ಅಪಾರ್ಟ್‍ಮೆಂಟ್‍ನ ಒಂಬತ್ತನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ..!!!

ಬೆಂಗಳೂರು

        ವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯ ನಗರದ ಹೊರವಲಯದ ಸೂರ್ಯನಗರಪೊಲೀಸ್ ಠಾಣಾ ವ್ಯಾಫ್ತಿಯಲ್ಲಿ ನಡೆದಿದೆ.

        ಸೂರ್ಯನಗರದ ರಾಮಕೃಷ್ಣಾಪುರದಲ್ಲಿನ ಅಶ್ವಿನಿ ಸಿತಾರ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದ ಪ್ರಿಯಾಂಕ ಪಾಲ್(17) ಮೃತ ವಿದ್ಯಾರ್ಥಿನಿ. ಪ್ರಿಯಾಂಕ ಹೆಬ್ಬಗೋಡಿ ಸಮೀಪದ ಸೆಂಟ್ ಫ್ರಾನ್ಸಿಸ್ ಡಿ ಸೇಲ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು. ಗುರುವಾರ ಬೆಳಗ್ಗೆ 8 ಗಂಟೆ ಸಮಯದಲ್ಲಿ ಅಪಾರ್ಟ್‍ಮೆಂಟ್ ಟೆರೆಸ್ ಮೇಲೆ ವ್ಯಾಯಾಮ ಮಾಡಲು ಹೋಗಿದ್ದಳು.

        ಸ್ವಲ್ಪ ಸಮಯದ ನಂತರ ಅಕ್ಕಪಕ್ಕದ ನಿವಾಸಿಗಳಿಗೆ ದೊಡ್ಡ ಶಬ್ದ ಕೇಳಿಸಿದ್ದು, ಕೆಳಗೆ ನೋಡಿದರೆ ಪ್ರಿಯಾಂಕ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಳು. ಅಪಾರ್ಟ್‍ಮೆಂಟ್ ಟೆರೆಸ್ ಮೇಲೆ ಇದ್ದ ನೀರಿನ ಪೈಪ್ ಗಳು ವ್ಯಾಯಾಮ ಮಾಡುವಾಗ ಕಾಲಿಗೆ ಸಿಕ್ಕಿ ಕೆಳಗೆ ಬಿದ್ದಿದ್ದಾಳೆ ಎಂದು ಮೃತಳ ತಂದೆ ಅಂಜನ್ ಕುಮಾರ್ ಪಾಲ್ ತಿಳಿಸಿದ್ದಾರೆ.

      ಅಪಾರ್ಟ್‍ಮೆಂಟ್ ನಿವಾಸಿಗಳು ಮಾತ್ರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಟೆರೆಸ್ ಸುತ್ತ ನಾಲ್ಕು ಅಡಿ ತಡೆಗೋಡೆ ಇದೆ. ಹೀಗಾಗಿ ಪ್ರಿಯಾಂಕ ಪಾಲ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಘಟನೆ ನಡೆದ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link