ದೇಶದ ಆರ್ಥಿಕ ವ್ಯವಸ್ಥೆ ಹಾಳು ಮಾಡಿದ ಮೋದಿ ಆಡಳಿತ : ರಾಹುಲ್ ಗಾಂಧಿ

ಚಿತ್ರದುರ್ಗ

       ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐದು ವರ್ಷಗಳ ಅವಧಿಯಲ್ಲಿ ಏನನ್ನೂ ಸಾಧನೆ ಮಾಡಿಲ್ಲ. ಬದಲಾಗಿ ದೇಶದ ಅರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಲ್ಲಿ ಗಂಭೀರ ಆರೋಪ ಮಾಡಿದ್ದಾರೆ

         ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಪರವಾಗಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಭಾಷಣದ ಉದ್ದಕ್ಕೂ ಮೋದಿ ಅವರ ಆರ್ಥಿಕ ನೀತಿ, ಸುಳ್ಳು ಭರವಸೆ, ಉದ್ಯಮಿಗಳ ಜೊತೆಗಿನ ಸೌಖ್ಯ ಬೆಳೆಸಿರುವ ವಿಚಾರ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು

        ಐದು ವರ್ಷಗಳಲ್ಲಿ ಮೋದಿ ಚೌಕಿದಾರ್ ಆಗಿ ಒಡಾಡುತ್ತಿದ್ದಾರೆ. ಅವರೊಬ್ಬ ಸ್ವಯಂ ಘೋಷಿತ ಚೌಕಿದಾರ್. ತನ್ನಷ್ಟಕ್ಕೆ ತಾನು ಚೌಕಿದಾರ್ ಎಂದು ಹೇಳಿಕೊಳ್ಳುತ್ತಿದ್ದರೆ, ಇತ್ತ ಜನ ಮೋದಿ ಚೌಕಿದಾರ್ ಅಲ್ಲ, ಚೋರ್ ಹೈ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ, ರೈತರಿಗೆ ಬೆಂಬಲ ಬೆಲೆ ಕೊಡುತ್ತೇನೆ ಜೊತೆಗೆ ಪ್ರತಿಯೊಬ್ಬ ನಾಗರೀಕರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಹೇಳಿದ್ದ ಮೋದಿ, ಏಕಾ ಏಕಿ ನೋಟು ಅಮಾನ್ಯೀಕರಣ ಮಾಡಿದರು. ಕೇವಲ ಐದು ವರ್ಷಗಳಲ್ಲಿ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿದರೆಂದು ಆರೋಪಿಸಿದರು

         ಮೋದಿ ಇಲ್ಲಿಯವರೆಗೆ ಯಾರಾದರೂ ಬಡವರನ್ನು, ನಿರುದ್ಯೋಗಿ ಯುವಕರನ್ನು ಅಪ್ಪಿಕೊಂಡಿದ್ದನ್ನು ನೀವು ನೋಡಿದ್ದೀರಾ ? ಎಂದು ಕೇಳಿದ ರಾಹುಲ್ ಗಾಂಧಿ, ಮೋದಿ ಅವರು ಅದಾನಿ, ಅಂಬಾನಿಯಂತಹವರನ್ನು ಮತ್ತು ಭ್ರಷ್ಟರನ್ನು ಅಪ್ಪಿಕೊಳ್ಳುತ್ತಾರೆ. ಈ ಚೌಕಿದಾರ್ ಕೇವಲ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆಯೇ ಹೊರೆತು ರೈತರ ಯಾವ ಸಾಲವನ್ನೂ ಮನ್ನಾ ಮಾಡಿಲ್ಲವೆಂದರು

          ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಚೌಕಿದಾರನ ತರ ಮಾತನಾಡಲ್ಲ. ನಾನು ಮನ್ ಕೀ ಬಾತ್ ಹೇಳಲೂ ಬಂದಿಲ್ಲ. ನಿಮ್ಮ ಮನ್ ಕೀ ಬಾತ್ ಕೇಳಲು ಬಂದಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಟ್ಟ ಭರವಸೆಗಳನ್ನು ಈಡೇರಿಸಿಯೇ ತೀರುತ್ತೇವೆ ಎಂದರು
ದೇಶದಲ್ಲಿ ಬಡತನ ನಿಮೂರ್ಲನೆಗೆ ಕ್ರಮ ಕೈಗೊಳ್ಳುತ್ತೇವೆ. ಭಾರತದ ಪ್ರತಿ ಬಡಜನರ ಕುಟುಂಬಕ್ಕೆ ವಾರ್ಷಿಕ 72 ಸಾವಿರ ರೂಪಾಯಿಗಳಂತೆ ಐದು ವರ್ಷದಲ್ಲಿ 3.60 ಲಕ್ಷ ರೂಪಾಯಿಗಳನ್ನು ಕೊಡುತ್ತೇವೆ. ಈ ಮೊತ್ತವನ್ನು ಕುಟುಂಬದ ಮಹಿಳೆಯ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುತ್ತೇವೆ. ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ರೈತರಿಗಾಗಿಯೇ ಪ್ರತ್ಯೇಕ ಬಜೆಟ್‍ನ್ನು ಮಂಡಿಸಲಾಗುವುದು ಎಂದು ನುಡಿದರು

