ಹೂವಿನಹಡಗಲಿ
ಒಂದು ಬಾರಿ ಕೆಲವರ ಮಾತು ಕೇಳಿ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿದ್ದೆವು ಇನು ಮುಂದೆ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಸೋಮವಾರ ಕಾಂಗ್ರೆಸ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಧರ್ಮ ಒಡೆಯುವ ವಿಚಾರದಲ್ಲಿ ಕೈಹಾಕಿದ್ದಕ್ಕೆ ನಿಮ್ಮ ಬಳಿ ಕ್ಷಮೆ ಕೋರುತ್ತೇನೆ. ಧರ್ಮದಲ್ಲಿ ರಾಜಕೀಯ ಇರಬಾರದು ರಾಜಕೀಯದಲ್ಲಿ ಧರ್ಮ ಇರಬಾರದು ಎಂದು ಹೇಳಿದರು.
ವಿಪಕ್ಷನಾಯಕ ಈಶ್ವರಪ್ಪ ಸಿ.ಎಂ. ನೆಗದು ಬೀಳ್ತಾರೆ ಎಂದು ಹೇಳುತ್ತಾರೆ . ಅವರಿಗೆ ನಿಜವಾದ ಸಂಸ್ಕøತಿ ಇದೆಯಾ, ಜಿಲ್ಲೆಯಿಂದ ಬಿಜೆಪಿ. ಪಕ್ಷದಿಂದ ಹಲವಾರು ಸಂಸದರನ್ನು ಕೊಟ್ಟಿದ್ದೀರಿ ಯಾರಬ್ಬರೂ ಒಂದು ನಯಾ ಪೈಸೆ ಅಭಿವೃದ್ದಿ ಕೆಲಸವನ್ನು ಮಾಡಿಲ್ಲ. ವಿದ್ಯಾವಂತರಾದ ಉಗ್ರಪ್ಪನವರನ್ನು ಆರಿಸಿ ಕಳಿಸಿದರೆ ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಾರೆ. ಏಳನೇ ತರಗತಿ ಓದಿದ ಬಿಜಪೆಇ ಅಭ್ಯರ್ಥಿ ದೇವೇಂದ್ರಪ್ಪ ಸಂಸತ್ತಿನಲ್ಲಿ ಏನು ಮಾತನಾಡಲು ಸಾಧ್ಯ ಎಂದರು.
ಬಿ.ಎಸ್. ಯಡಿಯೂರಪ್ಪನವರು ಸಿ.ಎಂ.ಆಗ್ತಾರೆ ಎಂದು ಕನಸ್ಸು ಕಾಣುತ್ತಿದ್ದಾರೆ. ಅವರ ಕನಸ್ಸು ನನಸಾಗಲ್ಲ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ನಿಮ್ಮ ಕ್ಷೇತ್ರ ಅಭಿವೃದ್ದಿಯಾಗಬೇಕೆಂದರೆ ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಹಾಕುವುದರ ಮುಳಕ ಕಾಂಗ್ರೆಸ್ ಅಭ್ಯರ್ಥಿಯನ್ನು ಜಯಗಳಿಸಿಕೊಡಬೇಕೆಂದು ಮನವಿ ಮಾಡಿದರು.
ಸಚಿವ ಪಿ.ಟಿ. ಪರಮೇಶ್ವರನಾಯ್ಕ ಮಾತನಾಡಿ ಬಿಜೆಪಿ. ಅಭ್ಯರ್ಥಿ ದೇವೇಂದ್ರಪ್ಪನನ್ನು ಹರಕೆಯ ಕುರಿಯಾಗಿ ಬಿಟ್ಟಿದ್ದಾರೆ ಎಂದರು. ಬಿಜೆಪಿಯವರು ಚುನಾವಣಾ ಸಂದರ್ಭದಲ್ಲಿ ಕೊಟ್ಟ ಅಶ್ವಾಸನೆಗಳನ್ನು ಇದುವರೆಗೂ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷ ಬಡವರ್ಗದ ಜನತೆಗೆ ಉಚಿತವಾಗಿ ಅಕ್ಕಿ, ಕ್ಷೀರಭಾಗ್ಯದಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಲೋಕ ಸಭೆ ಅಭ್ಯರ್ಥಿ ಉಗ್ರಪ್ಪ, ಮಾಜಿ ಶಾಸಕ ಶಿರಾಜ್ ಶೇಖ್, ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಮಹಿಳಾ ಘಟಕ ದ ಅಧ್ಯಕ್ಷೆ ಆಶಾಲತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ್ ಚಿದಾನಂದ, ಪರಮೇಶ್ವರಪ್ಪ, ಜೆ.ಡಿ.ಎಸ್. ಪರಾಜಿತ ಅಭ್ಯರ್ಥಿ ಕೆ.ಪುತ್ರೇಶ, ಒ.ಬಿಸಿ. ಜಿಲ್ಲಾಧ್ಯಕ್ಷ ಸೊನ್ನದ ಮಹೇಶ, ತಾಲೂಕ ಅಧ್ಯಕ್ಷ ಜಿ.ಶಿವಕುಮಾರಗೌಡ,ವಾರದ ಗೌಸ್ ಮೊಹಿದ್ದೀನ್, ಅರವಳ್ಳಿ ವೀರಣ್ಣ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಂಜುನಾಥ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
