ಕೊಟ್ಟೂರು
ಮೈತ್ರಿ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಬಳ್ಳಾರಿ ಕಡೆ ಮತ್ತೊಮ್ಮೆ ತಲೆ ಹಾಕಿ ಮಲದಂತೆ ಜಿಲ್ಲೆಯ ಮತದಾರರು ತಕ್ಕಪಾಠ ಕಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕರೆ ನೀಡಿದರು.
ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಪದಾಧಿಕಾರಿಗಳ ಸಭೆಗೆ ಚಾಲನೆ ನೀಡಿ ಮಾತನಾಡಿದರು.ಬಳ್ಳಾರಿ ಜನರ ಸಮಸ್ಯೆ ಆಲಿಸುವಂತ ವ್ಯಕ್ತಿ ಬೇಕು. ಅಹಂಕಾರದ ವ್ಯಕ್ತಿ ನಿಮಗೆ ಬೇಕಿಲ್ಲ. ವೈ. ದೇವೇಂದ್ರಪ್ಪ ಸರಳ ಮನೋಭಾವದ ವ್ಯಕ್ತಿ. ಜಿಲ್ಲೆಯ ಜನರ ನಾಡಿಮಿಡಿತ ಗೊತ್ತಿದ್ದೆ. ಅದಕ್ಕಾಗಿ ಜಿಜೆಪಿ ಪಕ್ಷ ದೇವೇಂದ್ರಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೇಸ್ ಪಕ್ಷ ಜಾತಿ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದೆ. ಕುಟುಂಬದ ಹಿತಕ್ಕಾಗಿ ಜೆಡಿಎಸ್ ರಾಜಕಾರಣ ಮಾಡುತ್ತಿದೆ. ಆದರೆ ಬಿಜೆಪಿಯು ಈ ದೇಶದ ಜನರ ಅಭಿವೃದ್ದಿಗಾಗಿ, ರಕ್ಷಣೆಗಾಗಿ ಸದಾ ಶ್ರಮಿಸುತ್ತದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಈ ದೇಶದಲ್ಲಿ ಪದ್ಮಶ್ರೀ ಎಂಬ ಶ್ರೇಷ್ಟ ಪ್ರಶಸ್ತಿ ಮೊದಲ್ಲೆಲ್ಲಾ ರಾಜಕೀಯ ಪ್ರಭಾವವಿರುವವರ ಪಾಲಗುತ್ತಿತು. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಮಾನ್ಯ ಜನರಿಗೂ ಈ ಪ್ರಶಸ್ತಿ ಸಿಗುವಂತೆ ಮಾಡಿದೆ ಹೆಮ್ಮೆ ಬಿಜೆಪಿ ಪಕ್ಷದ್ದು ಎಂದರು.ಮಾಜಿ ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗ, ಪ್ರಸ್ತತ ಲೋಕಸಭಾ ಚುನಾವಣೆ ದೇಶ ಭಕ್ತರು ಮತ್ತು ದೇಶ ದ್ರೋಹಿಗಳ ನಡುವೆ ನಡೆಯುವ ಮಹತ್ವದ ಚುನಾವಣೆಯಾಗಿದೆ ಎಂದು ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷದ ಹೆಸರೇಳದೆ ಪರೋಕ್ಷವಾಗಿ ಟೀಕಿಸಿದರು.
ಕಾನೂನು ತಜ್ಞ, ಬುದ್ದಿವಂತ, ಮಾತಿನ ಚತುರ ಎಂದು ಹೇಳುವ ಉಗ್ರಪ್ಪ ಏ 18 ರಂದು ನಡೆದ ಚುನಾವಣೆಯಲ್ಲಿ ಮತ ಚಲಾಯಿಸದೆ ಇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಟೀಕಿಸಿದರು.ಮಾಜಿ ಶಾಸಕ ನೇಮಿರಾಜ್ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಪಿ. ಚನ್ನಬಸವನಗೌಡ ಪಾಟೀಲ್, ಜಿ.ಪಂ.ಸದಸ್ಯೆ ಪಿಹೆಚ್. ಉಮಾದೇವಿ ಕೊಟ್ರೇಶ್ ಮಾತನಾಡಿದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ನೇರೆಗಲ್ ಕೊಟ್ರೇಶ್, ಶೆಟ್ಟಿ ತಿಂದಪ್ಪ, ಓದೋ ಗಂಗಪ್ಪ, ಪೂಜಾಪ್ಪ, ಕೊಟ್ರೇಶ್ ಲಲಿತಾಬಾಯಿ ಸ್ವಾಮಿ, ಜಿ. ತಿಪ್ಪೇಸ್ವಾಮಿ, ಪಪಾನಾಯ್ಕ್, ಕೋಡಿಹಳ್ಳಿ ಭೀಮಪ್ಪ, ಹರಾಳು ಗುರುಮೂರ್ತಿ, ಗ್ರಾ.ಪಂ.ಉಪಾಧ್ಯಕ್ಷ ಪಿಹೆಚ್. ಅಂಜನೇಯ, ಹರಾಳು ಅಶೋಕ್, ಜಿ.ಪಂ. ಮಾಜಿ ಸದಸ್ಯ ಪಂಪಣ್ಣ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