ಶಿರಾ
ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಅಂಗಡಿಯೊಂದರಲ್ಲಿ ಕೇಕ್ ಕೇಳಲು ಹೋದ ಯುವಕರು ಅಂಗಡಿಯಲ್ಲಿದ್ದ 76 ವರ್ಷದ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಶನಿವಾರ ನಗರದಲ್ಲಿ ನಡೆದಿದೆ.ನಗರದ ಬಾಲಾಜಿ ನಗರ ಬಡಾವಣೆಯ ರಾಧಾಕೃಷ್ಣ ಎಂಬುವರ ಅಂಗಡಿಯಲ್ಲಿ ಅವರ ಪತ್ನಿ 76 ವರ್ಷದ ನಾಗರತ್ನಮ್ಮ ಅಂಗಡಿ ವ್ಯಾಪಾರ ಮಾಡುತ್ತಿದ್ದರು.
ಬೈಕ್‍ನಲ್ಲಿ ಬಂದ ಇಬ್ಬರು ಯುವಕರು ಬೈಕ್‍ನಿಂದ ಕೆಳಗಿಳಿದು ಅಂಗಡಿಗೆ ವ್ಯಾಪಾರ ಮಾಡಲು ಬಂದಿದ್ದಾರೆ.
ಕೇಕ್ ಕೊಡುವಂತೆ ಕೇಳಿದ ನಂತರ ಪಾನ್‍ಪರಾಗ್ ಕೇಳುವ ನೆಪದಲ್ಲಿ ಆಕೆಯ ಕೊರಳಲ್ಲಿದ್ದ 60 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದು ಪರಾರಿಯಾದರು ಎನ್ನಲಾಗಿದೆ.ಈ ಸಂಬಂಧ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಸಿ.ಪಿ.ಐ. ರಂಗಸ್ವಾಮಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








