ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳ ಅಂದರ್

ಬೆಂಗಳೂರು

        ಕೀ ಮೇಕಿಂಗ್ ಯಂತ್ರವನ್ನಿಟ್ಟುಕೊಂಡು ಸಾವಿರಾರು ನಕಲಿ ಕೀಗಳನ್ನು ಮಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಅವುಗಳಿಗೆ ಹೊಂದುವ ನಕಲಿ ಕೀಗಳಿಂದ ಬೀಗ ತೆಗೆದು ಚಿನ್ನಾಭರಣಗಳನ್ನು ಲೂಟಿ ಮಾಡುತ್ತಿದ್ದ ನಟೋರಿಸ್ ಕಳ್ಳ ಪ್ರಕಾಶ್ ಅಲಿಯಾಸ್ ಜ್ಯೋತಿ ಪ್ರಕಾಶ್ ಸುದ್ದಗುಂಟೆಪಾಳ್ಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

       ಬಂಧಿತ ಉತ್ತರಹಳ್ಳಿಯ ಭುವನೇಶ್ವರಿ ನಗರದ ಪ್ರಕಾಶ್ (32) ಕೀ ಮೇಕಿಂಗ್ ಯಂತ್ರವನ್ನಿಟ್ಟುಕೊಂಡು ಸಾವಿರಾರು ನಕಲಿ ಕೀ ಗಳನ್ನು ತಯಾರಿಸಿಟ್ಟುಕೊಂಡು ಅವುಗಳಿಂದ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುವುದಲ್ಲದೇ ಇ-ಮೇಲ್ ಮೂಲಕ ಬೀಗದ ಕಂಪನಿಗಳನ್ನು ಸಂಪರ್ಕಿಸಿ ನಕಲಿ ಕೀ ತರಿಸಿಕೊಂಡು ಕಳವು ಮಾಡಿದ್ದ ಕುಖ್ಯಾತಿಗೆ ಪಾತ್ರವಾಗಿದ್ದನು.

       ಆರೋಪಿಯಿಂದ 40 ಲಕ್ಷ ಮೌಲ್ಯದ 1 ಕೆಜಿ 216 ಗ್ರಾಂ ಚಿನ್ನಾಭರಣ, 1 ಕೆಜಿ 800 ಗ್ರಾಂ ಬೆಳ್ಳಿ, 1 ಸಾವಿರಕ್ಕೂ ಹೆಚ್ಚು ನಕಲಿ ಕೀ ಗಳು, ಕೀ ಮೇಕಿಂಗ್ ಯಂತ್ರ ಸೇರಿದಂತೆ 40 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಅವರು ತಿಳಿಸಿದ್ದಾರೆ.

      ಹಣದಾಸೆಗಾಗಿ ಕಳ್ಳತನಕ್ಕಿಳಿದಿದ್ದ ಆರೋಪಿಯು ಕಳೆದ 1 ದಶಕದಿಂದ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ. ಬೀಗ ಹೊಡೆದರೆ ಶಬ್ಧ ಉಂಟಾಗಿ ಅಕ್ಕಪಕ್ಕದ ಮನೆಯವರು, ರಸ್ತೆಯಲ್ಲಿ ಹೋಗುವವರಿಗೆ ಕೇಳಿಸಿ ಸಿಕ್ಕಿ ಬೀಳಬಹುದೆನ್ನುವ ಕಾರಣಕ್ಕಾಗಿ ನಕಲಿ ಕೀ ಗಳಿಂದಲೇ ಬೀಗ ತೆಗೆದು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ.

      ಕಳೆದ ವರ್ಷ ಫೆಬ್ರವರಿಯಲ್ಲಿ ಆಗ್ನೇಯ ವಿಭಾಗ ಪೊಲೀಸರು ಕಳ್ಳ ಪ್ರಕಾಶ್‍ನನ್ನು ಬಂಧಿಸಿ ಎರಡೂವರೆ ಕೆಜಿ ಚಿನ್ನಾಭರಣಗಳನ್ನು ವಶಪಡಿಸಕೊಂಡು ಜೈಲಿಗೆ ಕಳುಹಿಸಿದ್ದರು. ಜಾಮೀನಿನ ಮೇಲೆ ಕಳೆದ ನವೆಂಬರ್‍ನಲ್ಲಿ ಬಿಡುಗಡೆಯಾಗಿ ಬಂದಿದ್ದ ಆರೋಪಿಯು ಮತ್ತೆ ಕಳ್ಳತನಕ್ಕಿಳಿದಿದ್ದ.

