಾ ಮಿಲಿಟರಿ ನಮೂನೆಯ ಅರೆ ಸ್ವಯಂಚಾಲಿತ ರೈಫಲ್ ಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ . ಅಲ್ಲದೆ ಹೆಚ್ಚು ಸಾಮರ್ಥ್ಯದ ರೈಫಲ್ಸ್, ಮ್ಯಾಗಜೀನ್ ರೈಫಲ್ಸ್ ಗಳನ್ನು ಸಹ ನಿಷೇಧಿಸಿ ಆದೇಶ ಹೊರಡಿಸಿದೆ.
       ಇದಾಗಲೇ ಇಂತಹಾ ಆಯುಧಗಳನ್ನಿರಿಸ್ಕೊಂಡವರೂ ಸಹ ಈ ನಿಯಮದಡಿ ಬರಲಿದ್ದು ಅವರು ಸರ್ಕಾರಕ್ಕೆ ತಮ್ಮಲ್ಲಿನ ಆತ್ಯ್ಧವನ್ನು ಹಿಂತಿರುಗಿಸಬೇಕುದೆ. ಇನ್ನು ಆಯುಧ ಖರೀದಿಗಾಗಿ ಅತಿ ಶೀಘ್ರವೇ ಹೊಸ ಕಾನೂನು ರಚನೆಯಾಗಲಿದ್ದು ಒಂದೊಮ್ಮೆ ಕಾನೂನು ಬಾಹಿರ ಶಸ್ತ್ರಾಸ್ತ್ರ ಹೊಂದಿದ್ದರೆ ಅವರಿಗೆ 4,000 ಡಾಲರ್ ದಂಡ ಹಾಗು  ಮೂರು ವರ್ಷಗಳ ಜೈಲುವಾಸದ ಶಿಕ್ಷೆ ವಿಧಿಸುವ ನ್ನಿಯಮಾವಳಿಯನ್ನು ಅಲ್ಲಿನ ಸರ್ಕಾರ ಜಾರಿಗೆ ತಂದಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link