ಮತದಾನ ಜಾಗೃತಿಗಾಗಿ ಐಪಿಎಲ್ ತಾಣಗಳ ಬಳಕೆ ..!!

ಮುಂಬೈ

            ಮಹಾರಾಷ್ಟ್ರದಲ್ಲಿ ಈ ತಿಂಗಳ 11 ರಿಂದ ಆರಂಭವಾಗಲಿರುವ 4 ಹಂತಗಳ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಲ್ಲಿ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಹೆಚ್ಚು ಜನರು ಸೇರುವ ಐಪಿಎಲ್ ಪಂದ್ಯಗಳ ತಾಣವನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ.

           ಈ ಸಂಬಂಧ ಈಗಾಗಲೇ ಏಪ್ರಿಲ್-3 ರಂದು ಮುಂಬೈನ ಬಬ್ರೋರ್ನ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಒಂದು ಪ್ರಯತ್ನ ಮಾಡಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿ ತಿಳಿಸಿದ್ದಾರೆ.

           ಏಪ್ರಿಲ್-3 ರಂದು ನಡೆದ ಈ ಪಂದ್ಯದ ಸಂದರ್ಭದಲ್ಲಿ ಮತದಾರರನ್ನು ಜಾಗೃತಿಗೊಳಿಸುವ ಸಂಬಂಧ ಎಲ್ಲಾ ಪರಿಕರಗಳನ್ನು ಬಳಸಲಾಯಿತು ಎಂದು ಅವರು ಹೇಳಿದರು.

           ಕ್ರಿಕೆಟ್ ಪಂದ್ಯಗಳ ವೇಳೆ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಸಂಪರ್ಕಿಸುವಂತೆ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿತ್ತು ಎಂದು ಅವರು ತಿಳಿಸಿದರು.     

          ಮುಂಬರುವ ದಿನಗಳಲ್ಲಿ ಮುಂಬೈನಲ್ಲಿ ಆಯೋಜನೆಗೊಳ್ಳಲಿರುವ ಐಪಿಎಲ್ ಪಂದ್ಯಗಳಲ್ಲೂ ಇದೇ ಮಾದರಿಯ ಮತದಾರರ ಜಾಗೃತಿ ಪ್ರಚಾರ ಸಾಮಗ್ರಿಗಳನ್ನು ಬಳಸಲಾಗುವುದು ಎಂದು ಅವರು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link