ತುರುವೇಕೆರೆ:
ತಾಲೂಕಿನ ಮಾದಿಹಳ್ಳಿ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಅರಳೀಕೆರೆ ಕವಿತರವೀಶ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಮಾದಿಹಳ್ಳಿ ಗ್ರಾಮ ಪಂಚಾಯಿತಿ 17 ಸದಸ್ಯರನ್ನು ಒಳಗೊಂಡಿದ್ದು ಈ ಹಿಂದಿನ ಉಪಾಧ್ಯಕ್ಷ ಬೊಮ್ಮಲಿಂಗಯ್ಯ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ನೆಡೆಯಿತು. ಕವಿತರವೀಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಅವಿರೋಧವೆಂದು ಘೋಷಿಸಿದರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ನಯೀಂಉನ್ನಿಸಾ ಕರ್ತವ್ಯ ನಿರ್ವಹಿಸಿದರು. ನೂತನ ಉಪಾಧ್ಯಕ್ಷ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು.
ನೂತನ ಉಪಾಧ್ಯಕ್ಷರನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಾಳಮ್ಮಲಕ್ಕಣಯ್ಯ, ಮಾಜಿ ಉಪಾಧ್ಯಕ್ಷ ಬೊಮ್ಮಲಿಂಗಯ್ಯ, ಸಹ ಸದಸ್ಯರಾದ ಪುಷ್ಪಲತಾ, ಮೋಹನ್ಕುಮಾರ್, ಶಶಿಕಲಾ, ಚಂದ್ರಶೇಖರ್, ಜಗದೀಶ್ ಭಾಗ್ಯಮ್ಮ, ಗಂಗಮ್ಮ, ಶಿವಶಂಕರಯ್ಯ, ಗೌರಿಶಂಕರ್, ಹೇಮಾವತಿ, ಮೀನಾ, ಪಿಡಿಓ ಜಗನ್ನಾಥಾಚಾರ್, ಲೆಕ್ಕ ಸಹಾಯಕ ನರೇಂದ್ರ, ಅರಳೀಕೆರೆ ರಾಮೇಗೌಡ, ಉಮೇಶ್ ಸೇರಿದಂತೆ ಅನೇಕ ಮುಖಂಡರು ಅಭಿನಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








