ಬಿಜೆಪಿಯವರು ಆಕಾಶತೋರಿಸಿ ಆಡಳಿತ ನಡೆಸುವರು:- ಪಿ.ಟಿ.ಪರಮೇಶ್ವರನಾಯ್ಕ

ಹಗರಿಬೊಮ್ಮನಹಳ್ಳಿ:
 
       ಬಿಜೆಪಿಯ ನಾಯಕರು ದೇಶದ ಜನತೆಗೆ ಆಕಾಶ ತೋರಿಸಿ ಆಡಳಿತ ನಡೆಸುತ್ತಾರೆ, ಎಂದುಗೂ ರೈತಪರ ಮತ್ತು ಜನಪರ ಆಡಳಿತ ನಡೆಸಿದವರಲ್ಲ ಎಂದು ಕೌಶಲ್ಯಾಭಿವೃದಿ ಹಾಗೂ ಉದ್ಯಮಶೀಲ ಮತ್ತು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಟೀಕಿಸಿದರು.
         ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ತಾಲೂಕಿನ ಸೊನ್ನ ಗ್ರಾಮದಲ್ಲಿ ಸೋಮವಾರ ಕೈಗೊಂಡಿದ್ದ ಬಳ್ಳಾರಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರವಾಗಿ ನಡೆದ ಪ್ರಚಾರ ಸಂದರ್ಭದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮೋದಿಯೊಬ್ಬ ಮಹಾನ್ ಸುಳ್ಳುಗಾರ, ಮೋದಿ ರೈತಪರವಾಗಿ ಇದ್ದೇವೆಂದು ಹೇಳಿಕೊಂಡು ದೇಶದ ರೈತರ ಸಾಲಮನ್ನಾ ಮಾಡುವಲ್ಲಿ ನಿರ್ಲಕ್ಷ್ಯವಹಿಸಿ, ರೈತರ ಜೀವನದೊಂದಿಗೆ ಆಟವಾಡಿದರು.
   
         ಆದರೆ, ಅದೇ ನಮ್ಮ ಕಾಂಗ್ರೆಸ್ ಆಡಳಿತಾವಧಿಯಲ್ಲಿ ದೇಶದ ರೈತರ 72ಸಾವಿರ ಕೋಟಿ ರೂ.ಗಳ ಸಾಲಮನ್ನಾ ಮಾಡುವಲ್ಲಿ ಯಶಸ್ವಿಯಾಗಿತ್ತು. ಮೋದಿ ರೈತರ ಖಾತೆಗೆ 6ಸಾವಿರ ರೂ. ಹಾಕುವುದಾಗಿ ಚುನಾವಣೆ ಬಂದಾಗ ಹೇಳಿದರು, 5ವರ್ಷದ ಅವಧಿಯಲ್ಲಿ ಕೊನೆಗಳಿಗೆಯಲ್ಲಿ ರೈತರು ನೆನಪಾದರೇ ಎಂದು ಸಾರ್ವಜನಿಕರೆದುರು ಪ್ರಶ್ನೆ ಎಸೆದರು. ದೇಶದ ಬಂಡವಾಳ ಶಾಯಿಗಳ ಸಾಲಮನ್ನಾ ಮಾಡುವಲ್ಲಿ ತೋರಿಸ ಕಾಳಜಿ ರೈತರ ಬಗ್ಗೆ ತೋರಲಿಲ್ಲವೆಂದು ವ್ಯಂಗ್ಯವಾಡಿದರು.  ರಾಮಮಂದಿರ ಕಟ್ಟುತ್ತೇವೆ ಎಂದು ಹೇಳದ ಬಿಜೆಪಿಯವರಿಗೆ ಚುನಾವಣೆ ಬಂದಾಗಲೇ ರಾಮಮಂದಿರ ವಿಷಯ ನೆನಪಾಗುವುದು. 
 
         ಪುಲ್ವಾಮಾ ದಾಳಿಯಲ್ಲಿ ಮರಣಹೊಂದಿದವರ ಪರವಾಗಿ ದೇಶವೇ ಕಣ್ಣೀರು ಹಾಕಿದ್ದು, ದೇಶವೇ ದುಖಃತಪ್ತವಾಗಿದ್ದು ಯಾರು ಮರೆಯುವಂತಿಲ್ಲ. ಆದರೆ, ಇದನ್ನೇ ರಾಜಕೀಯವಾಗಿ ಬಳಸಿಕೊಂಡ ಬಿಜೆಪಿ ಮತ್ತು ನರೇಂದ್ರ ಮೋದಿ, ಪ್ರತಿದಾಳಿಮಾಡಿ ಉಗ್ರರನ್ನು ಸದೆಬಡಿದ್ದಿದ್ದು ಹೇಳಿಕೊಂಡಿದ್ದಾರೆ ಮತ್ತು ಅದಕ್ಕೆ ರಾಜಕೀಯ ಬಣ್ಣ ಕೂಡ ಬಳಿದರು ಎಂದು ಟೀಕಿಸಿದರು.
         ಈ ಲೋಕಸಭಾ ಚುನಾವಣೆಯ ಕ್ಷೇತ್ರದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಒಬ್ಬ ವಿದ್ಯಾವಂತ ರಾಗಿದ್ದು ಮತ್ತು ಜಿಲ್ಲೆಯ ನೂರೆಂಟು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಉಗ್ರಪ್ಪನವರಿಗೆ ಮತನೀಡಿ ಜಿಲ್ಲೆಯ ಅಭಿವೃದ್ಧಿಗೆ ಕಾರಣರಾಗಿ ಎಂದು ಅಭ್ಯರ್ಥಿಪರವಾಗಿ ಮತಯಾಚಿಸಿದರು.
       
         ಇದಕ್ಕೂ ಮುನ್ನ ಮೋರಗೇರಿ, ಗದ್ದಿಕೆರೆ, ಹಂಪಸಾಗರ ಮತ್ತಿತರ ಗ್ರಾಮಗಳಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅಭ್ಯರ್ಥಿ ಉಗ್ರಪ್ಪನವರ ಪರವಾಗಿ ಮತಯಾಚಿಸಿದರು.
 
         ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಐಗೋಳ್ ಚಿದಾನಂದ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವಾರದ್ ಗೌಸ್ ಮೊಹಿದ್ದೀನ್, ಜಿ.ಪಂ.ಮಾಜಿ ಸದಸ್ಯ ವಾಸು, ಗ್ರಾ.ಪಂ.ಅಧ್ಯಕ್ಷ ದುರುಗಪ್ಪ, ಹೂವಿನ ಹಡಗಲಿ ತಾ.ಪಂ.ಸದಸ್ಯ ಎಚ್.ಕೆ.ಹಾಲೇಶ್, ಮುಖಂಡರಾದ ಬಿ.ಎಂ.ಗುರುವಯ್ಯ, ತಂಬ್ರಹಳ್ಳಿ ಮಲ್ಲಣ್ಣ, ಮಲ್ಲಿಕಾರ್ಜುನಗೌಡ, ಕಾಲ್ವಿ ಹನುಮಂತಪ್ಪ, ರಾಮನಾಥ್, ಎಚ್.ಪ್ರಕಾಶ್, ಸಂಚಿ ಬಸವರಾಜ್, ಗ್ರಾ.ಪಂ.ಸದಸ್ಯರು ರಾಮಮೂರ್ತಿ, ನೀಲಪ್ಪ, ಹನುಮಂತಪ್ಪ ಮತ್ತಿತರರು ಇದ್ದರು.
 
          ‘ಪಿ.ಟಿ.ಪರಮೇಶ್ವರನಾಯ್ಕ ಅವರನ್ನು ಸ್ಟಾರ್ ಕ್ಯಾಂಪೇನರ್‍ರನ್ನಾಗಿ ಕೆಪಿಸಿಸಿ ಆಯ್ಕೆಮಾಡಿದ್ದು ಈ ಭಾಗದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹರ್ಷ ತಂದಿದೆ. ಅವರು ಪಕ್ಷದ ಬೆಳವಣಿಗೆಯೊಂದಿಗೆ, ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡುತ್ತಾ ಜನಪರ ಕೆಲಸಗಳನ್ನು ಕೈಗೊಳ್ಳುವ ಅವರಿಗೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಜವಬ್ದಾರಿಯನ್ನು ನೀಡಿದೆ. ನಾವೆಲ್ಲ ಅವರೊಂದಿಗೆ ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸುತ್ತೇವೆ.’-ಸೊನ್ನದ ಮಹೇಶ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ.   
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link