ಉ.ಕೋರಿಯಾ ಮೇಲಿದ್ದ ನಿರ್ಬಂಧ ತೆರವಿಗೆ ಮುಂದಾದ ಟ್ರಂಪ್ ಸರ್ಕಾರ…!!!

ವಾಷಿಂಗ್ ಟನ್:
         ಜಗತ್ತಿನ ಅತ್ಯಂತ ಕ್ರೂರ ಸರ್ವಾಧಿಕಾರಿ ರಾಷ್ಟ್ರ ಎಂಬ ಅಪಕೀರ್ತಿಗೆ ಪಾತ್ರವಾಗಿರುವ ಉತ್ತರ ಕೊರಿಯಾಕ್ಕೆ ಟ್ರಂಪ್ ಸರ್ಕಾರ ಸಿಹಿ ಸುದ್ದಿ ನೀಡಿದೆ.
        ಉ.ಕೋರಿಯಾ ಮೇಲೆ ಹೇರಿದ್ದ ನಿರ್ಬಂಧವನ್ನು ಹಿಂಪಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು.ಈ ವಿಷಯದ ಬಗ್ಗೆ ಮಾ.22 ರಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ, ಅಮೆರಿಕಾದಿಂದ ಈಗಾಗಲೇ ಉತ್ತರ ಕೊರಿಯಾಗೆ ವಿಧಿಸಲಾಗಿರುವ ನಿರ್ಬಂಧದ ಜೊತೆಗೆ ಇತ್ತೀಚೆಗೆ ಹೆಚ್ಚುವರಿಯಾಗಿ ವಿಧಿಸಲಾಗಿದ್ದ ನಿರ್ಬಂಧದ ಬಗ್ಗೆ ಮಾತನಾಡಿದ್ದಾರೆ. ಆದರೆ ಯಾವ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ ಎಂಬುದನ್ನು ಮಾತ್ರ  ಟ್ರಂಪ್ ಇನ್ನೂ ಸ್ಪಷ್ಟಪಡಿಸಿಲ್ಲ. 
        ಇದಕ್ಕೂ ಮುನ್ನ ಚೀನಾ ವಿರುದ್ಧ ಉತ್ತರ ಕೊರಿಯಾ ನಿರ್ಬಂಧವನ್ನು ಉಲ್ಲಂಘನೆ ಮಾಡಿರುವ ಆರೋಪ ಮಾಡಿದ್ದ ಅಮೆರಿಕ, ಚೀನಾ ಮೂಲದ ಎರಡು ಶಿಪ್ಪಿಂಗ್ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿತ್ತು.
        ಈಗ ಮಾ.22 ರಂದು ಅಮೆರಿಕ ಅಧ್ಯಕ್ಷರು ಉತ್ತರ ಕೊರಿಯಾ ವಿರುದ್ಧ ಇತ್ತೀಚೆಗಷ್ಟೇ ವಿಧಿಸಲಾಗಿದ್ದ ಹೆಚ್ಚುವರಿ ನಿರ್ಬಂಧಗಳನ್ನು ರದ್ದುಗೊಳಿಸಲಾಗಿದೆ ಎಂದಷ್ಟೇ ತಿಳಿಸಿದ್ದಾರೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link