ಉದ್ಯೋಗ ಮೇಳದ ಸಾರ್ಥಕತೆಯನ್ನು ನಿರುದ್ಯೋಗ ಯುವಕರು ಪಡೆದುಕೊಳ್ಳಿ : ಬಿ. ಪಂಪಾಪತಿ

ಕೊಟ್ಟೂರು

    ನಿರುದ್ಯೋಗಿ ಯುವಕರಿಗೆ ಉದ್ಯೋಗಮೇಳ ದೊಡ್ಡ ಆಸರೆಯಾಗಿದ್ದು ಇದನ್ನು ಸಮರ್ಥವಾಗಿ ಸಾರ್ಥಕಪಡಿಸಿಕೊಳ್ಳಬೇಕು. ಕೊಟ್ಟೂರು ತಾಲೂಕಿನ ಖಾಸಗಿಶಾಲಾ ಆಡಳಿತ ಮಂಡಳಿ ಮತ್ತು ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಬಳಗ ಅಸ್ತಿತ್ವಕ್ಕೆ ಬಂದ ಹೊಸದರಲ್ಲಿ ಪಟ್ಟಣದ ಇಂದು ಮಹಾವಿದ್ಯಾಲಯದ ಸಿ.ಬಿ.ಎಸ್.ಇ ಶಾಲೆಯಲ್ಲಿ ಇದಕ್ಕೆಂದೆ ನಿಯಮಿತವಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಕೊಟ್ಟೂರು ತಾಲೂಕು ಖಾಸಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ. ಪಂಪಾಪತಿ ಕರೆ ನೀಡಿದರು.

      ಪಟ್ಟಣದ ಇಂದು ಸಿ.ಬಿ.ಎಸ್.ಇ ಶಾಲೆಯಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ ಉದ್ಯೋಗ ಮೇಳ 2019ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯೋಗ ಮೇಳದಲ್ಲಿ ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕ ತರಬೇತಿ ಪಡೆದವರು, ಕಂಪ್ಯೂಟರ್ ಆಪರೇಟರ್, ವಾರ್ಡನ್, ಸ್ಪೋಕನ್ ಇಂಗ್ಲೀಷ್, ಡ್ರಾಯಿಂಗ್, ಕರಾಟೆ, ಸ್ಕೇಟಿಂಗ್, ಡ್ಯಾನ್ಸ್, ಡ್ರಾಮಾ, ಸಂಗೀತ, ಯೋಗ, ಕ್ರಾಪ್ಟ್, ಬಸ್ ಡ್ರೈವರ್, ಅಟೆಂಡರ್, ಅಡುಗೆ ಸಹಾಕರ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿತ್ತು.

      ಬಾಗಲಕೋಟೆ, ದಾವಣಗೇರೆ, ಕೊಪ್ಪಳ, ಬಳ್ಳಾರಿ, ಮತ್ತು ಇತರೆ ಜಿಲ್ಲೆಗಳ ಪ್ರತಿಷ್ಠಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳಪ್ರತಿನಿಧಿಗಳು ಭಾಗವಹಿಸಿದ್ದರು. ಉದ್ಯೋಗಕಾಂಕ್ಷಿಗಳಿಗೆ ಈ ಮೇಳದಲ್ಲಿ ಸಾಕಷ್ಟು ಅವಕಾಸ ದೊರಕಿತು. ಮತ್ತು ಉದ್ಯೋಗ ಮೇಳದಲ್ಲಿ ಯೂನಿಫಾರ್ಮ್ ಸಪ್ಲೇಯರ್ಸ್, ಪೈನಾನ್ಸ್ ಸಂಸ್ಥೆಗಳು, ಶಾಲಾ ಬಸ್‍ಕಂಪನಿಗಳು, ಪಬ್ಲಿಷರ್ಸ್, ಶಾಲೆಗ ಸಂಬಂಧಿಸಿದ ವಿತರಕರು ಪಾಲ್ಗೊಂಡಿದ್ದರು. ಖಾಸಗಿ ಶಾಲಾ ಆಡಳಿತ ಮಂಡಳಿಯ ಹರ್ಷ, ಕೊಟ್ರೇಶ್, ಸಿ.ಬಸವರಾಜ್, ವಿಜಯಲಕ್ಷ್ಮೀ ಮತ್ತಿತರರು ಪಾಲ್ಗೊಂಡಿದ್ದರು.ಪ್ರಾಂಶುಪಾಲ ಹೆಚ್.ಎನ್ ವೀರಭದ್ರಪ್ಪ ನಿರೂಪಿಸಿದರು. ನಿಂಬಳಗೇರಿ ವೀರಣ್ಣ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link