ಲಿಬಿಯಾ ಗಲಭೆ: 21 ಮಂದಿ ಸಾವು

ಟ್ರಿಪೊಲಿ

        ಲಿಬಿಯಾದ ಟ್ರಿಪೊಲಿ ಹೊರವಲಯದಲ್ಲಿ ವಿರೋಧಿ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 21 ಜನ ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ 21 ಮಂದಿ ಮೃತಪಟ್ಟಿದ್ದಾರೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

       ಸೇನೆ ಮತ್ತು ನಾಗರೀಕರ ನಡುವಿನ ಗಲಭೆಯಿಂದ ಹಾನಿ ಸಂಭವಿಸಿದೆಯಾ ಎಂಬುದನ್ನು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿಲ್ಲ.ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಬೇಕಾಗಿದ್ದು, ಗಲಭೆಗೆ ಎರಡು ಗಂಟೆ ವಿರಾಮ ನೀಡಿ ಎಂದು ವಿಶ್ವ ಸಂಸ್ಥೆ ಹೇಳಿಕೆ ನೀಡಿದ ಬೆನ್ನಲ್ಲೇ ಲಿಬಿಯಾ ಸರ್ಕಾರದಿಂದ ಅಧಿಕೃತ ಹೇಳಿಕೆ ಹೊರಬಿದ್ದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link