ತಿರುವಣ್ಣಾಮಲೈ: ಶಾಲಾ ಶಿಕ್ಷಕಿಯಿಂದ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ….!!!!

ತಮಿಳುನಾಡು:

        ತಿರುವಣ್ಣಾಮಲೈ ಜಲ್ಲೆಯ ಅರಾನಿ ಪಟ್ಟಣದಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಶಿಕ್ಷಕಿಯಾಗಿರುವ  ನಿತ್ಯಾ ಅವರು ತಮ್ಮ ಸ್ಕೂಲಿನ ವಿದ್ಯಾರ್ಥಿಯ ಮೇಲೆ ಲೈಂಗಿಕವಾಗಿ ದೌರ್ಜನ್ಯ ನಡೆಸಿರುವ ಪ್ರಕರಣದಲ್ಲಿ ಪೊಲೀಸರು ನಿನ್ನೆ ಅವರನ್ನು ಬಂಧಿಸಿದ್ದಾರೆ.  ಈ ಪ್ರಕರಣದಲ್ಲಿ, ನಿತ್ಯಾಳ ಪತಿ ಉಮೇಶ್ ಕುಮಾರ್ ಹೇಳುವಂತೆ  ಕಳೆದ ಕೆಲವು ವರ್ಷಗಳಿಂದ ನನ್ನ ಹೆಂಡತಿಗೆ ಕೆಲವು ಮಕ್ಕಳೊಂದಿಗೆ ಇರುವುದನ್ನು ಫೋನ್ನಲ್ಲಿ ಕಂಡ ಬಳಿಕ ಅವರು ಜಿಲ್ಲಾಧಿಕಾರಿಯವರಿಗೆ ವರದಿ ನೀಡಿದ್ದಾರೆ.

       ಈ ಹಿಂದೆ ಅವರು ಕೆಲಸ ಮಾಡುತ್ತಿದ್ದ ಶಾಲೆಯಲ್ಲೂ ತನ್ನ ವಿದ್ಯಾರ್ಥಿಗಳಿಗೆ ಇದೇ ರೀತಿಯ ನಿಂದನೀಯವಾಗಿ ನಡೆಸಿಕೊಂಡಿದ್ದರಿಂದ   ಅವರನ್ನು ವರ್ಗಾಯಿಸಲಾಗಿತ್ತು. ಟಿಎನ್ಎಮ್ ಗೆ ಸಲ್ಲಿಸಿರುವ ವರದಿಯ ಪ್ರಕಾರ ಆರು ತಿಂಗಳುಗಳ ಹಿಂದೆ ಒಬ್ಬ ವಿದ್ಯಾರ್ಥಿಯೊಂದಿಗೆ ಈ ಕೃತ್ಯ ನಡೆಸಿ ಸಿಕ್ಕಿಬಿದ್ದ ನಂತರ ಅವರನನ್ನು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ವರ್ಗಾಯಿಸಿದ್ದಾರೆ .

      ” ಸದರಿ ಶಾಲೆಯೂ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಅವರನ್ನು ವರ್ಗಾವಣೆ ಮಾಡಿದ್ದರು, ಆಕೆಯ ಗಂಡ ನೀಡಿದ ದೂರು ಸ್ವೀಕರಿಸಿದ ನಂತರ, ನಾವು ಹೆಡ್ ಮಾಸ್ಟರ್ ರೊಂದಿಗೆ ವಿಚಾರಿಸಿದಾಗ, ಅವರು ಮಾಹಿತಿಯನ್ನು ಮರೆಮಾಚಿ  ಅವರು ಒಳ್ಳೆಯ ನಡವಳಿಕೆಯವರು ಎಂದು ವರದಿ ನೀಡಿದ್ದರು , ಸಾಮಾಜಿಕ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ವಿಚಾರಿಸಿದಾಗ ಎಲ್ಲಾ ವಿಚಾರಗಳು ಬಹಿರಂಗಗೊಂಡಿವೆ .

      ಜಿಲ್ಲಾಧಿಕಾರಿ ಆದೇಶದ ಅನುಸಾರ, ಕಳೆದ ವರ್ಷ ಡಿಸೆಂಬರ್ನಲ್ಲಿ ಜಿಲ್ಲಾ ಸಾಮಾಜ ಕಲ್ಯಾಣ ಇಲಾಖೆ ತನಿಖೆ ಆರಂಭಿಸಿತು. ಜನವರಿ 2019 ರಲ್ಲಿ ಜಿಲ್ಲೆಯ ಮಕ್ಕಳ ರಕ್ಷಣಾ ಘಟಕ (ಡಿಸಿಪಿಯು) ದೂರು ದಾಖಲಿಸಿದೆ.POCSO ಕಾಯ್ದೆಯ ಸೆಕ್ಷನ್ 10  ಮತ್ತು 14 ರ ಅಡಿಯಲ್ಲಿ ದೂರು ಸಲ್ಲಿಸಲಾಗಿದೆ. ನಿತ್ಯಾ ಅವರನ್ನು ಹೆಚ್ಚನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

        “ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಬಿ ಮೈಥಿಲಿ ಹೆಳುವಂತೆ ನಿತ್ಯಾ ಅವರು 2015 ರಿಂದ 2017 ರವರೆಗೂ ಕೆಲವು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದು 15 ಮತ್ತು 17 ವಯಸ್ಸಿನ ವಿದ್ಯಾರ್ಥಿಗಳಿಗೆ ಎಂದು ತಿಳಿದು ಬಂದಿದೆ . ತನ್ನ ಬೋಧನಾ ತರಗತಿಗೆ ಬರುವ ಮಕ್ಕಳೊಂದಿಗೆ ಇರುವ ಖಾಸಗಿ ಫೋಟೋಗಳು ಅವರ ಫೋನ್ನಲ್ಲಿ ಸಿಕ್ಕಿದೆ “.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link