          ಮೋದಿ ಅವರ ಜೊತೆ ಐದು ಮಂದಿ ಶ್ರೀಮಂತರಿದ್ದಾರೆ. ಅವರ ಪರವಾಗಿಯೇ ಕೆಲಸ ಮಾಡುತ್ತಾರೆ. ನೋಟ್ ಬ್ಯಾನ್ ಮಾಡುವ ಮೂಲಕ ಸಾಮಾನ್ಯ ಜನರ ಬಳಿ ಇದ್ದ ಹಣವನ್ನು ಶ್ರೀಮಂತರಿಗೆ ಕೊಟ್ಟಿದ್ದಾರೆ. ಅಂಬಾನಿ, ಅದಾನಿಯಂತಹವರು ಹೊತ್ತು ಹೊಗಿರುವ ಹಣವನ್ನು ಮತ್ತೆ ಜನರ ಕೈಗೆ ತಲುಪಿಸುವ ಕೆಲಸ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದರು

             ನಲವತ್ತು ವರ್ಷದಲ್ಲಿ ಅತೀ ಹೆಚ್ಚು ನಿರುದ್ಯೋಗ ಸಮಸ್ಯೆ ಈಗ ಸೃಷ್ಟಿಯಾಗುತ್ತಿದೆ. ಸರ್ಕಾರಿ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆ ಖಾಲಿ ಇದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದೇ ವರ್ಷದಲ್ಲಿ ಈ ಹುದ್ದೆಯನ್ನು ತುಂಬುವ ಕೆಲಸ ಮಾಡುತ್ತೇವೆ ಎಂದರು
ಕೇಂದ್ರದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ರಾಜಕೀಯದಲ್ಲಿ ಮತ್ತು ಉದ್ಯೋಗದಲ್ಲಿ ಶೇ 33% ಮೀಸಲಾತಿಯನ್ನು ನಾನು ತರುತ್ತೇನೆ ಎಂದು ಘೊಷಣೆ ಮಾಡುತ್ತೆನೆ.

         ಪ್ರತೀ ಪಂಚಾಯಿತಿಯಲ್ಲು ಯುವಕರಿಗೆ ಉದ್ಯೊಗ ಸಿಗುವಂತೆ ಮಾಡುತ್ತಿದ್ದೆನೆ. ಬುಡಕಟ್ಟು ಅದಿವಾಸಿ ಜನರಿಗೆ ಭೂಮಿಯ ವಿಚಾರವಾಗಿ ಹೋರಾಟ ಮಾಡಿದ್ದೇನೆ.ದಲಿತರ ಹಣವನ್ನು ಬೇರೆಡೆಗೆ ಖರ್ಚು ಮಾಡುತ್ತಿದ್ದಾರೆ.ಅದನ್ನು ನಾನು ಅಧಿಕಾರಕ್ಕೆ ಬಂದ ಮೇಲೆ ದಲಿತರಿಗೆ ಖರ್ಚು ಮಾಡುವಂತೆ ಕಾನೂನು ಮಾಡುತ್ತೆನೆ.ಚುನಾವಣೆಯ ಹೋರಾಟ ಸಾತ್ವಿಕ ಹೋರಾಟ, ಮತ್ತೊಂದು ಕಡೆ ಪ್ರೀತಿ ವಿಶ್ವಾಸದ ಹೋರಾಟವಿದೆ. ಅಲ್ಲಿ ದ್ವೇಷ ಇಂತಹ ಹೋರಾಟ ನಡೆಯುತ್ತಿದೆ. ಚುನಾವಣೆಅನಿಲ್ ಅಂಬಾನಿ ಮತ್ತು ಸಾಮಾನ್ಯ ಜನರ ನಡುವೆ ನಡೆಯುತ್ತಿದೆ ಎಂದು ತಿಳಿಸಿದರು.

          ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಹೆಚ್.ಆಂಜನೇಯ, ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್, ಶಿವಮೂರ್ತಿನಾಯಕ್,ಸೋಮ್ಲಾನಾಯಕ್,ತಿಮ್ಮರಾಯಪ್ಪ, ವಿದಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜು, ಜಲಜಾನಾಯಕ್, ಮುಖಂಡರಾದ ಹನುಮಲಿ ಷನ್ಮುಖಪ್ಪ, ಜಿ.ಎಸ್.ಮಂಜುನಾಥ್, ಆರ್.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಇನ್ನಿತರರು ಉಪಸ್ಥಿತರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link