        ಕಳೆದ ಡಿಸೆಂಬರ್ 2 ರಂದು ಸುದ್ದಗುಂಟೆಪಾಳ್ಯದ ಭವಾನಿ ಲೇಔಟ್‍ನ ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭಕ್ಕೆ ಬಂದಿದ್ದವರ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಇನ್ಸ್‍ಪೆಕ್ಟರ್ ಮೊಹಮದ್ ಮತ್ತವರ ಸಿಬ್ಬಂದಿ ಕಾರ್ಯಚರಣೆ ಕೈಗೊಂಡು ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಹಲವು ನಾಮ

       ಬಾಲಾಜಿ, ಬಾಲು, ಖಾನ್, ರಾಜು, ಇನ್ನಿತರ ಹೆಸರುಗಳಿಂದ ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ ಪ್ರಕಾಶ, ಮನೆಯಲ್ಲಿಯೇ ಕೀ ಗಳನ್ನು ತಯಾರಿಸುವ ಯಂತ್ರವನ್ನಿಟ್ಟುಕೊಂಡು ಸಾವಿರಾರು ನಕಲಿ ಕೀ ಗಳನ್ನು ತಯಾರಿಸಿದ್ದನು. ಮೊದಲಿಗೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬೀಗದ ಫೋಟೊ ತೆಗೆದುಕೊಂಡು ಮನೆಗೆ ಬರುತ್ತಿದ್ದ.

      ಅದಕ್ಕೆ ಸರಿ ಹೊಂದುವ ಕೀ ಯನ್ನು ತನ್ನಲ್ಲಿದ್ದ ನಕಲಿ ಕೀಗಳಿಂದ ತೆಗೆದುಕೊಂಡು ತಡರಾತ್ರಿ ಫೋಟೊ ತೆಗೆದ ಬೀಗದ ಮನೆ ಬಳಿ ಹೋಗಿ ಕೀ ಯಿಂದ ಬೀಗ ತೆಗೆದು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ.

ಕೀ ಮೇಕರ್

      ನಿರ್ಮಾಣಗೊಂಡು ಇನ್ನೇನು ಪೂರ್ಣಗೊಳ್ಳುವ ಶ್ರೀಮಂತರ ಮನೆಗಳ ಬಳಿಗೆ ಹೋಗಿ ಬಾಡಿಗೆಗೆ ಮನೆ ಬೇಕೆಂದು ಅಲ್ಲಿದ್ದವರನ್ನು ವಿಚಾರಿಸಿ ಅವರಿಗೆ ಗೊತ್ತಾಗದಂತೆ ಮುಂಬಾಗಿಲಿನ ಬೀಗದ ಫೋಟೊ ಇಲ್ಲವೆ ಕೀ ಗಳಿದ್ದರೆ ಅದರಲ್ಲಿನ ಒಂದು ಕೀ ಯನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ.

     ಕಳವು ಮಾಡಿದ ಕೀ ಗೆ ಮನೆಯ ವಿಳಾಸದ ಸ್ಟಿಕ್ಕರ್ ಅಂಟಿಸಿ ಸಂಗ್ರಹಿಸಿಡುತ್ತಿದ್ದ. ಐದಾರು ತಿಂಗಳ ನಂತರ ಕೀ ಕಳವು ಮಾಡಿದ ಮನೆ ಬೀಗ ಹಾಕಿದ್ದರೆ ಅದನ್ನು ಗುರುತಿಸಿ ಕಳವು ಮಾಡಿದ ಕೀ ಯನ್ನು ತೆಗೆದುಕೊಂಡು ಹೋಗಿ ಕಳವು ಮಾಡುತ್ತಿದ್ದ.

ಇ-ಮೇಲ್ ಮೂಲಕ ಕೀ

     ಶ್ರೀಮಂತರ ಮನೆಯ ಕೀ ತೆಗೆಯುವುದು ಕಷ್ಟವಾದರೆ ಬೀಗದ ಫೋಟೊ ಹೊಡದುಕೊಂಡು ಆ ಕಂಪನಿಯ ವಿಳಾಸಕ್ಕೆ ಇ-ಮೇಲ್ ಕಳುಹಿಸಿ ಕೀ ಕಳೆದುಹೋಗಿದ್ದು, ಹೊಸ ಕೀ ಕಳುಹಿಸಿಕೊಡುವಂತೆ ಮನವಿ ಮಾಡುತ್ತಿದ್ದ ಕಂಪನಿಯವರು ಮಾಲೀಕರೆಂದು ಭಾವಿಸಿ ಕೀ ಕಳುಹಿಸಿದರೆ ಅದನ್ನು ಬಳಸಿ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ಚಾಲಕಿತನ ಹೊಂದಿರುವುದನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿರುವುದನ್ನು ಇಶಾಪಂತ್ ತಿಳಿಸಿದ್ದಾರೆ.

