ಪ್ರಭಾರಿ ಕಾರ್ಯಾಪಾಲಕ ಇಂಜಿನಿಯರ್ ಎಸಿಬಿ ಬಲೆಗೆ

ಹರಪನಹಳ್ಳಿ:

        ಕಾಂಕ್ರಿಟ್ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಐದು ಸಾವಿರ ಲಂಚ ಸ್ವೀಕರಿಸಿದ್ದಕ್ಕೆ ಎಸಿಬಿ ಪೊಲೀಸರು ಇಲ್ಲಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಪ್ರಭಾರಿ ಕಾರ್ಯಾಪಾಲಕ ಇಂಜಿನಿಯರ್ ಗಂಗಾಧರಪ್ಪ ಅವರನ್ನು ಬಲೆಗೆ ಕೆಡವಿದ್ದಾರೆ.

         ತಾಲ್ಲೂಕಿನ ಶಿವಪುರ ಗ್ರಾಮದ ಯುವರಾಜನಾಯ್ಕ ಎಂಬುವವರು ಈ ಹಿಂದೆ ಶಿವಪುರ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದರು, ಅದರ ಬಿಲ್  1.43 ಲಕ್ಷ ಹಣ ಪಾವತಿ ಮಾಡಲಾಗಿತ್ತು. ನಂತರ  11 ಲಕ್ಷಗಳ ವೆಚ್ಚದ ಅಂಗನವಾಡಿ ಕಾಂಪೊಂಡ್ ನಿರ್ಮಾಣ ಸಹ ಈತನು ಕೈಗೊಂಡಿದ್ದನು. ಈಗ ಕೈಗೊಂಡಿದ ಕಾಂಪೊಂಡ್ ಬಿಲ್ ಕೇಳಲು ಹೋದಾಗ ಹಿಂದಿನ 1.43 ಲಕ್ಷ ಗಳನ್ನು ಪಾವತಿ ಮಾಡಿದ್ದಕ್ಕೆ ಐದು ಸಾವಿರ ಲಂಚ ಕೇಳಿದ್ದಾರೆ, ಆಗ ಗುತ್ತಿಗೆದಾರ ಯುವರಾಜನಾಯ್ಕ ಅವರು ಎಸಿಬಿ ಅಧಿಕಾರಿಗಳಿಗೆ ಮಾರ್ಚ-7ರಂದು ದೂರು ನೀಡಿದ್ದರು.

         ಪ್ರಕರಣ ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದರು. ಈ ಸಂದರ್ಭದಲ್ಲಿ ಇಇ ಗಂಗಾಧರಪ್ಪ ಅವರು ಚುನಾವಣಾ ಕಾರ್ಯದಲ್ಲಿ ಬಳ್ಳಾರಿ ಇತರೆ ಕಡೆ ಹೋಗಿ ಕಚೇರಿಯಲ್ಲಿ ಸಿಕ್ಕಿರಲಿಲ್ಲ, ಮಾ.26ರ ಸಂಜೆ ಇಇ ಗಂಗಾಧರಪ್ಪನವರ ಸೂಚನೆ ಮೇರೆಗೆ ತಮ್ಮ ಕಚೇರಿಯ ಸಿಬ್ಬಂದಿ ಪ್ರಸನ್ನ ಅವರು ಐದು ಸಾವಿರ ಹಣ ಸ್ವೀಕರಿಸಿದ್ದಾರೆ.

        ಕಚೇರಿ ಬಳಿ ಕಾಯುತ್ತಿದ್ದ ಎಸಿಬಿ ಅಧಿಕಾರಿಗಳು ಪ್ರಸನ್ನ ಅವರನ್ನು ಹಿಡಿದು ಲಂಚದ ಹಣ ತೆಗೆದುಕೊಂಡರು. ಆಗ ಪ್ರಸನ್ನ ಅವರು `ಇಇ ಗಂಗಾಧರಪ್ಪನವರು ತೆಗೆದುಕೊಳ್ಳಲು ಹೇಳಿದ್ದರು, ಆದ್ದರಿಂದ ಐದು ಸಾವಿರ ತೆಗೆದುಕೊಂಡೆನು’ ಎಂದು ತಿಳಿಸಿದನು ಎಂದು ಎಸಿಬಿ ಡಿವೈಎಸ್ಪಿ ಎಚ್ .ಎಸ್ .ಪರಮೇಶ್ವರ ಪತ್ರಿಕೆಗೆ ತಿಳಿಸಿದರು.

      ಆರೋಪಿ ಇಇ ಗಂಗಾಧರಪ್ಪನವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸುವುದಾಗಿ ಅವರು ತಿಳಿಸಿದರು. ಗಂಗಾಧರಪ್ಪ ಅವರು ರೆಗುಲರ್ ಆಗಿ ಪಂಚಾಯತ್ತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿದ್ದು, ಕಳೆದ ಒಂದು ವಾರದ ಹಿಂದೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಇ ಆಗಿ ಪ್ರಭಾರಿ ಜವಾಬ್ದಾರಿ ಸಹ ವಹಿಸಿಕೊಂಡಿದ್ದರು.
ಈ ಕಾರ್ಯಚರಣೆಯಲ್ಲಿ ಎಸಿಬಿ ಇನ್ಸೆಪೆಕ್ಟರ್ ನಾಗಪ್ಪ, ಸಿಬ್ಬಂದಿ ರವಿಕುಮಾರ, ಕಲ್ಲೇಶ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link