ಬೆಂಗಳೂರು
ನಕಲಿ ನಾಗಮಣಿಯನ್ನು ಅಸಲಿ ಎಂದು ವಂಚಿಸುತ್ತಿದ್ದ ಖತರ್ನಾಕ್ ಖದೀಮ ಹಾಗೂ ಎರಡು ತಲೆಯ ಹಾವುಗಳನ್ನು ಮಾರಾಟ ಮಾಡುತ್ತಿದ್ದ. ಇಬ್ಬರು ಸೇರಿ ಮೂವರನ್ನು ಮಹಾಲಕ್ಷ್ಮೀ ಲೇ ಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ಕಾರ್ಡ್ ರಸ್ತೆಯ ಇಸ್ಕಾನ್ ಬಳಿಯಿರುವ ಇಂದಿರಾ ಕ್ಯಾಂಟೀನ್ ಸಮೀಪ ನಕಲಿ ನಾಗಮಣಿಯನ್ನು ಅಸಲಿ ಎಂದು ಒಂದರಿಂದ ಎರಡು ಕೋಟಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಹಿರಿಯೂರಿನ ಪ್ಯಾರುಬಾಯಿ (57) ಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿಯು ಹುಂಡೈ ಕಾರಿನಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸಿದ್ದ ನಕಲಿ ನಾಗಮಣಿ ಪ್ರಾಚೀನ ಕಾಲದ ತಟ್ಟೆ, ಚೊಂಬನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಮಹಾಲಕ್ಷ್ಮಿ ಲೇ ಔಟ್‍ನ ಎಪಿಎಂಸಿ ಯಾರ್ಡ್‍ನ ತರಕಾರಿ ಮಾರುಕಟ್ಟೆ ಬಳಿ ಎರಡುತಲೆ ಹಾವುಗಳನ್ನು (ರೆಡ್ ಸ್ಯಾಂಡ್ ಬೋ) ಮಾರಾಟ ಮಾಡುತ್ತಿದ್ದ ತುಮಕೂರಿನ ಊರುಕೆರೆಯ ಶಿವಣ್ಣ(20), ಕೃಷ್ಣಪ್ಪ (64)ನನ್ನು ಬಂಧಿಸಲಾಗಿದೆ.
ಆರೋಪಿಗಳು ಎರಡುತಲೆ ಹಾವುಗಳನ್ನು ಕೊಂಡರೆ ಅದೃಷ್ಟ ಬರುತ್ತದೆ ಎಂದು ನಂಬಿಸಿ, ಮಾರಾಟ ಮಾಡಲು ಯತ್ನಿಸುತ್ತಿದ್ದು, ವಶಪಡಿಸಿಕೊಂಡಿರುವ ಜೀವಂತ ಹಾವುಗಳನ್ನು ಬನ್ನೇರುಘಟ್ಟ ಪುನರ್‍ವಸತಿ ಗೃಹಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಆರೋಪಿಗಳಿಂದ ಮಹಾಲಕ್ಷ್ಮಿ ಲೇಔಟ್ ಪ್ರಶಾಂತ್ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ರಮ ಮದ್ಯ ವಶ
ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು 21 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ದೇವನಹಳ್ಳಿಯಲ್ಲಿ ರಸ್ತೆ ಕಾವಲು ನಡೆಸಿದ ವೇಳೆ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದ ಎನ್. ಮೂರ್ತಿ ಎಂಬ ವ್ಯಕ್ತಿಯನ್ನು ಬಂಧಿಸಿ, ಸುಮಾರು 8 ಲೀಟರ್ ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನೆಲಮಂಗಲ ತಾಲೂಕಿನ ನರಸೀಪುರದ ಪೆಟ್ಟಿಗೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿಯ ವೇಳೆ ಬಂಧಿಸಿ ಸುಮಾರು 14 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