     ಕಳೆದ 12 ವರ್ಷಗಳಿಂದ ಮನೆಗಳ್ಳತನಕ್ಕಿಳಿದಿದ್ದ ಪ್ರಕಾಶ, ಮೊದಲಿಗೆ ಕಲ್ಕೆರೆ ಮಂಜುನಾಥ್ ಜತೆ ಸೇರಿ ಮನೆಗಳವು ಮಾಡುತ್ತಿದ್ದ. ನಂತರ ಇವರಿಬ್ಬರ ನಡುವೆ ಕಳವು ಮಾಡಿದ ಆಭರಣಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ವೈಮನಸ್ಯ ಉಂಟಾಗಿ ಬೇರೆಯಾಗಿದ್ದರು. ಇಲ್ಲಿಯವರೆಗೆ 100ಕ್ಕೂ ಹೆಚ್ಚು ಮನೆಗಳವು ಕೃತ್ಯದಲ್ಲಿ ಆರೋಪಿಯು ಪಾಲ್ಗೊಂಡಿರುವುದು ಪತ್ತೆಯಾಗಿದೆ. ಆರೋಪಿಗೆ ಮದುವೆಯಾಗಿದ್ದರೂ ಪತ್ನಿಯನ್ನು ಬಿಟ್ಟು ದುಂದುವೆಚ್ಚ, ಮೋಜಿನ ಜೀವನಕ್ಕಾಗಿ ಮನೆಗಳ್ಳತನ ಕೃತ್ಯದಲ್ಲಿ ತೊಡಗಿದ್ದ ಎಂದು ತಿಳಿಸಿದ್ದಾರೆ.

      ಬಣ್ಣ ಬಾಗಿಲು ಕಿಟಕಿ ಕೆಲಸ ಮುಗಿದು ಇನ್ನೇನು ವಾಸಕ್ಕೆ ಬರಲು ಸಿದ್ದಗೊಳ್ಳುತ್ತಿರುವ ಹೊಸ ಮನೆಗಳ ಬಳಿ ಶ್ರೀಮಂತನ ಸೋಗಿನಲ್ಲಿ ಬಾಡಿಗೆಗೆ ಮನೆ ಬೇಕೆಂದು ಅಲ್ಲಿದ್ದವರನ್ನು ವಿಚಾರಿಸಿ ಅವರಿಗೆ ಗೊತ್ತಾಗದಂತೆ ಮುಂಬಾಗಿಲಿನ ಬೀಗದ ಫೋಟೊ ಇಲ್ಲವೆ ಕೀ ಗಳಿದ್ದರೆ ಅದರಲ್ಲಿನ ಒಂದು ಕೀ ಯನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ.

       ಕದ್ದ ಕೀ ಗೆ ಮನೆಯ ವಿಳಾಸದ ಸ್ಟಿಕ್ಕರ್ ಅಂಟಿಸಿ ಸಂಗ್ರಹಿಸಿಡುತ್ತಿದ್ದ. ಐದಾರು ತಿಂಗಳ ನಂತರ ಕೀ ಕಳವು ಮಾಡಿದ ಮನೆ ಬೀಗ ಹಾಕಿದ್ದರೆ ಅದನ್ನು ಗುರುತಿಸಿ ಕಳವು ಮಾಡಿದ ಕೀ ಯನ್ನು ತೆಗೆದುಕೊಂಡು ಹೋಗಿ ಕಳವು ಮಾಡಿದ ಕುಖ್ಯಾತಿ ಹೊಂದಿದ್ದ ಇದಲ್ಲದೆ ಶ್ರೀಮಂತರ ಮನೆಯ ಕೀ ತೆಗೆಯುವುದು ಕಷ್ಟವಾದರೆ ಬೀಗದ ಫೋಟೊ ಹೊಡದುಕೊಂಡು ಆ ಕಂಪನಿಯ ವಿಳಾಸಕ್ಕೆ ಇ-ಮೇಲ್ ಕಳುಹಿಸಿ ಕೀ ಕಳೆದುಹೋಗಿದ್ದು, ಹೊಸ ಕೀ ಕಳುಹಿಸಿಕೊಡುವಂತೆ ಮನವಿ ಮಾಡುತ್ತಿದ್ದ ಕಂಪನಿಯವರು ಮಾಲೀಕರೆಂದು ಭಾವಿಸಿ ಕೀ ಕಳುಹಿಸಿದರೆ ಅದನ್ನು ಬಳಸಿ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ಚಾಲಕಿತನ ಹೊಂದಿರುವುದನ್ನು ಪ್ರಕಾಶ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link