ಬೆಂಗಳೂರು:
ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ಕೊರಳಿನಲ್ಲಿದ್ದ ಹೂವಿನ ಹಾರವನ್ನು ತೆಗೆದು ದಿವಂಗತ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆಗೆ ಹಾಕಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಕಾರಣದಿಂದಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಿಯಾಂಕಾ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಮಾಜಿ ಪ್ರಧಾನಿಗೆ ಮಾಡಿದ ಅವಮಾನ ಎಂದು ಹೇಳಿದ್ದರು ಮತ್ತು ಪ್ರಿಯಾಂಕಾ ಅವರ ಮಾಲಾರ್ಪಣೆ ಮಾಡಿರುವಂತಹ ವಿಡಿಯೋವನ್ನು ಟ್ವೀಟ್ ಮಾಡಿ ಕಿಡಿಕಾರಿದ್ದರು.
ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಂಸದೆ ರಮ್ಯಾ ಅವರು ಸ್ಮೃತಿ ಇರಾನಿ ಯಾವಾಗಲು ಮಹಿಳೆಯರು ಮಾಡುವ ಪ್ರತಿ ಕೆಲಸದಲ್ಲೂ ಕೆಟ್ಟದ್ದನ್ನೇ ಹುಡುಕುತ್ತಾರೆ. ಮಹಿಳೆ ಮುಟ್ಟಿದ ಹಾರವನ್ನು ಪ್ರತಿಮೆಗೆ ಹಾಕಿದಾಕ್ಷಣ ಅದು ಮೈಲಿಗೆಯಾಗುವುದಿಲ್ಲ. ನಮ್ಮ ದೇಹವೇ ದೇಗುಲ ಎಂದು ಹಿಂದೂ ಧರ್ಮ ಹೇಳುತ್ತದೆ. ದೇವರು ಎಲ್ಲಾ ಕಡೆ ಇದ್ದಾನೆ. ಪ್ರಿಯಾಂಕಾ ಮಾಡಿದರಲ್ಲಿ ಅವಮಾನ ಮಾಡುವಂತದ್ದು ಏನಿದೆ? ನೀವೂ ಕೂಡಾ ಮಹಿಳೆ ಎಂದು ರಮ್ಯಾ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.
Smriti seems to find everything with women dirty & offensive. Just cos a garland touches a woman’s body doesn’t make it ‘dirty’ to be not used on a statue. Hinduism says your body is your temple. God resides everywhere. So just how is this insulting Smriti? You’re a woman too. https://t.co/snr0NcoTGH
— Divya Spandana/Ramya (@divyaspandana) March 22, 2019
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








