ಕೊಲ್ಕತ್ತಾ
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ) ನಗರದ ವಿವಿಧೆಡೆ ದಾಳಿ ನಡೆಸಿ ಸುಮಾರು 7 ಕೋಟಿ ರೂ. ಮೌಲ್ಯದ 16.5 ಕೆ.ಜಿ ಚಿನ್ನ ಹಾಗೂ ಸುಮಾರು 75 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದೆ.
ಲೋಕಸಭಾ ಚುನಾವಣೆಗೂ ಮುನ್ನ ಅಪಾರ ಪ್ರಮಾಣದ ಹಣ ಹರಿದಾಡುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಾ.26ರಿಂದ 28ರವರೆಗೆ ನಗರದ ವಿವಿಧೆಡೆ ದಾಳಿ ನಡೆಸಿದ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು 7 ಕೋಟಿ ಮೊತ್ತದ ಚಿನ್ನ ಹಾಗೂ 75 ಲಕ್ಷ ರೂಪಾಯಿ ಜಪ್ತಿ ಮಾಡಿದ್ದಾರೆ.
ಅಧಿಕಾರಿಗಳು ನಗರದ ಸುಡೇರ್ ಸ್ಟ್ರೀಟ್, ದಕ್ಷಿಣ ಕೊಲ್ಕತಾ, ಬರ್ರಾ ಬಜಾರ್ ಮತ್ತು ಸಾಲ್ಟ್ ಲೇಕ್ ಪ್ರದೇಶದ ಕೆಲ ಹೋಟೆಲ್ ಗಳ ಮೇಲೆ ದಾಳಿ ನಡೆಸಿ ಆರು ಜನರನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